ಶಾಸಕ ಮುನಿರತ್ನರನ್ನು ಬೆಂಬಲಿಸಿದ್ದು ಇದೇ ಕಾಂಗ್ರೆಸ್: ಪಶ್ಚಾತಾಪದ ಬಗ್ಗೆ ಆರ್.ಅಶೋಕ್ ಹೇಳಿದ್ದೇನು?
ದೊಡ್ಡಬಳ್ಳಾಪುರ, ಸೆಪ್ಟಂಬರ್ 19: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೋವಿಡ್ ವೇಳೆ ಮನೆಯಲ್ಲಿಯೇ ಕುಳಿತಿದ್ದರು. ಆಗ ಬಿಜೆಪಿಯ ಆರೋಗ್ಯ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಕೋವಿಡ್ ವಿರುದ್ಧ ಕೆಲಸ ಮಾಡಿದ್ದರು. ಈಗ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ರಾಜ್ಯಪಾಲರ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಇದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಸುದ್ದಿಗಾರರ ಜೊತೆಗೆ ಮಾತನಾಡಿದರು. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಸೃಷ್ಟಿಯಾಗಿದೆ. ಸರ್ಕಾರ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸದರು.

ಇಂದಿನ ಸಂಸದರಾದ ಡಾ.ಕೆ.ಸುಧಾಕರ್ ಅವರು ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದ್ದರು. ಇದೀಗ ಅವರ ಮೇಲೆ ಕೋವಿಡ್ ಹಗರಣದ ಆರೋಪ ಹೊರಿಸಲಾಗಿದೆ. ರಾಜ್ಯ ರಾಜ್ಯಪಾಲರ ಮೇಲೆ ಕಾಂಗ್ರೆಸ್ ಸರ್ಕಾರ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಇದೆಲ್ಲ ನೋಡಿದರೆ ಈ ಕಾಂಗ್ರೆಸ್ ಶಾಶ್ವತವಾಗಿ ಅಧಿಕಾರದಲ್ಲಿ ಇರಲಿದೆ ಎಂಬ ಚಿಂತನೆ ಹೊಂದಿದಂತಿದೆ. ನೀವು (ಕಾಂಗ್ರೆಸ್) ಮಾಡುವ ಪಾಪಕ್ಕೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಮುನಿರತ್ನರನ್ನು ಬೆಂಬಲಿಸಿದ್ದು ಕಾಂಗ್ರೆಸ್: ಆರ್.ಅಶೋಕ್
ಆರ್ ಆರ್ ನಗರ ಶಾಸಕ ಮುನಿರತ್ನ ಬಿಜೆಪಿಗೆ ಮುನ್ನ ಕಾಂಗ್ರೆಸ್‌ನಲ್ಲೇ ಇದ್ದವರು. ಅವರು ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್ ನಾಯಕರೇ ಅವರನ್ನು ಬೆಂಬಲಿಸಿದ್ದರು. ರಾಯಚೂರಿನಲ್ಲಿ ಪಿಎಸ್‌ಐ ಕುಟುಂಬದವರು 16 ಗಂಟೆ ಬೀದಿಯಲ್ಲಿ ಕುಳಿತು ಪ್ರತಿಭಟನೆ ಮಾಡಿದಾಗ ಶಾಸಕರನ್ನು ಬಂಧಿಸಲಿಲ್ಲ.
ಕೃಷಿ ಅಧಿಕಾರಿ ವೀಡಿಯೋ ಮಾಡಿ ಕಳುಹಿಸಿದಾಗ ಸಚಿವರನ್ನು ಇದೇ ಸರ್ಕಾರ ಬಂಧನ ಮಾಡಿಲ್ಲ. ಶಾಸಕ ಮುನಿರತ್ನ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಏಕಾಏಕಿ ಬಂಧಿಸಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.
ಇದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆಯು ಸಿಎಂ ಆಗಿದ್ದರು. ಆಗ ಅವರ ವಿರುದ್ಧ 65 ಪ್ರಕರಣಗಳಿತ್ತು. ಆದರೆ ಅವರು ಮಾತ್ರ ಶುದ್ಧ ಎನ್ನಲಾಗುತ್ತದೆ. ಬಿಜೆಪಿಯವರು ಸಂವಿಧಾನದ ಬಗ್ಗೆ ಸಣ್ಣ ಮಾತು ಹೇಳಿದ್ದಕ್ಕೆ, ಅದನ್ನೇ ದೊಡ್ಡ ಸಮಸ್ಯೆ ಎಂಬಂತೆ ಬಿಂಬಿಸಲಾಗಿದೆ. ನಿಮ್ಮ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋಗಿ ಮೀಸಲು ಬದಲಾಯಿಸುವ ಬಗ್ಗೆ ಮಾತನಾಡಿದ್ದರು. ಈ ಕುರಿತು ಕಾಂಗ್ರೆಸ್ ಪ್ರತಿಭಟನೆ ಮಾಡಲಿ ಎಂದು ಅವರು ಸವಾಲು ಹಾಕಿದರು.
