ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಅಲೆಯ ಮಧ್ಯೆ ಗಮನಿಸಬೇಕಾದ ಪ್ರಮುಖ ಸಮಾಧಾನಕರ ಅಂಶ

|
Google Oneindia Kannada News

ಕೊರೊನಾ ಎರಡನೇ ಅಲೆಯ ಆರ್ಭಟ ಮುಂದುವರಿಯುತ್ತಾ ಸಾಗುತ್ತಿದೆ. ಸತತವಾಗಿ ಆರು ದಿನಗಳಿಂದ ಹೊಸ ಸೋಂಕಿತರ ಸಂಖ್ಯೆ ನಲವತ್ತು ಸಾವಿರದ ಗಡಿ ದಾಟಿದೆ. ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ.

ಮೂರು ದಿನಗಳ ಹಿಂದೆ ವರದಿಯಾದ ಹೊಸ ಸೋಂಕಿತರ ಸಂಖ್ಯೆಗೂ ಶನಿವಾರದ (ಮೇ 8) ಸಂಖ್ಯೆಗೂ ಹೋಲಿಕೆ ಮಾಡಿದರೆ, ಹೊಸ ಸೋಂಕಿತರ ಸಂಖ್ಯೆ ಕಮ್ಮಿಯಾಗುತ್ತಾ ಬರುತ್ತಿದೆ.

ಕೊರೊನಾ ಪಾಸಿಟಿವ್ ಇದ್ದವರು ಏನು ಮಾಡಬಾರದು? ಇಲ್ಲಿದೆ ವೈದ್ಯರ ಪಟ್ಟಿಕೊರೊನಾ ಪಾಸಿಟಿವ್ ಇದ್ದವರು ಏನು ಮಾಡಬಾರದು? ಇಲ್ಲಿದೆ ವೈದ್ಯರ ಪಟ್ಟಿ

ಮೇ ಐದರಂದು 50,112 ಇದ್ದ ಸಂಖ್ಯೆ, ಮೇ ಎಂಟರಂದು ಅದು 47,563ಕ್ಕೆ ಇಳಿದಿದೆ. ಕಳೆದ ಹತ್ತು ದಿನದಿಂದ ಜಾರಿಯಲ್ಲಿರುವ ಜನತಾ ಕರ್ಫ್ಯೂವಿನ ಎಫೆಕ್ಟ್ ಈಗಾಗಲೇ ಬರಲಾರಂಭಿಸಿದೆಯಾ ಎನ್ನುವುದರ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ.

 ಕೊರೊನಾ ನಾಗಾಲೋಟ: ಕೈಮುಗಿದು ನಿಮ್ಹಾನ್ಸ್ ವೈದ್ಯರ ಮನವಿ ಕೊರೊನಾ ನಾಗಾಲೋಟ: ಕೈಮುಗಿದು ನಿಮ್ಹಾನ್ಸ್ ವೈದ್ಯರ ಮನವಿ

ಹೊಸ ಸೋಂಕಿತರು ಮತ್ತು ಮೃತ ಪಡುತ್ತಿರುವವರ ಸಂಖ್ಯೆ ಆತಂಕ ತರುವಂತದ್ದು, ಆದರೂ, ಈ ಸಮಯದಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನಂದರೆ, ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಬಿಡುಗಡೆಯಾಗುತ್ತಿರುವವರ ಸಂಖ್ಯೆ. ಆ ಅಂಕಿ ಅಂಶ ಹೀಗಿದೆ (ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡೇಟಾ ಪ್ರಕಾರ).

 ಮೇ 2 ಮತ್ತು ಮೇ 3ರಂದು ಬಿಡುಗಡೆಯಾದವರ ಸಂಖ್ಯೆ

ಮೇ 2 ಮತ್ತು ಮೇ 3ರಂದು ಬಿಡುಗಡೆಯಾದವರ ಸಂಖ್ಯೆ

ದಿನಾಂಕ: ಮೇ 2
ಇಂದು ಬಿಡುಗಡೆಯಾದವರ ಸಂಖ್ಯೆ: 21,149
ಒಟ್ಟು ಬಿಡುಗಡೆಯಾದವರ ಸಂಖ್ಯೆ: 11,64,938
ಇಂದು ವರದಿಯಾದ ಹೊಸ ಕೇಸ್: 37,733

