• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೆಬೆಲ್ ಶಾಸಕರಿಗೆ ಸಂಕಷ್ಟ, ಅನರ್ಹಗೊಳಿಸುವಂತೆ ಕೋರಿ ಸುಪ್ರೀಂಗೆ ಅರ್ಜಿ

|

ನವದೆಹಲಿ, ಜುಲೈ 12: ಕರ್ನಾಟಕ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ರೆಬೆಲ್ ಶಾಸಕರು ಸುಪ್ರೀಂಕೋರ್ಟಿನಲ್ಲಿ ಹಾಕಿದ್ದ ಅರ್ಜಿ ಇಂದು ವಿಚಾರಣೆ ನಡೆದು, ಯಥಾಸ್ಥಿತಿ ಕಾಯುವಂತೆ ಸೂಚಿಸಿದೆ.

ಅನರ್ಹತೆ ಭೀತಿಯಲ್ಲಿರುವ ಅತೃಪ್ತ ಶಾಸಕರು ಸಲ್ಲಿಸಿದ ರಾಜೀನಾಮೆಗಳು ಅಂಗೀಕಾರವಾಗಿಲ್ಲದ ಕಾರಣ ಕಾಂಗ್ರೆಸ್ -ಜೆಡಿಎಸ್ ಪಕ್ಷಗಳು ತಮ್ಮ ರೆಬೆಲ್ ಶಾಸಕರಿಗೆ ವಿಪ್ ಜಾರಿಗೊಳಿಸಿ ಸದನಕ್ಕೆ ಹಾಜರಾಗಿ, ಇಲ್ಲದಿದ್ದರೆ ಅರ್ನಹತೆ ಎದುರಿಸಿ ಎಂದು ಸೂಚಿಸಿವೆ.

ಒಂದು ವೇಳೆ ವಿಪ್ ಉಲ್ಲಂಘಿಸಿದ್ದಕ್ಕೆ ರೆಬೆಲ್ ಶಾಸಕರನ್ನು ಅನರ್ಹಗೊಳಿಸಿದರೆ, ಸರ್ಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಿದರೆ ಅಗತ್ಯ ಸಂಖ್ಯಾಬಲ ಸಿಗುವುದಿಲ್ಲ, ಅನರ್ಹತೆ ಆದೇಶವನ್ನು ಪ್ರಶ್ನಿಸಿ ಮತ್ತೊಮ್ಮೆ ಕೋರ್ಟ್ ಮೆಟ್ಟಿಲೇರಬಹುದು.

ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು

ಈ ನಡುವೆ ಅತೃಪ್ತ ಶಾಸಕರು ಸಲ್ಲಿರುವ ಅರ್ಜಿ ವಜಾಗೊಳಿಸುವಂತೆ ಯುವ ಕಾಂಗ್ರೆಸ್ಸಿನ 400 ಕಾರ್ಯಕರ್ತರು ಸುಪ್ರೀಂಕೋರ್ಟಿಗೆ ಅರ್ಜಿ ಹಾಕಿದ್ದಾರೆ. ಜೊತೆಗೆ ರಾಜೀನಾಮೆ ನೀಡಿರುವುದು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ, ಅನರ್ಹತೆಗೂ ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಗ್ನಿಪರೀಕ್ಷೆಗೆ ಸಜ್ಜು, ವಿಶ್ವಾಸಮತ ಯಾಚಿಸಲು ಮುಂದಾದ ಎಚ್ಡಿಕೆ

ಈ ನಡುವೆ ಸ್ಪೀಕರ್ ರಮೇಶ್ ಕುಮಾರ್ ಅವರು ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸುಪ್ರೀಂಕೋರ್ಟ್ ಆದೇಶ ಪಾಲಿಸುತ್ತಿಲ್ಲ ಎಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಮುಂದಾಗಿದ್ದ ಬಿಜೆಪಿ, ಸದ್ಯಕ್ಕೆ ಈ ಬಗ್ಗೆ ಒಮ್ಮತದ ತೀರ್ಮಾಣ ಕೈಗೊಂಡಿಲ್ಲ.

ಸುಪ್ರೀಂಕೋರ್ಟ್ ಆದೇಶ : ಮೈತ್ರಿ ಸರ್ಕಾರ, ಅತೃಪ್ತ ಶಾಸಕರು ಸೇಫ್

ಜುಲೈ 11ರಂದು 16 ಮಂದಿ ರಾಜೀನಾಮೆ ಬಳಿಕ ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ:

ಒಟ್ಟು ಸದಸ್ಯ ಬಲ : 224 -16=208

ಕಾಂಗ್ರೆಸ್ + ಜೆಡಿಎಸ್ : 101

ಮ್ಯಾಜಿಕ್ ನಂಬರ್ : 113

ಬಿಜೆಪಿ : 105+2=107

English summary
A fresh plea has been moved in Supreme Court by Karnataka Youth Congress chief and 400 party workers. The party members filed an intervention application in the top court, saying that resignation of lawmakers is "tantamount to defection", and hence demanded their disqualification.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X