ರಾಜ್ಯದ ಪ್ರವಾಸಿ ತಾಣಗಳಿಗೆ ಕಾರ್ಪೊರೇಟ್ ಶ್ರೀರಕ್ಷೆ

ಬೆಂಗಳೂರು, ಜುಲೈ 17: ರಾಜ್ಯದ ಪ್ರವಾಸಿ ತಾಣಗಳಿಗೆ ಪಾಲನೆ, ಪೋಷಣೆ, ಅಭಿವೃದ್ಧಿ ಹೊಣೆ ಹೊರಲು ಸಿದ್ಧ ಎಂದು ಕಾರ್ಪೊರೇಟ್ ಸಂಸ್ಥೆಗಳು ಮುಂದೆ ಬಂದಿವೆ. ರಾಜ್ಯ ಸರ್ಕಾರ ಪ್ರಕಟಿಸಿದ ನೂತನ ಪ್ರವಾಸೋದ್ಯಮ ನೀತಿಗೆ ಅನುಗುಣವಾಗಿ ಕಾರ್ಪೊರೇಟ್ ಸಂಸ್ಥೆಗಳು ಕಾರ್ಯನಿರ್ವಹಿಸಲಿವೆ.

ಈ ಯೋಜನೆಯ ಮೂಲಕದ ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳು ಹಣ ತೊಡಗಿಸಲಿವೆ. ಈ ಕುರಿತಂತೆ ರಾಜ್ಯ ಸರ್ಕಾರ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. [ಭಾರತದ ಕರೆನ್ಸಿ ಮೌಲ್ಯ ಹೆಚ್ಚಿಸಲಿದೆ ಹಂಪಿ ಕಲ್ಲಿನ ರಥ ]

ಪ್ರವಾಸೋದ್ಯಮ ಇಲಾಖೆ 2015 ರಿಂದ 2020 ತನಕ ಅನ್ವಯವಾಗುವಂತೆ ನೂತನ ನೀತಿಯನ್ನು ಪ್ರಕಟಿಸಿದೆ. ಕಾರ್ಪೊರೇಟ್ಸ್ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಇಲಾಖೆ ನೋಡಲ್ ಕೇಂದ್ರಗಳಲ್ಲಿ ಒಪ್ಪಂದ ಮಾಡಿಕೊಂಡ ಮೇಲೆ ಮುಂದಿನ ನಡೆ ಇಡಬಹುದಾಗಿದೆ. [ಬಾದಾಮಿಗೆ 22 ಕೋಟಿ ಅನುದಾನ]

ಸುಮಾರು 46 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, ಈ ಪೈಕಿ ರಂಗನತಿಟ್ಟು, ಬೇಲೂರು-ಹಳೆಬೀಡು, ಲಾಲ್ ಬಾಗ್ ಹೆಚ್ಚಿನ ಬೇಡಿಕೆ ಪಡೆದುಕೊಂಡ ತಾಣಗಳಾಗಿವೆ.

Corporates to adopt six tourist destinations in Karnataka

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ: ಸರ್ಕಾರದ ಯೋಜನೆಗೆ ಹಣ ತೊಡಗಿಸುವುದಷ್ಟೇ ಸಂಸ್ಥೆಗಳ ಕೆಲಸವಲ್ಲ. ಯೋಜನೆಯ ಜೊತೆ ಜೊತೆಗೆ ಕಾರ್ಯನಿರ್ವಹಿಸಲಿವೆ. ಐದು ವರ್ಷಗಳ ಕಾಲ ಬಂಡವಾಳ ಹೂಡಿಕೆ ಹಾಗೂ ನಿರ್ವಹಣೆ ಸಂಸ್ಥೆಗಳ ಮೇಲಿರುತ್ತದೆ.

ಸದ್ಯಕ್ಕೆ ಆರು ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಪೈಕಿ ಬಯೋಕಾನ್ ಜೈವಿಕ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಅವರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಶೌಚಾಲಯ ನಿರ್ಮಿಸುವ ಭರವಸೆ ನೀಡಿದ್ದಾರೆ. [ಕೆಎಸ್‌ಟಿಡಿಸಿ ಟೂರ್ ಪ್ಯಾಕೇಜ್ ವಿವರಗಳು]

ದಾವಣಗೆರೆಯ ಶಾಂತಿ ಸಾಗರ್ ನಲ್ಲಿರುವ ಯಾತ್ರಿ ನಿವಾಸ್ ವ್ಯವಸ್ಥೆ, ಚಾಮರಾಜನಗರದ ಮಧ್ಯರಂಗ ದೇಗುಲ, ಗದಗದ ಲಕ್ಕುಂಡಿ, ಬಾಗಲಕೋಟೆಯ ಐಹೊಳೆ, ಬೆಳಗಾವಿ ಹೋಟೆಲ್ ಮಯೂರ ಮಲಪ್ರಭ, ವಿಜಯಪುರದ ತೆಲಗಿಯಲ್ಲಿರುವ ವೇಸೈಡ್ ವ್ಯವಸ್ಥೆ ಹಾಗೂ ಕಲಬುರಗಿಯ ಗಾಣಗಪುರ ಈಗ ಖಾಸಗಿ ಸಂಸ್ಥೆಯ ನಿರ್ವಹಣೆಗೆ ಒಳಪಡಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+