ಕೆಆರ್‌ಎಸ್ ಭರ್ತಿಗೆ ಕ್ಷಣಗಣನೆ: ಬುಧವಾರ ಸಿಎಂ ಬಾಗಿನ
ಮಂಡ್ಯ, ಆ.5: ಬೆಂಗಳೂರು, ಮೈಸೂರು, ಮಂಡ್ಯಕ್ಕೆ ನೀರು ಒದಗಿಸುವ ಕೆಆರ್‌ಎಸ್ ಜಲಾಶಯ ಭರ್ತಿಯಾಗಲೂ ಇನ್ನು ಎರಡು ಅಡಿ ಮಾತ್ರ ಬಾಕಿ ಇದೆ.
124 ಅಡಿ ಎತ್ತರದ ಜಲಾಶಯದಲ್ಲಿ ಈಗ 122 ಅಡಿ ನೀರು ಸಂಗ್ರಹವಾಗಿದ್ದು 36,157 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು ಆ.6 ಬುಧವಾರ ಜಲಾಶಯ ಭರ್ತಿಯಾಗಲಿದೆ.
ಜಲಾಶಯ ಭರ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಕೆಆರ್‌ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ.[ಭರ್ತಿಯಾಗಿರುವ ತುಂಗಭದ್ರಾ ಜಲಾಶಯ ಹೇಗಿದೆ]

ತಮಿಳುನಾಡಿಗೆ ಕಾವೇರಿ ನೀರು ಬಂದ್: ಕೆಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುವುದನ್ನು ಸೋಮವಾರ ಮಧ್ಯಾಹ್ನದಿಂದ ನಿಲ್ಲಿಸಲಾಗಿದೆ. ಜಲಾಶಯ ಭರ್ತಿಯಾಗದೇ ಕಾವೇರಿ ನೀರನ್ನು ಬಿಡುಗಡೆ ಮಾಡಿದಕ್ಕೆ ಮಂಡ್ಯದಲ್ಲಿ ಈ ಹಿಂದೆ ರೈತರು ಪ್ರತಿಭಟನೆ ನಡೆಸಿದ್ದರು.[ಕದ್ದುಮುಚ್ಚಿ ತಮಿಳುನಾಡಿಗೆ ನೀರು: ರೈತರ ಪ್ರತಿಭಟನೆ]
ಜಲಾಶಯ ಭರ್ತಿಯಾದ ಬಳಿಕ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದಕ್ಕೆ ಅಭ್ಯಂತರವಿಲ್ಲ. ಭರ್ತಿಯಾಗದೇ ನೀರು ಬಿಡುವುದಕ್ಕೆ ರೈತರ ವಿರೋಧವಿದೆ ಎಂದು ಮಂಡ್ಯ ಸಂಸದ ಪುಟ್ಟರಾಜು ಅವರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ ಹಿನ್ನಲೆಯಲ್ಲಿ ಜಲಾಶಯದಿಂದ ತಮಿಳುನಾಡಿಗೆ ಹರಿಸುತ್ತಿದ್ದ ನೀರನ್ನು ಸೋಮವಾರದಿಂದ ನಿಲ್ಲಿಸಲಾಗಿದೆ.












Click it and Unblock the Notifications