ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮಸ್ತೆ' ಹೇಳಿ.. ಡೆಡ್ಲಿ ಕೊರೊನಾ ವೈರಸ್ ನ ದೂರ ತಳ್ಳಿ!

|
Google Oneindia Kannada News

ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿದೆ. ಚೀನಾದಿಂದ ಜಗತ್ತಿನಾದ್ಯಂತ ಹರಡುತ್ತಿರುವ ಈ ವೈರಸ್ ನಿಂದಾಗಿ 3000 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ವಿಶ್ವದ 50ಕ್ಕೂ ಹೆಚ್ಚು ದೇಶಗಳಲ್ಲಿ ಈ ಮಾರಣಾಂತಿಕ ಕೊರೊನಾ ವೈರಸ್ ವ್ಯಾಪಿಸಿಕೊಂಡಿದ್ದು, ಎಲ್ಲರಲ್ಲಿ ಆತಂಕ ಸೃಷ್ಟಿಸಿದೆ.

ದೈಹಿಕ ಸಂಪರ್ಕದಿಂದಾಗಿ ಕೊರೊನಾ ವೈರಸ್ ಸೋಂಕು ಹರಡುತ್ತಿರುವುದು ಸ್ಪಷ್ಟವಾದ ಮೇಲೆ ಗಾಬರಿಗೊಂಡಿರುವ ಜನ ಕೈಕುಲುಕುವುದನ್ನೇ ನಿಲ್ಲಿಸಿ ಬಿಟ್ಟಿದ್ದಾರೆ. ಪರಿಚಯದವರು ಎದುರಿಗೆ ಬಂದಾಗ ಹ್ಯಾಂಡ್ ಶೇಕ್ ಮಾಡುವುದಕ್ಕೂ ಜನ ಹೆದರುತ್ತಿದ್ದಾರೆ.

ಕೊರೊನಾ ಪೀಡಿತ ಬೆಂಗಳೂರಿನ ಯಾವ ಕಂಪನಿಯಲ್ಲಿದ್ದ.? ಹೇಳಿ ಪ್ಲೀಸ್ಕೊರೊನಾ ಪೀಡಿತ ಬೆಂಗಳೂರಿನ ಯಾವ ಕಂಪನಿಯಲ್ಲಿದ್ದ.? ಹೇಳಿ ಪ್ಲೀಸ್

ನಾವು ನೀವು ಯಾಕೆ.. ಇತ್ತೀಚೆಗಷ್ಟೇ ಜರ್ಮನ್ ಚಾನ್ಸೆಲ್ಲರ್ ಆಂಜೆಲಾ ಮೆರ್ಕೆಲ್ ಹ್ಯಾಂಡ್ ಶೇಕ್ ಮಾಡಲು ಮುಂದಾದಾಗ ಜರ್ಮನಿಯ ಇಂಟೀರಿಯರ್ ಮಿನಿಸ್ಟರ್ ಹೊರ್ಸ್ಟ್ ಸೀಹೋಫರ್ ನಯವಾಗಿ ನಿರಾಕರಿಸಿಬಿಟ್ಟರು. ಅದಕ್ಕೆ ಕಾರಣ ಇದೇ ಡೆಡ್ಲಿ ಕೊರೊನಾ ವೈರಸ್.!

ಒಂದೇ ಉಪಾಯ.!

ಒಂದೇ ಉಪಾಯ.!

ಪರಿಚಯಸ್ಥರು ಅಥವಾ ಸ್ನೇಹಿತರು ಸಿಕ್ಕಾಗ ಹ್ಯಾಂಡ್ ಶೇಕ್ ಮಾಡುವುದು ಸಾಮಾನ್ಯ ಅಭ್ಯಾಸ. ಆದ್ರೀಗ, ಕೊರೊನಾ ವೈರಸ್ ಭೀತಿಯಿಂದ ಹ್ಯಾಂಡ್ ಶೇಕ್ ಮಾಡದೇ ಇದ್ದರೆ, ನಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುವುದಿಲ್ಲವೇ.? ಅಂತ ನೀವು ಭಾವಿಸುತ್ತಿದ್ದರೆ.. ಹೀಗೆ ಮಾಡಿ.. ನಮಗೆ ಬೇಕಾದವರು ಎದುರಿಗೆ ಬಂದಾಗ ಕೈಕುಲುಕುವ ಬದಲು ಎರಡು ಕೈಗಳನ್ನು ಜೋಡಿಸಿ 'ನಮಸ್ತೆ' ಅಂತ ಸ್ವೀಟಾಗಿ ಹೇಳಿ.. ಆಗ ನಿಮ್ಮ ಬಗ್ಗೆ ಗೌರವವೂ ಮೂಡುತ್ತದೆ. ಕೊರೊನಾ ವೈರಸ್ ನಿಂದ ನೀವು ದೂರ ಉಳಿದಂತೆಯೂ ಆಗುತ್ತದೆ.

ದೊಡ್ಡ ರಿಸ್ಕ್ ನಿಂದ ಬಚಾವ್ ಆಗಬಹುದು!

ದೊಡ್ಡ ರಿಸ್ಕ್ ನಿಂದ ಬಚಾವ್ ಆಗಬಹುದು!

