ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಕರೆನ್ಸಿ ಮೌಲ್ಯ ಹೆಚ್ಚಿಸಲಿದೆ ಹಂಪಿ ಕಲ್ಲಿನ ರಥ

|
Google Oneindia Kannada News

ಬೆಂಗಳೂರು, ಜು. 17: ರಾಜ್ಯದ ವಾಸ್ತುಶಿಲ್ಪ ಸಂಸ್ಕೃತಿಯನ ಪ್ರತೀಕಕ್ಕೆ ಭಾರತದ ನೋಟಿನ ಮೇಲೆ ಸ್ಥಾನ ಸಿಗಲಿದೆ. ವಿಶ್ವಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಹಂಪಿ ಕಲ್ಲಿನ ರಥ ಇನ್ನು ಮುಂದೆ 10 ರು. ನೋಟಿನಲ್ಲಿ ರಾರಾಜಿಸಲಿದೆ.

ದೇಶದ ಆಯ್ದ ಎಂಟು ಸ್ಮಾರಕಗಳ ಚಿತ್ರಗಳನ್ನು ನಾನಾ ಮುಖಬೆಲೆಯ ನೋಟುಗಳಲ್ಲಿ ಮುದ್ರಿಸಲು ರಿಸರ್ವ್ ಬ್ಯಾಂಕ್ ತೀರ್ಮಾನ ಮಾಡಿದೆ. ನವದೆಹಲಿ ಕೆಂಪುಕೋಟೆ (ರಾಷ್ಟ್ರಧ್ವಜ ಸಹಿತ), ಕೊನಾರ್ಕ್‌ನ ಸೂರ್ಯ ದೇಗುಲ, ಆಗ್ರಾದ ತಾಜ್‌ಮಹಲ್ (ಮುಂಭಾಗ), ಗೋವಾದ ಪುರಾತನ ಚರ್ಚ್ ಮತ್ತು ಕಾನ್ವೆಂಟ್ಸ್ , ಅಜಂತಾ ಗುಹಾಲಯ ಮತ್ತು ಗುಹಾಲಯದ ಪದ್ಮಪಾಣಿ ಚಿತ್ರಗಳು, ಭಾರತದ ನೋಟುಗಳಲ್ಲಿ ಸ್ಥಾನ ಪಡೆದುಕೊಳ್ಳಲಿವೆ.[ಹಂಪಿ ಇತಿಹಾಸವೇ ಬೇರೆ...ವಿಜಯಗರದ ಇತಿಹಾಸವೇ ಬೇರೆ...]

hampi

ಯಾವ ನೋಟಲ್ಲಿ ಯಾವ ಸ್ಮಾರಕದ ಚಿತ್ರ?
ಪ್ರಾಥಮಿಕ ಯೋಜನೆ ಅನ್ವಯ ಹೊಸ ವಿನ್ಯಾಸದ 10 ರೂ. ಮುಖ ಬೆಲೆಯ ನೋಟಿನಲ್ಲಿ ಹಂಪಿ ಕಲ್ಲಿನ ರಥ,20 ರೂ.ನಲ್ಲಿ ಕೆಂಪುಕೋಟೆ, 50 ರೂ.ನಲ್ಲಿ ಸೂರ್ಯ ದೇವಾಲಯ, 100 ರೂ. ತಾಜ್​ವುಹಲ್, 500 ರೂ. ಚರ್ಚ್ ಮತ್ತು ಕಾನ್ವೆಂಟ್ಸ್, 1,000 ರೂ. ಅಜಂತಾದ ಗುಹಾಲಯ ಮುದ್ರಣವಾಗಲಿವೆ.[ಹಂಪಿಯ ಆಕರ್ಷಣೆಗಳೇನು?]

ಒಟ್ಟಿನಲ್ಲಿ ವಿಜಯನಗರ ಸಾಮ್ರಾಜ್ಯದ ಕೊಡುಗೆಗೆ ಸಿಕ್ಕಿದ್ದ ಅಂತಾರಾಷ್ಟ್ರೀಯ ಮಾನ್ಯತೆಗೆ ಮತ್ತಷ್ಟು ಇದೀಗ ಹೊಳಪು ಸಿಕ್ಕಂತಾಗಿದೆ. ಈ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಫೋಟೋ ಕಳಿಸಿಕೊಡುವಂತೆ ತಿಳಿಸಲಾಗಿದೆ.

English summary
Hampi stone chariot, is among the country's eight world heritage sites that will feature in new currency notes of Rs 10 denomination to be released by the Reserve Bank of India. Discussions have already been held in this regard by the secretary and joint secretaries of the union Finance ministry with the chief general manager of the currency management department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X