Congress vs Bjp: ಬಿಜೆಪಿಯ 3 ಸುಳ್ಳುಗಳಿವು: ಸುಳ್ಳು ಸುದ್ದಿಗಳ ಫ್ಯಾಕ್ಟರಿಯಾಗಿರುವ ಬಿಜೆಪಿಯವರೇ: ಕಾಂಗ್ರೆಸ್ ಟೀಕೆ

Congress vs Bjp: ಕರ್ನಾಟಕ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಸುಳ್ಳು ಸುದ್ದಿಗಳ ಫ್ಯಾಕ್ಟರಿಯಾಗಿರುವ ಬಿಜೆಪಿಯವರೇ, ಮೊಸಳೆ ಕಣ್ಣೀರು ಸುರಿಸುವ ಮುನ್ನ ಈ ಸತ್ಯಾಂಶಗಳನ್ನು ಕಣ್ಣು ತೆರೆದು ನೋಡಿ. ರಾಜ್ಯದ ಜನರಿಗೆ ವಿಷ ಕುಡಿಸುತ್ತಿರುವುದು ನಾವಲ್ಲ, ದಿನಬೆಳಗಾದರೆ ಅಗತ್ಯ ವಸ್ತುಗಳ ಬೆಲೆ ಏರಿಸಿ ಜನರ ರಕ್ತ ಹೀರುತ್ತಿರುವ ನಿಮ್ಮ ಕೇಂದ್ರ ಸರ್ಕಾರ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.

ಕೆ ಎಸ್‌ಆರ್‌ಟಿಸಿ (KSRTC) ಲಗೇಜ್ ದರ ಏರಿಕೆಯ ಬಗ್ಗೆ ಬೊಬ್ಬೆ ಹೊಡೆಯುವ ಮುನ್ನ ನಿಮ್ಮ ಗಮನಕ್ಕೆ:

ಸತ್ಯಾಂಶ 1: ಪ್ರಯಾಣಿಕರಿಗೆ ಹೊರೆಯಿಲ್ಲ

ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೂ 30 ಕೆ.ಜಿ (30 KG) ತೂಕದವರೆಗಿನ ಲಗೇಜ್ ಸಂಪೂರ್ಣ ಉಚಿತ. ಇದಕ್ಕೆ ಚಾರ್ಜ್ ಇಲ್ಲ. ಅಲ್ಪ ದರ ಪರಿಷ್ಕರಣೆಯಾಗಿರುವುದು ಕೇವಲ ಪ್ರಯಾಣಿಕರಿಲ್ಲದ ವಾಣಿಜ್ಯ ಪಾರ್ಸೆಲ್ ಮತ್ತು ಮಿತಿ ಮೀರಿದ ಲಗೇಜ್‌ಗೆ ಮಾತ್ರ. ಈ ಸತ್ಯವನ್ನು ಮುಚ್ಚಿಟ್ಟು ಜನರನ್ನು ದಾರಿ ತಪ್ಪಿಸುವುದೇಕೆ.

Congress vs BJP

ಸತ್ಯಾಂಶ 2: ಇದು ಬಾಕಿ ಉಳಿದಿದ್ದ ಪ್ರಕ್ರಿಯೆ

ನಿಯಮದ ಪ್ರಕಾರ ಬಸ್ ಪ್ರಯಾಣ ದರ ಏರಿಕೆಯಾದಾಗ ಲಗೇಜ್ ದರವೂ ಏರಿಕೆಯಾಗಬೇಕು. ಕಳೆದ ಜನವರಿ 2025ರಲ್ಲಿ ಬಸ್ ಪ್ರಯಾಣ ದರ ಪರಿಷ್ಕರಣೆಯಾದಾಗ, ಪ್ರಯಾಣಿಕರ ಹಿತದೃಷ್ಟಿಯಿಂದ ಲಗೇಜ್ ದರವನ್ನು ಏರಿಕೆ ಮಾಡಿರಲಿಲ್ಲ. ಆ ವ್ಯತ್ಯಾಸವನ್ನು ಸರಿದೂಗಿಸಲು ಮತ್ತು ಸಂಸ್ಥೆಯ ಉಳಿವಿಗೆ ಈಗ ದರ ಪರಿಷ್ಕರಣೆ ಅನಿವಾರ್ಯವಾಗಿದೆ.

ಸತ್ಯಾಂಶ 3: ನಿಮ್ಮ ಅವಧಿಯಲ್ಲಿ ಆಗಿದ್ದು 'ಅಮೃತ'ವೇ?

