ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೇ ಇಲ್ಲ!

|
Google Oneindia Kannada News

ಬೆಂಗಳೂರು, ಮಾರ್ಚ್ 12: ಕೊರೊನಾ (ಕೋವಿಡ್ 19) ಭಯದಿಂದ ಜಗತ್ತಿನ 120 ಕ್ಕೂ ಹೆಚ್ಚು ರಾಷ್ಟ್ರಗಳು ತತ್ತರಿಸಿವೆ. ಆ ದೇಶಗಳ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿಯುತ್ತಿದೆ. ಸದಾ ಗಿಜುಗಿಡುತ್ತಿದ್ದ ಅಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿವೆ.

ದೇಶದ ಮೂರನೇ ಅತಿ ಹೆಚ್ಚು ಜನದಟ್ಟಣೆಯ ವಿಮಾನ ನಿಲ್ದಾಣವಾದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೇಲೆಯೂ ಕೊರೊನಾ ಸೋಂಕು ವ್ಯಾಪಕ ಪರಿಣಾಮ ಬೀರಿದೆ.

Breaking: ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ಸಂಖ್ಯೆ 5ಕ್ಕೆ ಏರಿಕೆBreaking: ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ಸಂಖ್ಯೆ 5ಕ್ಕೆ ಏರಿಕೆ

ವಿಮಾನ ನಿಲ್ದಾಣಕ್ಕೆ ಆಗಮಿಸುವ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಕೊರೊನಾ ವೈರಸ್‌ ಸೋಂಕು ಹರಡುವ ಭೀತಿಯಿಂದಾಗಿ ಶೇ 50 ರಷ್ಟು ಕುಸಿದಿದೆ. ಇದರಿಂದ ಸದಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಕೆಐಎ ಬಿಕೋ ಎನ್ನುತ್ತಿದೆ.

ದಿನದಿಂದ ದಿನಕ್ಕೆ ಕುಸಿತ

ದಿನದಿಂದ ದಿನಕ್ಕೆ ಕುಸಿತ

ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕೋವಿಡ್ 19 ಕಾಣಿಸಕೊಂಡ ನಂತರ ಎಲ್ಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತೀವ್ರ ನಿಗಾ ವಹಿಸಲಾಯಿತು. ವಿದೇಶ ಪ್ರವಾಸ ಕೈಗೊಳ್ಳದಂತೆ ಜಾಗೃತಿ ಮೂಡಿಸಲಾಯಿತು. ಇದರಿಂದ ಬೆಂಗಳೂರು ವಿಮಾನ ನಿಲ್ದಾಣದ ಮೇಲೂ ಕರಿನೆರಳು ಬೀರಿತು. ಫೆಬ್ರುವರಿಯಲ್ಲಿ ಶೇ 20ರಷ್ಟು ಕುಸಿತ ಕಂಡಿದ್ದ ಪ್ರಯಾಣಿಕರ ಸಂಖ್ಯೆ ಮಾರ್ಚ್‌ನಲ್ಲಿ ಮತ್ತಷ್ಟು ಕುಸಿದು ಶೇ 50 ಕ್ಕೆ ಇಳಿದಿದೆ. ಅಲ್ಲೊಬ್ಬರು ಇಲ್ಲೊಬ್ಬರು ಪ್ರಯಾಣಿಕರು ಕಾಣುತ್ತಿದ್ದಾರೆ.

ಶೇ 2ರಿಂದ ಶೇ 4ರಷ್ಟು ಇಳಿಕೆ

ಶೇ 2ರಿಂದ ಶೇ 4ರಷ್ಟು ಇಳಿಕೆ

ಸಾಮಾನ್ಯ ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ನಿತ್ಯ ಅಂದಾಜು 14 ರಿಂದ 15 ಸಾವಿರ ಪ್ರಯಾಣಿಕರು ಆಗಮಿಸುತ್ತಿದ್ದರು. ಆದರೆ, ಈ ಸಂಖ್ಯೆ ಈಗ 6 ಸಾವಿರದಿಂದ 7 ಸಾವಿರಕ್ಕೆ ಕುಸಿದಿದೆ. ದೇಶದೊಳಗಿನ ಪ್ರಯಾಣಿಕರ ಸಂಖ್ಯೆ ಯಲ್ಲೂ ಶೇ 2ರಿಂದ ಶೇ 4ರಷ್ಟು ಇಳಿಕೆ ಕಂಡುಬಂದಿದೆ.

ಕೋವಿಡ್ 19; ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಘೋಷಣೆಕೋವಿಡ್ 19; ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಘೋಷಣೆ

ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ

ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ

ಭಾರತದಲ್ಲಿ ಕೋವಿಡ್‌ 19 ಸೋಂಕು ತಗುಲಿದ ಪ್ರಕರಣಗಳು ಹೆಚ್ಚಾದರೆ ದೇಶದೊಳಗಿನ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕ್ಯಾಬ್‌ಗಳು ನಷ್ಟಕ್ಕೆ ಸಿಲುಕಿವೆ

ಕ್ಯಾಬ್‌ಗಳು ನಷ್ಟಕ್ಕೆ ಸಿಲುಕಿವೆ

ವಿದೇಶಗಳಿಂದ ಬರುವ ಪ್ರಯಾಣಿಕರು ಖಾಸಗಿ ಕ್ಯಾಬ್‌ಗಳನ್ನು ಅವಲಂಬಿಸಿದ್ದರು. ವಿದೇಶಗಳಿಂದ ಬರುವ ಪ್ರಯಾಣಿಕರು ಬರುತ್ತಿಲ್ಲವಾದ್ದರಿಂದ ಅವರನ್ನೇ ಅವಲಂಬಿಸಿದ್ದ ಖಾಸಗಿ ಕ್ಯಾಬ್‌ಗಳು ಈಗ ನಷ್ಟಕ್ಕೆ ಸಿಲುಕಿವೆ. ಇದರಿಂದ ಕೊರೊನಾ ವೈರಸ್ ಆರ್ಥಿಕತೆಯ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ.

English summary
Coronavirus Effect 50% Drop In Kempegouda International Airport Passengers Traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X