ಕನ್ನಡದಲ್ಲಿಯೂ ಬರಬೇಕು ಕೊರೊನಾ ಮೊಬೈಲ್ ಕಾಲರ್ ಟ್ಯೂನ್ ಸಂದೇಶ
ಬೆಂಗಳೂರು,
ಮಾರ್ಚ್ 9: ಕೊರೊನಾ ವೈರಸ್ ಸುರಕ್ಷತ ಕ್ರಮಗಳನ್ನು ಮೊಬೈಲ್ ಕಾಲರ್ ಟ್ಯೂನ್ ಮೂಲಕ ತಿಳಿಸಲಾಗುತ್ತಿದೆ. ಬಹುತೇಕ ಎಲ್ಲ ನೆಟ್‌ವರ್ಕ್‌ಗಳು ಇದನ್ನು ಜಾರಿಗೆ ತಂದಿವೆ. ಯಾರಿಗೆ ಕೆರೆ ಮಾಡಿದರೂ, ಮೊದಲು ಕೆಮ್ಮು ಬಂದು ನಂತರ ಕೊರೊನಾ ಬಗ್ಗೆ ಮಾಹಿತಿ ಶುರು ಆಗುತ್ತದೆ. id="toptextpromo"> id='are-slot-1' class='oiad oi-axt oiadv'>ಆದರೆ,
ಇದೀಗ ಕೊರೊನಾ ಕಾಲರ್ ಟ್ಯೂನ್ ಬಗ್ಗೆ ವಿರೋಧ ವ್ಯಕ್ತವಾಗಿದೆ. ಬರೀ ಇಂಗ್ಲೀಷ್‌ನಲ್ಲಿಯೇ ಕಾಲರ್ ಟ್ಯೂನ್ ಬರುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅನೇಕರು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಕೊರೊನಾ ಬಗ್ಗೆ ಸಂದೇಶ ನೀಡುವುದು ಒಳ್ಳೆಯ ನಡೆಯಾದರೂ, ಜನರಿಗೆ ಅರ್ಥ ಆಗುವ ಭಾಷೆಯಲ್ಲಿ ಅದನ್ನು ನೀಡಿ ಎಂದು ಅನೇಕರು ಒತ್ತಾಯ ಮಾಡಿದ್ದಾರೆ. id='are-slot-2' class='oiad oi-axt oiadv'>
ಇಂಗ್ಲೀಷ್ ಬರದೆ ಇದ್ದರೆ?
ಚೀನಾದಿಂದ ಶುರುವಾದ ಕೊರೊನಾ ವಿಶ್ವದ ಅನೇಕ ದೇಶಗಳಿಗೆ ಹರಡಿದೆ. ಭಾರತದಲ್ಲಿಯೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗಾಗಿ ಜನರಿಗೆ ಸಂದೇಶ ನೀಡುವುದು ಅಗತ್ಯವಿದೆ. ಆ ಕೆಲಸವನ್ನು ಮೊಬೈಲ್ ನೆಟ್‌ವರ್ಕ್‌ಗಳು ಮಾಡುತ್ತಿರುವುದು ಮೆಚ್ಚುವ ಕೆಲಸ. ಆದರೆ, ಅದು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಬರುತ್ತಿದೆ. ಹೀಗಾಗಿ, ಇಂಗ್ಲೀಷ್ ಬಾರದೆ ಇದ್ದವರು ಏನು ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆಯಾಗಿದೆ.

ಹಳ್ಳಿಯ ಜನರಿಗೆ ಸಂದೇಶ ಸಿಗುವುದಿಲ್ಲ
ಕೊರೊನಾ ಸಂದೇಶ ಎಲ್ಲರಿಗೂ ಸಿಗಬೇಕು. ಆದರೆ, ಹಳ್ಳಿಯ ಜನರು ಇದರಿಂದ ವಂಚಿತರಾಗುತ್ತಿದ್ದಾರೆ. ಹಳ್ಳಿಯಲ್ಲಿಯೂ ಈಗ ಎಲ್ಲರೂ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಆದರೆ, ಎಷ್ಟೋ ಜನರಿಗೆ ಇಂಗ್ಲೀಷ್ ಬರುವುದಿಲ್ಲ. ಕೊರೊನಾ ಕಾಲರ್ ಟ್ಯೂನ್ ಅರ್ಥವೇ ಆಗುವುದಿಲ್ಲ. ಹೀಗಾಗಿ, ಎಲ್ಲರಿಗೂ ತಿಳಿಯುವ ರೀತಿ ಕನ್ನಡದಲ್ಲಿ ಬರಬೇಕು ಎಂದು ಹಲವರು ಕೇಳಿದ್ದಾರೆ.

ರಾಜ್ಯಕ್ಕೆ ತಕ್ಕ ಭಾಷೆ ಇರಲಿ
ಕೊರೊನಾ ಸಂದೇಶ ಆಯಾ ರಾಜ್ಯಕ್ಕೆ ತಕ್ಕ ಹಾಗೆ ಇರಲಿ. ಕರ್ನಾಟಕದಲ್ಲಿ ಕನ್ನಡ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ತೆಲುಗು, ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಉತ್ತರ ಭಾರತದಲ್ಲಿ ಹಿಂದಿ ಹೀಗೆ ರಾಜ್ಯದ ಭಾಷೆ ಯಾವುದಿದೆಯೋ ಅದೇ ಭಾಷೆಯಲ್ಲಿ ಮೊಬೈಲ್ ಕಾಲರ್ ಟ್ಯೂಬ್ ಸಂದೇಶ ಇರಬೇಕು ಎನ್ನುವುದು ಕೆಲವರ ಅಭಿಪ್ರಾಯ.

ಪ್ರತಿ ಕರೆಗೂ ಅಗತ್ಯ ಇದೆಯೇ?
ಸದ್ಯ, ಒಬ್ಬ ವ್ಯಕ್ತಿ, ಮತ್ತೊಬ್ಬ ವ್ಯಕ್ತಿಗೆ ಕರೆ ಮಾಡಿದರೆ, ಎಲ್ಲ ಕರೆಗಳಲ್ಲಿಯೂ ಕೊರೊನಾ ಬಗ್ಗೆ ಸಂದೇಶ ಬರುತ್ತದೆ. ಆದರೆ, ಅದರ ಅಗತ್ಯ ಇದೆಯೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಒಂದು ದಿನಕ್ಕೆ ನೂರು ಕರೆ ಮಾಡಿದರೆ, ನೂರು ಬಾರಿಯೂ ಕೊರೊನಾ ಸಂದೇಶ ಬರುವುದು ಕಿರಿಕಿರಿ ಉಂಟು ಮಾಡುತ್ತದೆ. ಎಂದು ಇನ್ನು ಕೆಲವರು ಹೇಳಿದ್ದಾರೆ.












Click it and Unblock the Notifications