ದಿನಾಂಕ: ಮೇ 3
ಇಂದು ಬಿಡುಗಡೆಯಾದವರ ಸಂಖ್ಯೆ: 20,901
ಒಟ್ಟು ಬಿಡುಗಡೆಯಾದವರ ಸಂಖ್ಯೆ: 11,85,299
ಇಂದು ವರದಿಯಾದ ಹೊಸ ಕೇಸ್: 44,438

 ಮೇ 4 ಮತ್ತು ಮೇ 5ರಂದು ಬಿಡುಗಡೆಯಾದವರ ಸಂಖ್ಯೆ

ಮೇ 4 ಮತ್ತು ಮೇ 5ರಂದು ಬಿಡುಗಡೆಯಾದವರ ಸಂಖ್ಯೆ

ದಿನಾಂಕ: ಮೇ 4
ಇಂದು ಬಿಡುಗಡೆಯಾದವರ ಸಂಖ್ಯೆ: 24,714
ಒಟ್ಟು ಬಿಡುಗಡೆಯಾದವರ ಸಂಖ್ಯೆ: 12,10,013
ಇಂದು ವರದಿಯಾದ ಹೊಸ ಕೇಸ್: 44,631

ದಿನಾಂಕ: ಮೇ 5
ಇಂದು ಬಿಡುಗಡೆಯಾದವರ ಸಂಖ್ಯೆ: 26,841
ಒಟ್ಟು ಬಿಡುಗಡೆಯಾದವರ ಸಂಖ್ಯೆ: 12,36,854
ಇಂದು ವರದಿಯಾದ ಹೊಸ ಕೇಸ್: 50,112

 ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಬಿಡುಗಡೆಯಾಗುತ್ತಿರುವವರ ಸಂಖ್ಯೆ

ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಬಿಡುಗಡೆಯಾಗುತ್ತಿರುವವರ ಸಂಖ್ಯೆ

ದಿನಾಂಕ: ಮೇ 6
ಇಂದು ಬಿಡುಗಡೆಯಾದವರ ಸಂಖ್ಯೆ: 18,943
ಒಟ್ಟು ಬಿಡುಗಡೆಯಾದವರ ಸಂಖ್ಯೆ: 12,55,797
ಇಂದು ವರದಿಯಾದ ಹೊಸ ಕೇಸ್: 49,058

ದಿನಾಂಕ: ಮೇ 7
ಇಂದು ಬಿಡುಗಡೆಯಾದವರ ಸಂಖ್ಯೆ: 28,623
ಒಟ್ಟು ಬಿಡುಗಡೆಯಾದವರ ಸಂಖ್ಯೆ: 12,84,420
ಇಂದು ವರದಿಯಾದ ಹೊಸ ಕೇಸ್: 48,781

Recommended Video

ಪುಕ್ಸಟ್ಟೆ ಸವಲತ್ತು ಬಿಟ್ಟು ಜನಕ್ಕೋಸ್ಕರ ಕೆಲಸ ಮಾಡೋದು ಯಾವಾಗ?? | Oneindia Kannada
 ಮೇ 8ರಂದು ಬಿಡುಗಡೆಯಾದವರ ಸಂಖ್ಯೆ

ಮೇ 8ರಂದು ಬಿಡುಗಡೆಯಾದವರ ಸಂಖ್ಯೆ

ದಿನಾಂಕ: ಮೇ 8
ಇಂದು ಬಿಡುಗಡೆಯಾದವರ ಸಂಖ್ಯೆ: 34,881
ಒಟ್ಟು ಬಿಡುಗಡೆಯಾದವರ ಸಂಖ್ಯೆ: 13,19,301
ಇಂದು ವರದಿಯಾದ ಹೊಸ ಕೇಸ್: 47,563

ಈ ಒಂದು ವಾರದ ಅಂಕಿಅಂಶವನ್ನು ಅವಲೋಕಿಸಿದಾಗ, ಎರಡು ದಿನ ಹೊರತಾಗಿ ಮಿಕ್ಕ ಎಲ್ಲಾ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಸಮಾಧಾನಕರದ ವಿಚಾರ.

English summary
Corona Second Wave Cases In Karnataka: Discharge Rate Is Increasing Day-By-Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X