ಇತಿಹಾಸ ಮರೆಯಬೇಡಿ! ಡಿಸೆಂಬರ್ 2021ರಲ್ಲಿ ರಾಜ್ಯದಲ್ಲಿ ನಿಮ್ಮದೇ ಬಿಜೆಪಿ ಡಬಲ್ ಎಂಜಿನ್ ಸರ್ಕಾರವಿದ್ದಾಗಲೂ ಇದೇ ರೀತಿ ಲಗೇಜ್ ದರವನ್ನು ಏರಿಕೆ ಮಾಡಲಾಗಿತ್ತು. ಅಂದು ನೀವು ಮಾಡಿದ್ದು 'ಸಾಧನೆ', ಇಂದು ನಾವು ಮಾಡಿದರೆ 'ವಿಷ'ವಾಯಿತೇ? ಎಂಥಹ ವಿಪರ್ಯಾಸ ನಿಮ್ಮದು. ಅಸಲಿ 'ಲೂಟಿಕೋರರು' ಯಾರು?

ರಾಜ್ಯದ ಬಗ್ಗೆ ಮಾತನಾಡುವ ಮುನ್ನ ಕೇಂದ್ರದತ್ತ ನೋಡಿ:

ಪೆಟ್ರೋಲ್, ಡೀಸೆಲ್ ಬೆಲೆಯನ್ನು 'ಸೆಂಚುರಿ' ಬಾರಿಸುವಂತೆ ಮಾಡಿ ಸಾರಿಗೆ ವೆಚ್ಚ ಹೆಚ್ಚಿಸಿದ್ದು ಯಾರು ?

400 ರೂ. ಇದ್ದ ಸಿಲಿಂಡರ್ ಬೆಲೆಯನ್ನು ಈ ಹಿಂದೆ 1000ರೂ. ಗಡಿ ದಾಟಿಸಿ ತಾಯಂದಿರ ಕಣ್ಣೀರು ಹಾಕಿಸಿದ್ದು ಯಾರು ?

ಅಡುಗೆ ಎಣ್ಣೆ, ಬೇಳೆ-ಕಾಳುಗಳ ಬೆಲೆ ಗಗನಕ್ಕೇರಿಸಿ ಬಡವರ ತುತ್ತು ಅನ್ನ ಕಿತ್ತುಕೊಂಡಿದ್ದು ಬಿಜೆಪಿ ಸರ್ಕಾರವಲ್ಲವೇ ?

ನಾವು 'ಗ್ಯಾರಂಟಿ' ಯೋಜನೆಗಳ ಮೂಲಕ ಬಡವರ ಜೇಬಿಗೆ ಹಣ ಹಾಕಿ ಬದುಕು ಕಟ್ಟಿಕೊಡುತ್ತಿದ್ದೇವೆ. ಆದರೆ ನೀವು ಜಿಎಸ್‌ಟಿ ಮತ್ತು ಬೆಲೆ ಏರಿಕೆ ಮೂಲಕ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದೀರಿ. ಮಹಾತ್ಮ ಗಾಂಧಿಯವರ ಕನಸಿನ ಬಗ್ಗೆ ಮಾತನಾಡುವ ನೈತಿಕತೆ ಗೋಡ್ಸೆ ಆರಾಧಕರಿಗಿಲ್ಲ. ಸುಳ್ಳು ಹೇಳುವುದನ್ನು ನಿಲ್ಲಿಸಿ, ತಾಕತ್ತಿದ್ದರೆ ಕೇಂದ್ರದ ಬೆಲೆ ಏರಿಕೆ ಬಗ್ಗೆ ಮಾತನಾಡಿ ಎಂದು ಕಾಂಗ್ರೆಸ್ ಪಕ್ಷವು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ.

ಬಿಜೆಪಿ ಟ್ವೀಟ್

ಫ್ರೀ ಬಸ್ ಬಲೆಯಲ್ಲಿ ಲಗೇಜ್ ಬಾಂಬ್. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಬಸ್ ಹತ್ತೋಕೆ ಮಹಿಳೆಯರಿಗೆ ಫ್ರೀ ಸರಿ, ಆದ್ರೆ ತಲೆ ಮೇಲೆ ಮೂಟೆ ಹೊತ್ತುಕೊಂಡ್ರೆ, ಜೇಬು ಖಾಲಿ ಆಗುತ್ತೆ ಅಲ್ವಾ, ಡೀಸೆಲ್ ದರ, ನಿರ್ವಹಣೆ ನೆಪ ಹೇಳಿ ಜನಸಾಮಾನ್ಯರ ಮೇಲೆ ಬರೆ ಎಳೆಯೋದೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಬಿಜೆಪಿ ಟ್ವೀಟ್ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+