ನ್ಯಾಷನಲ್ ಹೆರಾಲ್ಡ್ ಕೇಸ್: ಲೂಟಿಯೇ ಬಿಜೆಪಿ ಧರ್ಮ ಎಂದ ಕಾಂಗ್ರೆಸ್
ಬೆಂಗಳೂರು, ಜೂ. 14: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿದ ಕಾಂಗ್ರೆಸ್, ಬಿಜೆಪಿಯ ಯಾವ ಹಗರಣಗಳು ತನಿಖೆಯಾಗುವುದಿಲ್ಲ, ಲೂಟಿಯೇ ಬಿಜೆಪಿ ಧರ್ಮ ಎಂದು ಸರಣಿ ಕೂ ಮಾಡಿದೆ.
ಬಿಜೆಪಿ ಸರ್ಕಾರದ ವಿರುದ್ಧ ಹೋರಾಟವು ಮತ್ತೊಮ್ಮೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಟವನ್ನು ನೆನಪಿಸುತ್ತಿದೆ. ಹೋರಾಡುತ್ತೇವೆ, ದೇಶವನ್ನು ಫ್ಯಾಸಿಸ್ಟ್ ಶಕ್ತಿಗಳಿಂದ ಮುಕ್ತಗೊಳಿಸುತ್ತೇವೆ, ಆ ಬದ್ಧತೆ ನಮಗಿದೆ, ಜನಪ್ರತಿನಿಧಿಗಳೊಂದಿಗೆ ಪೊಲೀಸರ ಈ ನಡವಳಿಕೆ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ ಎಂದು ಕರ್ನಾಟಕ ಕಾಂಗ್ರೆಸ್ ಕಿಡಿ ಕಾರಿದೆ.
ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ ಸಮನ್ಸ್ ಜಾರಿ ಹಿನ್ನೆಲೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಸೋಮವಾರ (ಜೂನ್ 13)ವೂ ರಾಹುಲ್ ಗಾಂಧಿ ಅವರ ವಿಚಾರಣೆಯನ್ನು ಇಡಿ ಮಾಡಿದೆ. ಈ ವೇಳೆ ಬೆಳಗ್ಗೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಕಚೇರಿಯಿಂದ ಇಡಿ ಕಚೇರಿವರೆಗೂ ಕಾಲ್ನಡಿಗೆ ಶುರು ಮಾಡಿದ್ದರು. ಸ್ವಲ್ಪ ದೂರ ತೆರಳುತ್ತಿದ್ದಂತೆ ಕಾರ್ಯಕರ್ತರು ಮೈ ಮೇಲೆ ನುಗ್ಗಿ ಬರುವುದಕ್ಕೆ ಶುರುವಾದ ಹಿನ್ನೆಲೆ ಕಾರು ಏರಿ ಇಡಿ ಕಚೇರಿಗೆ ತಲುಪಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ರಾಹುಲ್ ಗಾಂಧಿಯನ್ನು ಬರೋಬ್ಬರಿ 9 ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಡಿಸಲಾಯಿತು. ಇಂದು ಮತ್ತೆ ರಾಹುಲ್ ಗಾಂಧಿ ಅವರ ವಿಚಾರಣೆ ನಡೆಯುತ್ತಿದೆ.
ರಫೆಲ್ ಹಗರಣ
ರಫೆಲ್ ಹಗರಣ: ರಫೇಲ್ ಹಗರಣ ಮುಚ್ಚಿ ಹಾಕಲಾಗುತ್ತದೆ. ಫೈಲ್‌ಗಳು ಕಳೆದುಹೋಗುತ್ತವೆ! ಪಿಎಂ ಕೇರ್ಸ್ ಹಗರಣ ತನಿಖೆಯೇ ನಡೆಯುವುದಿಲ್ಲ, ಜನರ ಹಣ ಲೂಟಿ ಹೊಡೆಯಲಾಗುತ್ತದೆ. ಶವಪೆಟ್ಟಿಗೆ ಹಗರಣ - ಪ್ರಮುಖ ಆರೋಪಿಗಳನ್ನು ಬಚಾವು ಮಾಡಲಾಗುತ್ತದೆ. ಸಿಎಂ ಹುದ್ದೆಗೆ ₹2500 ಕೋಟಿ ಆಫರ್ ಮಾಡುವುದು ತನಿಖೆಯೇ ಆಗುವುದಿಲ್ಲ. ಲೂಟಿಯೇ ಬಿಜೆಪಿ ಧರ್ಮ ಎಂದು ಕಾಂಗ್ರೆಸ್ ಟೀಕಿಸಿದೆ.
