Siddaramaiah: ಬಿಜೆಪಿ ವಿರುದ್ಧ ರೊಚ್ಚಿಗೆದ್ದ ಸಿದ್ದರಾಮಯ್ಯ ಆರ್ಮಿ!

ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಆಗಿ, ಬಲಿಷ್ಠ ರಾಜಕೀಯ ನಾಯಕರು ಎಂಬ ಹೆಸರು ಪಡೆದಿದ್ದರು. ಸಿಎಂ ಸಿದ್ದರಾಮಯ್ಯ ಅವರು ಕ್ಲೀನ್ ಹ್ಯಾಂಡ್ ಅನ್ನೋ ಕಿರೀಟವೂ ಅವರ ಬೆಂಬಲಿಗರ ಮೂಲಕ ಸಿಕ್ಕಿತ್ತು. ಆದರೆ ಮೈಸೂರಿನ ಸೈಟು ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ರಾಜ್ಯಪಾಲರಿಂದ ತನಿಖೆಗೂ ಅನುಮತಿ ಸಿಕ್ಕಿದೆ. ಇಂತಹ ಸಮಯದಲ್ಲಿ ಕರ್ನಾಟಕದ ಗಲ್ಲಿ ಗಲ್ಲಿಗಳಲ್ಲೂ ಈ ವಿಚಾರವಾಗಿ ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷ ಸರ್ವ ಸನ್ನದ್ಧವಾಗಿದೆ.

ಸಿದ್ದರಾಮಯ್ಯ ಕೇವಲ ಹೆಸರಲ್ಲ, ರಾಜಕೀಯದಲ್ಲಿ ಸಂಚಲನ ಅಂತಾರೆ ಬೆಂಬಲಿಗರು. ಯಾಕೆ ಅಂದ್ರೆ ದಿಗ್ಗಜ ರಾಜಕೀಯ ಗಣ್ಯರ ಸಾಲಿಗೆ ಸಿಎಂ ಸಿದ್ದರಾಮಯ್ಯ ಕೂಡ ಸೇರ್ತಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ಮಾಸ್ ಲೀಡರ್ ಎಂಬ ಬಿರುದು ಪಡೆದಿದ್ದಾರೆ. ಮಾಜಿ ಪಿಎಂ ದೇವೇಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಹೀಗೆ ಕರ್ನಾಟಕ ರಾಜಕೀಯ ಅಖಾಡದಲ್ಲಿ ಅತಿಹೆಚ್ಚು ಬೆಂಬಲಿಗರನ್ನ ಹೊಂದಿದ ನಾಯಕರು ಇವರು. ಹೀಗಿದ್ದಾಗಲೇ ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ಭ್ರಷ್ಟಾಚಾರ ಪ್ರಕರಣ ಸುತ್ತಿಕೊಂಡಿದ್ದು, ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಕಾಂಗ್ರೆಸ್ ನಾಯಕರು ಇದೀಗ ಗರಂ ಆಗಿ, ಕೇಂದ್ರ ಸರ್ಕಾರ & ಬಿಜೆಪಿ ವಿರುದ್ಧ ಉಗ್ರ ಹೋರಟಕ್ಕೂ ಸಜ್ಜಾಗಿದ್ದಾರೆ.

Congress Will Protest To Oppose The Permission Granted For Prosecution Against The Siddaramaiah

ಸಿಎಂ ಸಿದ್ದರಾಮಯ್ಯ VS ಬಿಜೆಪಿ?

ಕರ್ನಾಟಕದ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ಪ್ರಕರಣ ದೊಡ್ಡ ಹೋರಾಟಕ್ಕೆ ಹಾದಿ ಮಾಡಿಕೊಡಬಹುದು. ಇದೇ ಕಾರಣಕ್ಕೆ ಕಾಂಗ್ರೆಸ್ ನಾಯಕರು ಕೂಡ ಅಲರ್ಟ್ ಆಗಿದ್ದು, ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರು ಅಂದರೆ ಹೈಕಮಾಂಡ್ ಆದೇಶದಂತೆ ಉಗ್ರ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ಹೋರಾಟದ ಮೂಲಕ ಬಿಜೆಪಿ ಉದ್ದೇಶ ಪೂರ್ವಕವಾಗಿಯೇ ಈ ರೀತಿ ಮಾಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಪದೇ, ಪದೇ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳೇ ಇಂತಹ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂಬ ಆರೋಪ ಕಾಂಗ್ರೆಸ್ & ವಿರೋಧ ಪಕ್ಷಗಳದ್ದು. ಹೀಗಾಗಿ ಈ ವಿಚಾರ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ

ಸಿದ್ದರಾಮಯ್ಯ ಬಚಾವ್ ಆಗುತ್ತಾರಾ?

ಕರ್ನಾಟಕದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಂದಹಾಗೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಅನುಮತಿ ನೀಡಿದ್ದಾರೆ. ಈ ಹಿನ್ನಲೆ ಇದೀಗ ಕರ್ನಾಟಕದ ರಾಜಕೀಯ ಅಖಾಡ ರಂಗು, ರಂಗಾಗಿದೆ. ಈ ನಡುವೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕೇಳಿಬಂದ ಹಲವು ಭ್ರಷ್ಟಾಚಾರ ಕೇಸ್‌ಗಳನ್ನ ತನಿಖೆಗೆ ಒಳಪಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ಈಗ ತೊಡೆತಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+