ಬಿಜೆಪಿ ಮುಂದೆ ಕಾಂಗ್ರೆಸ್‌ಗೆ ಸೋಲುವ ಭಯ
ಮಾಜಿ ಪ್ರಧಾನಿ ದಿ.ಜವಹರಲಾಲ್ ನೆಹರೂ ಅಧಿಕಾರದಲ್ಲಿದ್ದಾಗ ಏಕಕಾಲಕ್ಕೆ ಚುನಾವಣೆ ನಡೆಯುತ್ತಿತ್ತು. ಇದೀಗ ಒಂದೇ ದೇಶ ಒಂದೇ ಎಲೆಕ್ಟನ್ ಹೆಸರಿನಲ್ಲಿ ಎನ್‌ಡಿಎ ಸರ್ಕಾರ ಮಾಡಲು ಹೊರಟರೆ ಅದನ್ನು ಎಂದು ಹೇಳಲಾಗುತ್ತಿದೆ.
ಏಕಕಾಲದಲ್ಲಿ ಚುನಾವಣೆ ನಡೆದರೆ ಅದರಲ್ಲಿ ಕೋಟ್ಯಾಂತರ ರೂಪಾಯಿ ಉಳಿತಾಯವಾಗುತ್ತದೆ. ಅದೇ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದು. ಆದರೆ ಈ ರೀತಿ ಮಾಡಿದರೆ ಸೋಲುತ್ತೇವೆ ಎಂಬ ಭಯ ಕಾಂಗ್ರೆಸ್ ಇದೆ. ಆದ್ದರಿಂದ ಈ ಹೊಸ ವ್ಯವಸ್ಥೆಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಹೆಚ್ಚು ಅವಕಾಶ
ಬಿಜೆಪಿ ಪಕ್ಷ ಎಂದರೆ ದೇವಾಲಯ ಇದ್ದಂತೆ. ಬಿಜೆಪಿಯು ಅತೀ ಹೆಚ್ಚು ಸದಸ್ಯರನ್ನು ಹೊಂದಿದೆ. ಈಗ ಸದಸ್ಯತ್ವ ಅಭಿಯಾನ ಮಾಡಲಾಗುತ್ತಿದೆ. ಇಲ್ಲಿ ಕಾರ್ಯಕರ್ತರಿಗೆ ಹೆಚ್ಚು ಅವಕಾಶವಿದೆ. ಎಲ್ಲ ಕಾರ್ಯಕರ್ತರು ನಿಗದಿತ ಗುರಿ ಇಟ್ಟುಕೊಂಡು ಜನರನ್ನು ಪಕ್ಷಕ್ಕೆ ಸೇರಿಸಬೇಕು. ಅನೇಕ ಸಲ ಕಾರ್ಯಕರ್ತರ ಕುಟುಂಬದವರೇ ಸದಸ್ಯರಾಗಿ ಪಕ್ಷಕ್ಕೆ ಸೇರಿರುವುದಿಲ್ಲ. ಅಂತಹ ಕಡೆ ಗಮನಿಸಿ ಪಕ್ಷಕ್ಕೆ ಹೆಸರು ನೋಂದಾಯಿಸಬೇಕು ಎಂದು ಅವರು ಸಲಹೆ ನೀಡಿದರು.
ಹೊಸಕೆರೆಹಳ್ಳಿಯ ವಿಶೇಷ ಚೇತನ ಕಾರ್ಯಕರ್ತೆಯೊಬ್ಬರು ಒಂದೇ ದಿನದಲ್ಲಿ 940 ಜನರನ್ನು ಸದಸ್ಯರಾಗಿ ಪಕ್ಷಕ್ಕೆ ಸೇರಿಸಿದ್ದಾರೆ. ಅವರು ಒಂದು ಸಾವಿರ ಗುರಿ ತಲುಪುವುದಾಗಿ ಹೇಳಿದ್ದರು. ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸದಸ್ಯತ್ವ ಅಭಿಯಾನ ಮಾಡಬೇಕು. ಬೂತ್ ಮಟ್ಟದಲ್ಲಿ ಐದು ಜನರನ್ನು ಸದಸ್ಯತ್ವ ಅಭಿಯಾನಕ್ಕಾಗಿ ಕೆಲಸ ಮಾಡಲು ನಿಯೋಜಿಸಬೇಕು ಎಂದು ಅವರು ಹೇಳಿದರು.












Click it and Unblock the Notifications