BY Vijayendra : ಒಂದು ಕಡೆ ಗ್ಯಾರಂಟಿ ಕಾರ್ಡ್, ಮತ್ತೊಂದು ಕಡೆ ಗ್ರಾಹಕರಿಗೆ ಪೆಟ್ಟು: ವಿಜಯೇಂದ್ರ
ಮೈಸೂರು, ಜೂನ್ 06: ಕಾಂಗ್ರೆಸ್ ಸರ್ಕಾರ ಜನರಿಗೆ ಮೋಸ ಮಾಡುತ್ತಿದ್ದು, ಸರ್ಕಾರ ಗ್ಯಾರಂಟಿ ಜಾರಿಗೊಳಿಸಲು, ಹೆಚ್ಚೆಚ್ಚು ತೆರಿಗೆ ವಿಧಿಸಲು ಮುಂದಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಸಾಕಷ್ಟುಆಶ್ವಾಸನೆ ಕೊಟ್ಟಿದ್ದರು. ಒಂದು ಕಡೆ ಗ್ಯಾರಂಟಿ ಜಾರಿಗೊಳಿಸುವುದಾಗಿ ಹೇಳಿ, ಮತ್ತೊಂದು ಕಡೆ ಗ್ರಾಹಕರಿಗೆ ಪೆಟ್ಟು ಕೊಡುತ್ತಿದ್ದಾರೆ. ಈ ವಿಷಯದಲ್ಲಿ ಬಿಜೆಪಿ ಕಾದು ನೋಡುತ್ತಿದೆ. ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಗಳನ್ನ ನೀಡಿತ್ತು. ಜನ ಸಾಕಷ್ಟು ನೀರಿಕ್ಷೆಯಲ್ಲಿದ್ದಾರೆ. ಮುಖ್ಯಮಂತ್ರಿಗಳು ಈಗಾಗಲೇ ಗ್ಯಾರಂಟಿ ಘೋಷಣೆ ಮಾಡಿದ್ದಾರೆ. ಗ್ಯಾರಂಟಿಗಳ ಮೇಲೆ ಒಂದಷ್ಟುಷರತ್ತನ್ನೂ ವಿಧಿಸಿದ್ದಾರೆ. ಈ ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಹಣ ಬೇಕಾಗುತ್ತದೆ? ಅದಕ್ಕೆ ಹಣ ಹೇಗೆ ಹೊಂದಿಸಿಕೊಳ್ಳುತ್ತಾರೆ, ಹೊಸ ತೆರಿಗೆ ಹಾಕುತ್ತಾರಾ? ಅಥವಾ ಸಾಲ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರದ ಕಾರ್ಯವೈಖರಿಯನ್ನ ಬಿಜೆಪಿ ಗಮನಿಸುತ್ತಿದೆ ಎಂದರು.
ಚುನಾವಣೆ ಸಂದರ್ಭದಲ್ಲಿ ಅವರು ನೀಡಿರುವ ಭರವಸೆಗಳಿಂದಲೇ ಕಾಂಗ್ರೆಸ್ ಜಯ ಸಾಧಿಸಿದೆ. ಈಗ ಜನರ ಆಶೋತ್ತರಗಳನ್ನು ಈಡೇರಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ನೀಡಿರುವ ಭರವಸೆ ಹುಸಿಯಾಗದಂತೆ ಈಡೇರಿಸಲಿ. ಗ್ಯಾರಂಟಿಯನ್ನು ಪೂರೈಸುವಲ್ಲಿ ಮಧ್ಯಮ ವರ್ಗದ ಜನತೆಯ ಮೇಲೆ ಸರ್ಕಾರ ಎಕ್ಸೈಸ್ ಡ್ಯೂಟಿ ಜಾಸ್ತಿ ಮಾಡುವುದು, ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚು ತೆರಿಗೆಯನ್ನು ಹಾಕುವಂತಹ ಸಾಧ್ಯತೆಗಳೂ ಇವೆ ಎಂದರು.
ಇನ್ನೂ ಸದೃಢ ಭಾರತವನ್ನು ನಿರ್ಮಾಣ ಮಾಡಲು ಮಕ್ಕಳನ್ನು ಹುರಿದುಂಬಿಸಬೇಕಾಗಿದೆ. ಅದಕ್ಕಾಗಿ ಎನ್‌ಇಪಿ ಜಾರಿಗೊಳಿಸಲಾಗಿದೆ. ಅದನ್ನು ಸಹ ರದ್ಧುಪಡಿಸಲು ಕಾಂಗ್ರೆಸ್ ಮುಂದಾಗಿದೆ. ಎನ್‌ಇಪಿ ವಿಚಾರವಾಗಿ ರಾಜ್ಯ ಸರ್ಕಾರ ರಾಜಕೀಯ ಮಾಡಬೇಕಾದ ಅಗತ್ಯವಿಲ್ಲ. ಇವೆಲ್ಲವನ್ನು ಸಹ ಪಕ್ಷ ಕಾದು ನೋಡುತ್ತಿದೆ.
ಸ್ವಾತಂತ್ರ್ಯ ಬಂದು ಹಲವಾರು ವರ್ಷ ದೇಶವನ್ನು ಆಳಿದ್ದು ಕಾಂಗ್ರೆಸ್. ಅಗ ಬಡತನವನ್ನು ನಿರ್ಮೂಲನೆ ಹಾಗೂ ಜನರಿಗೆ ಶಿಕ್ಷಣವನ್ನು ನೀಡಬೇಕಿತ್ತು. ಆದರೆ ಅದನ್ನು ಮಾಡದೆæ ಅವರನ್ನು ಬಡವರಾಗಿಯೇ ಇಟ್ಟು ಅನಕ್ಷರತೆಯನ್ನು ನೀಡಿ, ಮತ ಬ್ಯಾಂಕ್ ಆಗಿ ಮಾಡಿಕೊಂಡಿದ್ದಾರೆ ಎಂದರು.












Click it and Unblock the Notifications