ಕೈ ಕುಲುಕುವುದು, ತಬ್ಬಿಕೊಳ್ಳುವುದು ಮತ್ತು ಮುತ್ತು ಕೊಡುವುದನ್ನು ಬಿಟ್ಟು ಕೈ ಜೋಡಿಸಿ 'ನಮಸ್ತೆ' ಹೇಳುವ ಮೂಲಕ ನಿಮಗೆ ಹಲವು ಲಾಭಗಳಿವೆ. ಅದರಲ್ಲಿ ಒಂದು 'ದೈಹಿಕ ಸಂಪರ್ಕ'ದಿಂದ ದೂರ ಉಳಿಯುವುದು. 'ನಮಸ್ತೆ' ಮಾಡುವ ಮೂಲಕ ನೀವು ಕೊರೊನಾ ರಿಸ್ಕ್ ನಿಂದ ಬಚಾವ್ ಆಗಬಹುದು.

ಕೊರೊನಾ ಬಗ್ಗೆ ಆರ್.ಜಿ.ವಿ ಕುಹಕ: ಸಾವು ಕೂಡ ಮೇಡ್ ಇನ್ ಚೀನಾ!ಕೊರೊನಾ ಬಗ್ಗೆ ಆರ್.ಜಿ.ವಿ ಕುಹಕ: ಸಾವು ಕೂಡ ಮೇಡ್ ಇನ್ ಚೀನಾ!

ನಮಸ್ತೆ ಹೇಳುವುದು ಉತ್ತಮ ಅಭ್ಯಾಸ!

ನಮಸ್ತೆ ಹೇಳುವುದು ಉತ್ತಮ ಅಭ್ಯಾಸ!

ಹ್ಯಾಂಡ್ ಶೇಕ್ ನಿರಾಕರಿಸಿ 'ನಮಸ್ತೆ' ಮಾಡಿದರೆ, ನೀವು ಅಗೌರವ ತೋರಿದ್ದೀರಾ ಅಂತ ಯಾರೂ ಬೆರಳು ಮಾಡಿ ತೋರಿಸುವುದಿಲ್ಲ. ಹಾಗ್ನೋಡಿದ್ರೆ, ಹಿರಿಯರಿಗೆ ಕೈ ಜೋಡಿಸಿ 'ನಮಸ್ತೆ' ಹೇಳುವುದೇ ಉತ್ತಮ ಅಭ್ಯಾಸ. ಎಷ್ಟೇ ಆಗಲಿ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ಗೌರವ ಕೊಡುವುದು ನಮಸ್ಕರಿಸುವ ಮೂಲಕವೇ ಅಲ್ಲವೇ.?

ನಮ್ಮ ಸಂಸ್ಕೃತಿಯೇ ಮೇಲು!

ನಮ್ಮ ಸಂಸ್ಕೃತಿಯೇ ಮೇಲು!

ಸ್ವಾಗತ ಮಾಡುವ ಸಂದರ್ಭದಲ್ಲಿ ವಿಶ್ವದ ಹಲವೆಡೆ ಹ್ಯಾಂಡ್ ಶೇಕ್ ಮಾಡುವುದು, ತಬ್ಬಿಕೊಳ್ಳುವುದು, ಕೆನ್ನೆಗೆ ಮುತ್ತು ಕೊಡುವ ಸಂಸ್ಕೃತಿ ಇದೆ. ಆದ್ರೆ, ಕೊರೊನಾ ವೈರಸ್ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ತಗುಲಲು ಇಷ್ಟು ಸಾಕು. ಹೀಗಾಗಿ, ವಿದೇಶಿಯರು ಕೂಡ ಇಂತಹ ಸಂಸ್ಕೃತಿಗೆ ಗುಡ್ ಬೈ ಹೇಳಿ, ನಮ್ಮ ಭಾರತೀಯ ಸಂಸ್ಕೃತಿಯಂತೆ 'ನಮಸ್ತೆ' ಹೇಳಲು ಶುರು ಮಾಡಿದ್ದಾರೆ.

ದೇಸಿ ಶೈಲಿಯಲ್ಲಿ ಹೇಳಿ 'ನಮಸ್ತೆ'

ದೇಸಿ ಶೈಲಿಯಲ್ಲಿ ಹೇಳಿ 'ನಮಸ್ತೆ'

ಒಬ್ಬರನ್ನ ಆದರದಿಂದ ಸ್ವಾಗತಿಸಲು 'ನಮಸ್ತೆ'ಯೇ ಉತ್ತಮ ವಿಧ. ಇದು ಅತ್ಯಂತ ಶುಚಿತ್ವ ವಿಧವೂ ಹೌದು. ದೈಹಿಕ ಸಂಪರ್ಕವೇ ಇಲ್ಲದ ಕಾರಣ, ಒಬ್ಬರಿಂದ ಇನ್ನೊಬ್ಬರಿಗೆ ಮಾರಕ ರೋಗಾಣು ಹರಡುವುದು ಸಾಧ್ಯವೇ ಇಲ್ಲ. ಹಾಗಾದ್ರೆ, ಇನ್ಯಾಕೆ ತಡ.. ಯಾರೇ ಸಿಕ್ಕರೂ, ಎಲ್ಲೇ ಆದರೂ, ದೇಸಿ ಶೈಲಿಯಲ್ಲಿ ಕೂಲ್ ಆಗಿ ನಮಸ್ತೆ ಹೇಳಿ... ಕೊರೊನಾ ವೈರಸ್ ನ ದೂರ ತಳ್ಳಿ..

English summary
Coronavirus scare: Say Namaste, Ditch the handshake and hug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X