Get Updates
Get notified of breaking news, exclusive insights, and must-see stories!

ಎಲ್‌ಪಿಜಿ ನಂತರ ಅಡುಗೆ ಎಣ್ಣೆ ವಿಚಾರದಲ್ಲೂ ಶುರುವಾಯ್ತು ದೊಡ್ಡ ಟೆನ್ಷನ್... Cooking Oil

ಇರಾನ್ ಯುದ್ಧ ಕಾರಣಕ್ಕೆ ಸಾಲು ಸಾಲು ಸಂಕಷ್ಟ ಎದುರಾಗುತ್ತಿದ್ದು, ಭಾರತದಲ್ಲಿ ಈಗಾಗಲೇ ಈ ವಿಚಾರವಾಗಿ ಎಲ್‌ಪಿಜಿ ಸಮಸ್ಯೆ ಭುಗಿಲೆದ್ದು ಜನರು ಪರದಾಡುತ್ತಿದ್ದಾರೆ. ಹಾಗೇ ತೈಲ ಬೆಲೆ ಕೂಡ ಈ ಹಂತದಲ್ಲಿ ಹೆಚ್ಚಾಗುವ ಭೀತಿ ಮೂಡಿದ್ದು, ಸಾಲು ಸಾಲು ಕಂಟಕದ ನಡುವೆ ಭಾರತೀಯರೆಲ್ಲಾ ಬಳಲುತ್ತಿದ್ದಾರೆ. ಹಾಗೇ ಇರಾನ್ ಯುದ್ಧ ಇನ್ನಷ್ಟು ದಿನಗಳ ಕಾಲ ಮುಂದುವರಿದರೆ ಜಾಗತಿಕ ಆರ್ಥಿಕ ಪರಿಸ್ಥಿತಿ ಮಕಾಡೆ ಮಲಗುವುದು ಪಕ್ಕಾ ಎನ್ನುತ್ತಿದ್ದಾರೆ ತಜ್ಞರು. ಇಷ್ಟೆಲ್ಲದರ ನಡುವೆಯೇ, ಎಲ್‌ಪಿಜಿ ನಂತರ ಅಡುಗೆ ಎಣ್ಣೆ ವಿಚಾರದಲ್ಲೂ ಶುರುವಾಯ್ತು ದೊಡ್ಡ ಟೆನ್ಷನ್, ಏನದು ಗೊತ್ತಾ?

ಇಸ್ರೇಲ್ ಹಾಗೂ ಅಮೆರಿಕ ಸೇನೆಗಳು ಒಟ್ಟಾಗಿ ಇರಾನ್ ವಿರುದ್ಧ ಯುದ್ಧ ಸಾರಿದ ನಂತರ ಈ ತಿಕ್ಕಾಟದ ಪರಿಣಾಮ ಮಧ್ಯಪ್ರಾಚ್ಯ ಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ, ಯುದ್ಧದ ಕಿಚ್ಚು ಭಾರತದ ಮಾರುಕಟ್ಟೆಗೂ ಲಗ್ಗೆಯಿಟ್ಟು ನಾನಾ ಸಮಸ್ಯೆ ಸೃಷ್ಟಿ ಮಾಡುತ್ತಿದೆ. ಬೆಂಗಳೂರು ರೀತಿ ಬೃಹತ್ ನಗರಗಳಲ್ಲಿ ಈಗ ಅಡುಗೆ ಮನೆಗಳಿಗೆ ಬೇಕಾಗುವ ಅವಶ್ಯಕ ವಸ್ತುಗಳು ಸಿಗದಂತೆ ಆಗಿದೆ. ಕಮರ್ಷಿಯಲ್ ಸಿಲಿಂಡರ್ ಸರಬರಾಜಲ್ಲಿ ಏರುಪೇರು ಉಂಟಾಗಿರುವ ಕಾರಣ, ಹೋಟೆಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿ ಒದ್ದಾಡಿದ್ದಾರೆ. ಇದೇ ಸಮಯದಲ್ಲಿ ಮತ್ತೊಂದು ಶಾಕ್ ಕೂಡ ಸಿಕ್ಕಿದ್ದು, ಅಡುಗೆ ಎಣ್ಣೆಗೂ ಈಗ ಪರದಾಟ ಶುರುವಾಗುವ ಲಕ್ಷಣ ಗೋಚರಿಸಿದೆ.

Cooking Oil

ಬೆಲೆ ಸುಮಾರು 20 ರೂಪಾಯಿ ಏರಿಕೆ?

ಹೌದು, ಅಡುಗೆ ಎಣ್ಣೆ ಬೆಲೆ ಯುದ್ಧದ ನಡುವೆ ಭಾರಿ ಏರಿಕೆ ಕಾಣುತ್ತಿರುವುದು ಆತಂಕ ಮೂಡಿಸಿದೆ. ಅಷ್ಟಕ್ಕೂ ಈಗಿನ ಸ್ಥಿತಿಯಲ್ಲಿ ಪೂರೈಕೆ ಇಲ್ಲದ ಕಾರಣಕ್ಕೆ 100 ರಿಂದ 200 ಬಾಕ್ಸ್‌ ಅಡುಗೆ ಎಣ್ಣೆ ಆರ್ಡರ್ ನೀಡಿದರೂ, ಏಜೆಂಟ್‌ಗಳು 20 ರಿಂದ 50 ಬಾಕ್ಸ್‌ ಪೂರೈಕೆ ಮಾಡುವ ಪರಿಸ್ಥಿತಿ ಬಂದಿದೆ. ಈ ಮೂಲಕ ಇರಾನ್ ವಿರುದ್ಧ ಭೀಕರ ಕದನ ನಡೆಯುವಾಗ ಎಲ್‌ಪಿಜಿ, ಪೆಟ್ರೋಲ್ ಹಾಗೂ ಡೀಸೆಲ್ ಜೊತೆಯಲ್ಲೇ ಅಡುಗೆ ಎಣ್ಣೆಗೆ ಕೂಡ ಈಗ ಭಾರಿ ದೊಡ್ಡ ಕಂಟಕ ಎದುರಾಗಿದೆ. ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಸಾಧ್ಯತೆ ಕೂಡ ದಟ್ಟವಾಗಿದೆ. ಎಣ್ಣೆ ರೇಟ್ ಕೂಡ ಈಗ 20 ರಿಂದ 25 ರೂಪಾಯಿ ತನಕ ಏರಿಕೆ ಕಂಡಿರುವುದು ಬಡವರಿಗೆ ಹೊಸ ಸಮಸ್ಯೆ ಸೃಷ್ಟಿ ಮಾಡುತ್ತಿದೆ. ಹಾಗೇ ಈ ಸಮಸ್ಯೆ ಪರಿಣಾಮ ಹೋಟೆಲ್ ಖಾದ್ಯಗಳ ಬೆಲೆ ಏರಿಕೆ ಬಿಸಿ ಕೂಡ ತಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+