ಪಿಎಂ ಕೇರ್ ಫಂಡ್ ಬಗ್ಗೆ ಯಾಕೆ ತುಟಿ ಬಿಚ್ಚುವುದಿಲ್ಲ
ಮುಗಿದಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುನ್ನೆಲೆಗೆ ತಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವ ಬಿಜೆಪಿ ಈ ದಶಕದ ಅತಿದೊಡ್ಡ ಹಗರಣ ಪಿಎಂ ಕೇರ್ ಫಂಡ್ ಬಗ್ಗೆ ಯಾಕೆ ತುಟಿ ಬಿಚ್ಚುವುದಿಲ್ಲ? ED ನೋಟಿಸ್ ನರೇಂದ್ರ ಮೋದಿ, ಅಮಿತ್ ಶಾ ಅವರಿಗೆ ಯಾವಾಗ ತಲುಪಲಿದೆ? ಜನರ ಹಣದ ಸರಿಯಾದ ಲೆಕ್ಕ ಯಾವಾಗ ಬಹಿರಂಗ ಪಡಿಸುತ್ತೀರಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸೋನಿಯಾ ತ್ಯಾಗಮಯಿ:
ಪ್ರಧಾನಿಯಾಗುವ ಅವಕಾಶವನ್ನು ಸೋನಿಯಾಗಾಂಧಿ ಅವರು ತ್ಯಾಗ ಮಾಡಿದರು, ಪ್ರಧಾನಿ, ಉಪ ಪ್ರಧಾನಿ, ಕೇಂದ್ರ ಸಚಿವರಾಗುವ ಅವಕಾಶವನ್ನು ರಾಹುಲ್ ಗಾಂಧಿ ಅವರು ತ್ಯಾಗ ಮಾಡಿದರು. ಆದರೆ, ಬಿಜೆಪಿ ಸರ್ಕಾರ ಇಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ಬೇಸರ ವ್ಯಕ್ತಪಡಿಸಿದೆ.

ಈ ನಡವಳಿಕೆ ಪ್ರಜಾಪ್ರಭುತ್ವ
''ಬಿಜೆಪಿ ಸರ್ಕಾರದ ವಿರುದ್ಧ ಹೋರಾಟವು ಮತ್ತೊಮ್ಮೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ದದ ಹೋರಾಟವನ್ನು ನೆನಪಿಸುತ್ತಿದೆ. ಹೋರಾಡುತ್ತೇವೆ, ದೇಶವನ್ನು ಫ್ಯಾಸಿಸ್ಟ್ ಶಕ್ತಿಗಳಿಂದ ಮುಕ್ತಗೊಳಿಸುತ್ತೇವೆ, ಆ ಬದ್ಧತೆ ನಮಗಿದೆ. ಜನಪ್ರತಿನಿಧಿಗಳೊಂದಿಗೆ ಪೊಲೀಸರ ಈ ನಡವಳಿಕೆ ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಏನಿದು ಪ್ರಕರಣ?
ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ವೈಐಎಲ್ 90.25 ಕೋಟಿ ರೂಪಾಯಿ ಬಡ್ಡಿರಹಿತ ಸಾಲವನ್ನು ನೀಡಿತ್ತು. ಇದರಲ್ಲಿ ಎಐಸಿಸಿ ಖಜಾನೆಯಿಂದ ಐವತ್ತು ಲಕ್ಷ ರೂಪಾಯಿ ನೇರವಾಗಿ ವರ್ಗಾವಣೆಯಾಗಿತ್ತು ಎಂಬ ಆರೋಪವಿದೆ. ಅಲ್ಲದೇ, ಹೆರಾಲ್ಡ್ ಒಡೆತನದಲ್ಲಿದ್ದ 'ಹೆರಾಲ್ಡ್ ಹೌಸ್' ನವೀಕರಣಕ್ಕೆ ಒಂದು ಕೋಟಿ ರೂಪಾಯಿ ನೀಡಿತ್ತು ಎಂದು ಹೇಳಲಾಗುತ್ತಿದೆ.












Click it and Unblock the Notifications