ಚಾಲುಕ್ಯರ ರಾಜಧಾನಿ ಬಾದಾಮಿಗೆ 22 ಕೋಟಿ ಅನುದಾನ
ಬೆಂಗಳೂರು, ಜ, 22: ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಸ್ಥಳ ಬಾದಾಮಿ ಸೇರಿದಂತೆ 12 ಪಾರಂಪರಿಕ ತಾಣಗಳನ್ನು ಅಭಿವೃದ್ಧಿ ಪಡಿಸಿ ಕಾಪಾಡಲು ಕೇಂದ್ರ ಸರ್ಕಾರ 'ಹೃದಯ್' ಹೆಸರಿನಲ್ಲಿ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಬಾದಾಮಿ ರಕ್ಷಣೆಗೆ 22 ಕೋಟಿ ರೂ. ಮೀಸಲಿಡಲಾಗಿದೆ.
ನೂತನ ಯೋಜನೆಯನ್ನು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ನವದೆಹಲಿಯಲ್ಲಿ ಲೋಕಾರ್ಪಣೆ ಮಾಡಿದರು. ಸಾಂಸ್ಕೃತಿಕ ಪರಂಪರೆ ಮತ್ತು ಸದ್ಯದ ಸ್ಥಿತಿ ಆಧರಿಸಿ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.[ಯಾತ್ರಿಗಳ ಗಮನಕ್ಕೆ : ಮಾನಸ ಸರೋವರಕ್ಕೆ ಹಾದಿ ಸುಗುಮ!]

ಬಾದಾಮಿ ಸೇರಿದಂತೆ ವಾರಣಾಸಿ ಅಜ್ಮೀರ್, ಅಮೃತಸರ, ಅಮರಾವತಿ, ದ್ವಾರಕಾ, ಗಯಾ, ವಾರಂಗಲ್, ಪುರಿ, ಕಾಂಚೀಪುರಂ, ಮಥುರಾ, ಮದುರೈ ಮತ್ತು ವೇಲಾಂಕಣಿಗೂ ವಿಶೇಷ ಅನುದಾನ ನೀಡಲಾಗುತ್ತಿದೆ. ವಾರಣಾಸಿ 90 ಕೋಟಿ ರೂ. ಅನುದಾನ ಪಡೆದುಕೊಂಡಿದೆ. ನಗರಗಳು ಪ್ರವಾಸೋದ್ಯಮ ಬೆಳವಣಿಗೆಯಲ್ಲೂ ಮುಖ್ಯ ಪಾತ್ರ ವಹಿಸುವುದರಿಂದ ಯೋಜನೆಗೆ ಮನ್ನಣೆ ಸಿಗಲಿದೆ ಎಂದು ನಾಯ್ಡು ಹೇಳಿದರು.
ಇಂಥ ಸ್ಥಳಗಳ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ನಾಗರಿಕರು ಮತ್ತು ಎನ್ ಜಿಒಗಳು ಯೋಜನೆಯಲ್ಲಿ ಕೈ ಜೋಡಿಸಬೇಕು. ಪಾರಂಪರಿಕ ತಾಣದ ರಕ್ಷಣೆ ಹೊಣೆ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.












Click it and Unblock the Notifications