ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪತ್ರ
ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ್ನನಾಗಿ ನಡೆಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಬೆಂಗಳೂರು, ಮಾರ್ಚ್ 09: ವಿಧಾನಸಭಾ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಜೊತೆಗೆ ಚುನಾವಣಾ ಆಯೋಗ ಕೂಡ ಚುರುಕುಗೊಂಡಿದೆ. ಚುನಾವಣೆ ನಡೆಸಲು ಎಲ್ಲಾ ಸಿದ್ಧತೆಗಳ ಬಗ್ಗೆ ಪರೀಶಿಲನೆ ನಡೆಸಲು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸಿಲಿಕಾನ್ ಸಿಟಿಗೆ ಬಂದಿದ್ದು, ಈ ವೇಳೆ ಕಾಂಗ್ರೆಸ್ ಪತ್ರ ಬರೆದು ಗಮನ ಸೆಳೆದಿದೆ.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ್ನನಾಗಿ ನಡೆಸುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಇದರ ಜೊತೆಗೆ ರಾಜ್ಯದಲ್ಲಿ 33 ಲಕ್ಷ ಮತದಾರರ ಹೆಸರನ್ನು ಅಳಿಸಲಾಗಿದ್ದು, ಇವರನ್ನು ಮತ್ತೇ ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ, ಚಿಲುಮೆ ಸಂಸ್ಥೆಯ ಅಕ್ರಮ ಸೇರಿದಂತೆ ಹತ್ತು ವಿಷಯಗಳನ್ನು ಕಾಂಗ್ರೆಸ್ ಪತ್ರದಲ್ಲಿ ಉಲ್ಲೇಖಿಸಿದೆ.

*ಕಾಂಗ್ರೆಸ್ ಪತ್ರದಲ್ಲಿ ಏನಿದೆ..?*
ನಿಮಗೆ ತಿಳಿದಿರುವಂತೆ ಭಾರತದ ಸಂವಿಧಾನದ 324 ನೇ ವಿಧಿಯ ನಿಬಂಧನೆಯ ಪ್ರಕಾರ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಅಧಿಕಾರವನ್ನು ಭಾರತದ ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ದುರದೃಷ್ಟವಶಾತ್. ಭಾರತೀಯ ಚುನಾವಣಾ ಆಯೋಗವು ಮುಂಬರುವ ಚುನಾವಣೆಗಾಗಿ ಮತದಾರರ ಪಟ್ಟಿಗಳ ಪರಿಷ್ಕರಣೆ ಮತ್ತು ಇತರ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸುತ್ತಿಲ್ಲ.
ತೀರಾ ಇತ್ತೀಚೆಗೆ ಭಾರತದ ಚುನಾವಣಾ ಆಯೋಗದ ಕಾರ್ಯವೈಖರಿಯು ಸಂವಿಧಾನ ಮತ್ತು ಇತರ ಶಾಸನಗಳ ನಿಬಂಧನೆಗಳಿಗೆ ಅನುಗುಣವಾಗಿಲ್ಲ ಎಂದು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ದೃಷ್ಟಿಯಲ್ಲಿ ನಾವು ಕರ್ನಾಟಕ ವಿಧಾನಸಭೆ 2023 ಕ್ಕೆ ಅರ್ಥಪೂರ್ಣ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಮತ್ತು ಭಾರತದ ಸಂವಿಧಾನದ ಕಡ್ಡಾಯ ನಿಬಂಧನೆಗಳನ್ನು ಎತ್ತಿಹಿಡಿಯಲು ಮುಕ್ತ ಮತ್ತು ನ್ಯಾಯಸಮ್ಮತ, ಚುನಾವಣೆಗಳನ್ನು ನಡೆಸಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಯೋಗಕ್ಕೆ ಮನವಿ ಮಾಡಿದ್ದೇವೆ.
1) 1950 ರ ಆರ್‌ಪಿ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿ ಮತ್ತು ಸ್ವಾಭಾವಿಕ ನ್ಯಾಯದ ತತ್ವವನ್ನು ನಿರಾಕರಿಸದೆ, ಡಿಲೀಟ್ ಮಾಡಿರುವ 33 ಲಕ್ಷ ಮತದಾರರ ಹೆಸರನ್ನು ತಕ್ಷಣ ಮತದಾರರ ಪಟ್ಟಿಗೆ ಸೇರಿಸಿ.

2) ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅವ್ಯವಹಾರಗಳು ಮತ್ತು ಅಕ್ರಮಗಳು ಮತ್ತು "ಚಿಲುಮೆ" ಎಂಬ ಸಂಸ್ಥೆಯು ಮಾಡಿದ ವಂಚನೆಗೆ ಸಂಬಂಧಿಸಿದಂತೆ "ಚುನಾವಣಾ ನೋಂದಣಿ ಅಧಿಕಾರಿಗಳಳಿಗೆ" ಸಂಬಂಧಿಸಿದ ವರದಿಗಳನ್ನು ಬಹಿರಂಗಪಡಿಸಿ. ಜೊತೆಗೆ ಅವರ ವಿರುದ್ಧ ಸೂಕ್ತ ಕ್ರಮವನ್ನು ಪ್ರಾರಂಭಿಸಬೇಕು.
3) ಚುನಾವಣಾ ಪಾತ್ರಗಳಲ್ಲಿ ಮತದಾರರ ಹೆಸರುಗಳ ಅಕ್ರಮ ಸೇರ್ಪಡೆಗಳನ್ನು ಡಿಲೀಟ್ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ. ಇವುಗಳನ್ನು ಸಂಶಯಾಸ್ಪದ ರೀತಿಯಲ್ಲಿ ಮತ್ತು ಅಧಿಕಾರದಲ್ಲಿರುವ ವ್ಯಕ್ತಿಗಳ ಹೇಳಿಕೆ ಮೇರೆಗೆ ಸೇರಿಸಲಾಗಿದೆ.
4) ಪಕ್ಷದ ಅಭ್ಯರ್ಥಿಯ ಭವಿಷ್ಯಕ್ಕಾಗಿ ಮತದಾರರನ್ನು ಕೆಣಕುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಚೋದನೆಯನ್ನು ತಡೆಗಟ್ಟಲು ನೀತಿ ಸಂಹಿತೆಯನ್ನು ತಕ್ಷಣವೇ ಪ್ರಕಟಿಸಿ.
5) ಗುಜರಾತ್, ಉತ್ತರ ಪ್ರದೇಶ ಮತ್ತು ಇತರ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಳಸಿದ ಇವಿಎಂಗಲ ಬದಲಿಗೆ ಬೇರೆ ಯಂತ್ರಗಳನ್ನು ಬಳಸಿ.
6) ಪಿಎಂ, ಸಿಎಂ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇತರ ಸಚಿವರು ಮತ್ತು ಇತರ ಅಧಿಕಾರಿಗಳ ಅಧಿಕಾರ ದುರುಪಯೋಗವನ್ನು ತಪ್ಪಿಸಲು ಹಂತ ಹಂತದ ಬದಲಿಗೆ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆಯನ್ನು ನಡೆಸಬೇಕು.
7) ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಮತ್ತು ತಕ್ಷಣವೇ ಅಂತಹ ಮತಗಟ್ಟೆಗಳಿಗೆ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಿ
8) ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು 3 ವರ್ಷಕ್ಕಿಂತ ಹೆಚ್ಚು ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಮತ್ತು ಸ್ಥಳೀಯ ಜಿಲ್ಲೆಗಳಲ್ಲಿ ಇರುವ ಅಧಿಕಾರಿಗಳನ್ನು ಇತರ ಸ್ಥಳಗಳಿಗೆ ಸ್ಥಳಾಂತರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿ.
9) ಬೆಂಗಳೂರಿನಲ್ಲಿ 3 ವರ್ಷಗಳನ್ನು ಪೂರೈಸಿರುವುದರಿಂದ ಪ್ರಸ್ತುತ ಇರುವ ಡಿ.ಜಿ.ಪಿ.ಯನ್ನು ಬೇರೆಡೆಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ.
10) ಆಡಳಿತ ಪಕ್ಷದಿಂದ ಸಾಮಾಜಿಕ ಮಾಧ್ಯಮಗಳ ದುರುಪಯೋಗವನ್ನು ತಡೆಗಟ್ಟಲು ತಕ್ಷಣದ ಕ್ರಮಗಳನ್ನು ಕೈಗೊಳ್ಳಿ. ಅದನ್ನು ಮೇಲ್ವಿಚಾರಣೆ ಮಾಡಲು ಪಾರದರ್ಶಕ ಸಮಿತಿಯನ್ನು ನೇಮಿಸಿ ಮತ್ತು ಅಭ್ಯರ್ಥಿಯ ವೆಚ್ಚಕ್ಕೆ ಸಾಮಾಜಿಕ ಮಾಧ್ಯಮದ ವೆಚ್ಚವನ್ನು ಸೇರಿಸಿ.












Click it and Unblock the Notifications