• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಭೀತಿ; ಕೆಎಸ್ಆರ್‌ಟಿಸಿ ಪ್ರಯಾಣಿಕರ ಗಮನಕ್ಕೆ

|

ಬೆಂಗಳೂರು, ಮಾರ್ಚ್ 22 : ಕೊರೊನಾ ಹರಡದಂತೆ ತಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಲವು ಕ್ರಮಗಳನ್ನು ಕೈಗೊಂಡಿದೆ. ಸಂಸ್ಥೆ ಮಾರ್ಚ್ 31ರ ತನಕ ಹೊರ ರಾಜ್ಯಗಳಿಗೆ ಬಸ್ ಸಂಚಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮನವಿಯಂತೆ 'ಜನತಾ ಕರ್ಫ್ಯೂ' ನಡೆಯಿತು. ಆದ್ದರಿಂದ, ರಾಜ್ಯದಲ್ಲಿ ಸರ್ಕಾರಿ ಬಸ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.

ಆಗ ಕಾವೇರಿ, ಈಗ ಕೊರೊನಾ; ಕರ್ನಾಟಕ, ತಮಿಳುನಾಡು ಬಸ್ ರದ್ದು ಆಗ ಕಾವೇರಿ, ಈಗ ಕೊರೊನಾ; ಕರ್ನಾಟಕ, ತಮಿಳುನಾಡು ಬಸ್ ರದ್ದು

ಕೆಎಸ್ಆರ್‌ಟಿಸಿ ಪ್ರಯಾಣಿಕರಿಗೆ ಗೊಂದಲ ಉಂಟಾಗಬಾರದು ಎಂದು ಪ್ರಕಟಣೆಯೊಂದನ್ನು ನೀಡಿದೆ. ಇದರಲ್ಲಿ ಬಸ್ ಸಂಚಾರದ ಕುರಿತು ಸ್ಪಷ್ಟನೆಗಳನ್ನು ನೀಡಲಾಗಿದೆ.

ಮಾರ್ಚ್ 31ರ ತನಕ ಹೊರ ರಾಜ್ಯಗಳಿಗೆ ಕೆಎಸ್ಆರ್‌ಟಿಸಿ ಬಸ್ ಇಲ್ಲಮಾರ್ಚ್ 31ರ ತನಕ ಹೊರ ರಾಜ್ಯಗಳಿಗೆ ಕೆಎಸ್ಆರ್‌ಟಿಸಿ ಬಸ್ ಇಲ್ಲ

* ಮಾರ್ಚ್ 22 ಮತ್ತು 23ರಂದು ಕೆಎಸ್‌ಆರ್‌ಟಿ‌‌ಸಿ ಯಾವುದೇ ಬಸ್ ಕಾರ್ಯಚರಣೆ‌ (ನಗರ ಸಾರಿಗೆ, ‌ಗ್ರಾಮಾಂತರ,‌ ಅಂತರನಗರ) ಯಾವುದು ಇರುವುದಿಲ್ಲ.

ಕೊರೊನಾ: ಹಲವು ರೈಲು ರದ್ದು ಮಾಡಿದ ನೈಋತ್ಯ ರೈಲ್ವೆ ಕೊರೊನಾ: ಹಲವು ರೈಲು ರದ್ದು ಮಾಡಿದ ನೈಋತ್ಯ ರೈಲ್ವೆ

* ಮಾರ್ಚ್ 24ರಂದು (ಹವಾನಿಯಂತ್ರಿತ ಬಸ್ಸುಗಳನ್ನು ಹೊರತುಪಡಿಸಿ) ಇನ್ನೆಲ್ಲಾ ಬಸ್ಸುಗಳ‌ ಕಾರ್ಯಚರಣೆ ಪ್ರಾರಂಭವಾಗುತ್ತದೆ. ಆದರೆ, locked down ಆದ ನಗರಗಳನ್ನು ಹೊರತುಪಡಿಸಿ.

* ಹೊರರಾಜ್ಯದ ಎಲ್ಲಾ ಸಾರಿಗೆ (ತಮಿಳುನಾಡು, ಆಂಧ್ರಪ್ರದೇಶ, ಕೇರಳ,‌ ಗೋವಾ, ಮಹಾರಾಷ್ಟ್ರ, ಪಾಂಡಿಚೇರಿ) ಸೇವೆಗಳನ್ನು ‌ಮಾರ್ಚ್ 31ರ ತನಕ ರದ್ದು ಮಾಡಲಾಗಿದೆ.

* ಮಾರ್ಚ್ 31ರವರೆಗೆ ಯಾವುದೇ ಹವಾನಿಯಂತ್ರಿತ ಬಸ್ಸುಗಳು ಸಂಚಾರ ನಡೆಸುವುದಿಲ್ಲ.

English summary
Due to Corona outbreak Karnataka State Road Transport Corporation (KSRTC) has cancelled all its interstate services till March 31, 2020. Here is a press note by KSRTC for the passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X