ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

6 ವರ್ಷದ ಮಗು ಸೇರಿದಂತೆ ರಾಜ್ಯದಲ್ಲಿ 28 ಹೊಸ ಸೋಂಕಿತರು ಪತ್ತೆ

|
Google Oneindia Kannada News

ಬೆಂಗಳೂರು, ಮೇ 4: ರಾಜ್ಯದಲ್ಲಿ 28 ಹೊಸ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ. ಮೇ 3ರ ಸಂಜೆ 5 ಗಂಟೆಯಿಂದ ಮೇ 4ರ ಮಧ್ಯಾಹ್ನ 12 ಗಂಟೆಯ ಒಳಗೆ ಪತ್ತೆಯಾದ ಪ್ರಕರಣಗಳು ಇವಾಗಿವೆ.

Recommended Video

ಜನರ ಕಷ್ಟ ಕೇಳಲು ಮೆಜೆಸ್ಟಿಕ್ ನಲ್ಲಿ ಕೆಂಪು ಬಸ್ ಹತ್ತಿದ ಸಿದ್ದರಾಮಯ್ಯ, DK ಶಿವಕುಮಾರ್ | DK Shivakumar

ಹಸಿರು ವಲಯವಾಗಿದ್ದ ಹಾವೇರಿಯಲ್ಲಿ ಮೊದಲ ಕೊರೊನಾ ಕೇಸ್ ಕಂಡು ಬಂದಿದೆ. ಹಾವೇರಿಯ ಸವಣೂರಿನಲ್ಲಿ 32 ವರ್ಷ ಯುವಕನಿಗೆ ಸೋಂಕು ತಗುಲಿದೆ. ಮುಂಬೈಗೆ ಪ್ರಯಾಣ ಮಾಡಿದ್ದ ಹಿನ್ನಲೆ ಸೊಂಕು ತಗುಲಿದೆ ಎಂದು ತಿಳಿದು ಬಂದಿದೆ. ವ್ಯಕ್ತಿಗೆ ಹಾವೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದೇಶದಲ್ಲಿ ಒಂದೇ ದಿನ 2,333 ಮಂದಿಗೆ ಕೊರೊನಾ ಸೋಂಕುದೇಶದಲ್ಲಿ ಒಂದೇ ದಿನ 2,333 ಮಂದಿಗೆ ಕೊರೊನಾ ಸೋಂಕು

ಹೊಸದಾಗಿ ಪತ್ತೆಯಾದ 28 ಕೇಸ್‌ಗಳಲ್ಲಿ 21 ಪ್ರಕರಣಗಳು ದಾವಣಗೆರೆ ಜಿಲ್ಲೆಯದಾಗಿದೆ. ಗ್ರೀನ್‌ ಝೋನ್ ನಲ್ಲಿದ್ದ ದಾವಣಗೆರೆಯಲ್ಲಿ, ಒಂದು ಪ್ರಕರಣ ಕಂಡು ಬಂದಿತ್ತು. ಆದರೆ, ಈಗ ಅದು 21ಕ್ಕೆ ತಲುಪಿದೆ. ಹೀಗಾಗಿ ಜಿಲ್ಲೆಯಲ್ಲಿ ಆತಂಕ ಹೆಚ್ಚಾಗಿದೆ.

Coronavirus Cases Increased To 642 In Karnataka

ಏಳು ವರ್ಷದ ಗಂಡು ಮಗು ಹಾಗೂ ಆರು ವರ್ಷದ ಗಂಡು ಮಗುವಿಗು ಸೊಂಕು ತಗುಲಿದೆ. ಈ ಇಬ್ಬರು ಮಕ್ಕಳು ದಾವಣಗೆರೆಯವರಾಗಿದ್ದಾರೆ. ಇಬ್ಬರು ಮಕ್ಕಳು ರೋಗಿ ನಂಬರ್ 533ರ ಜೊತೆಗೆ ಸಂಪರ್ಕ ಹೊಂದಿದ್ದರು. ಅಂದಹಾಗೆ, ಇಂದು ಆಸ್ಪತ್ರೆಯಿಂದ 11 ಮಂದಿಯನ್ನು ಡಿಸ್ಜಾರ್ಜ್ ಮಾಡಲಾಗಿದೆ.

ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ. 304 ಜನರು ಗುಣಮುಖರಾಗಿದ್ದಾರೆ. 26 ಮಂದಿ ಮರಣ ಹೊಂದಿದ್ದಾರೆ.

English summary
28 new cases, Coronavirus cases increased to 642 in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X