‘ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ!’
ಕರ್ನಾಟಕ ಬಿಜೆಪಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ, ಬಿ.ವೈ. ವಿಜಯೇಂದ್ರ ಅವರನ್ನು ಅಧ್ಯಕ್ಷರಾಗಿ ನಿಯೋಜಿಸಿದ ನಂತರ ಸಾಕಷ್ಟು ಸಂಚಲನ ಸೃಷ್ಟಿಯಾಗಿದೆ. ಇದು ಯಾವ ಮಟ್ಟಿಗೆ ಎಂದರೆ ಬಹಿರಂಗವಾಗಿ ಬಿಜೆಪಿ ಶಾಸಕರು ಬಿ.ವೈ. ವಿಜಯೇಂದ್ರ ಆಯ್ಕೆ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಅದರಲ್ಲೂ ಹಿಂದೆ ಬಿ.ಎಸ್. ಯಡಿಯೂರಪ್ಪ ವಿರುದ್ಧ ಗುಡುಗುತ್ತಿದ್ದ ಕೆಲ ಬಿಜೆಪಿ ನಾಯಕರು ವಿಜಯೇಂದ್ರ ವಿರುದ್ಧ ತಿರುಗಿಬಿದ್ದಿದ್ದಾರೆ. ಇದನ್ನೇ ಈಗ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿದೆ.
ಕರ್ನಾಟಕದಲ್ಲಿ ಬಿಜೆಪಿಗೆ ದೊಡ್ಡ ಸಂಕಷ್ಟ ಎದುರಾಗಿದೆ, ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಕೇಂದ್ರದ ವರಿಷ್ಠರು ನಡೆಸಿಕೊಂಡ ರೀತಿ ರಾಜ್ಯದಲ್ಲಿ ಬಿಜೆಪಿಗೆ ದೊಡ್ಡ ಪೆಟ್ಟನ್ನೇ ಕೊಟ್ಟಿತ್ತು. ಇಷ್ಟಾದ ನಂತರ ಈಗ ಮತ್ತೆ ಯಡಿಯೂರಪ್ಪ ಅವರನ್ನೇ ಮುನ್ನೆಲೆಗೆ ತಂದು, ಅವರ ಪುತ್ರನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿದೆ. ಇಷ್ಟಾದರೂ ಕೆಲವರು ಸುಮ್ಮನೆ ಇರದೆ ಕಿರಿಕ್ ಜೋರು ಮಾಡುತ್ತಿದ್ದಾರೆ. ಹೀಗಾಗಿ ಮತ್ತೊಮ್ಮೆ ಕರ್ನಾಟಕ ಬಿಜೆಪಿ ಒಳಗಡೆ ಕಿಚ್ಚು ಹೊತ್ತಿದೆ. ಇದೇ ಅಸ್ತ್ರವನ್ನು ಬಳಸಿ ಕರ್ನಾಟಕ ಕಾಂಗ್ರೆಸ್ ಗಂಭೀರ ಆರೋಪವನ್ನ ಮಾಡಿದೆ.

'ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ...'
ಕರ್ನಾಟಕ ಬಿಜೆಪಿ ಒಳಗೆ ಮತ್ತೆ ಎಲ್ಲಾ ಸರಿ ಇಲ್ಲ, ಅಸಮಾಧಾನದ ಕಿಡಿ ಜೋರಾಗುತ್ತಿದೆ ಅನ್ನೋದು ಕರ್ನಾಟಕ ಕಾಂಗ್ರೆಸ್ ಆರೋಪ. ಹೀಗಾಗಿ ಬಿಜೆಪಿ ಆಂತರಿಕ ವಿಚಾರ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ 'ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ! ಅಶೋಕ್, ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಬಿಜೆಪಿಗರು ತಯಾರಿಲ್ಲ. @RAshokaBJP ಅವರೇ, ನೀವು ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಹೋರಾಟ ನಡೆಸಬೇಕಾದ ಸ್ಥಿತಿ ಇದೆ, ದಿನಕ್ಕೊಬ್ಬರು ವಿರೋಧ ಪಕ್ಷದ ವಿರೋಧಿ ನಾಯಕರು ಹುಟ್ಟಿಕೊಳ್ಳುತ್ತಿದ್ದಾರೆ! 6 ತಿಂಗಳು ಸುದೀರ್ಘ ಸರ್ಕಸ್ ನಡೆಸಿದರೂ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆಗೆ ಅಳೆದು ತೂಗಲು ಸಮಯ ಸಿಗಲಿಲ್ಲವೇ @BJP4Karnataka? #BJPvsBJP' ಅಂತಾ ಟ್ವೀಟ್ ಮಾಡಿದೆ ಕರ್ನಾಟಕ ಕಾಂಗ್ರೆಸ್.
ವಿಜಯೇಂದ್ರ ಬಿಜೆಪಿಯಲ್ಲಿರುವ ಕೆಜೆಪಿಯ ಅಧ್ಯಕ್ಷರೇ ಹೊರತು ಅಸಲಿ ಬಿಜೆಪಿಯ ಅಧ್ಯಕ್ಷರಲ್ಲ!
— Karnataka Congress (@INCKarnataka) November 23, 2023
ಅಶೋಕ್, ವಿಜಯೇಂದ್ರರನ್ನು ಒಪ್ಪಿಕೊಳ್ಳಲು ಬಿಜೆಪಿಗರು ತಯಾರಿಲ್ಲ.@RAshokaBJP ಅವರೇ, ನೀವು ಕಾಂಗ್ರೆಸ್ ಸರ್ಕಾರದ ವಿರುದ್ದ ಹೋರಾಡುವ ಮೊದಲು ನಿಮ್ಮ ಪಕ್ಷದ ನಾಯಕರ ವಿರುದ್ಧ ಹೋರಾಟ ನಡೆಸಬೇಕಾದ ಸ್ಥಿತಿ ಇದೆ, ದಿನಕ್ಕೊಬ್ಬರು ವಿರೋಧ ಪಕ್ಷದ ವಿರೋಧಿ… pic.twitter.com/uzcsL4YsZu

ಒಟ್ನಲ್ಲಿ ಕರ್ನಾಟಕ ಬಿಜೆಪಿ ಒಳಗಿನ ಆಂತರಿಕ ಕಚ್ಚಾಟವನ್ನೇ ಅಸ್ತ್ರ ಮಾಡಕೊಳ್ಳುತ್ತಿರುವ ಕಾಂಗ್ರೆಸ್ ದಿನಕ್ಕೊಂದು ಬಾಣ ಪ್ರಯೋಗ ಮಾಡುತ್ತಿದೆ. ಬಿಜೆಪಿ ಒಳಗೆ ಹೊತ್ತಿರುವ ಕಿಚ್ಚು ಮತ್ತು ನಾಯಕರ ಅಸಮಾಧಾನ ದಾಳವಾಗಿದೆ. ಹೀಗಾಗಿ ಬಿಜೆಪಿಯ ಕೇಂದ್ರ ನಾಯಕರು, ರಾಜ್ಯದ ವರಿಷ್ಠರು ಅಸಮಾಧಾನದ ಬೆಂಕಿಯನ್ನ ಆರಿಸುತ್ತಾರಾ? ಅಥವಾ ಕರ್ನಾಟಕದಲ್ಲಿ ಬಿಜೆಪಿ VS ಬಿಜೆಪಿ ಮುಂದುವರಿಯುತ್ತಾ? ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರ ಪಡೆಯಲು ಸ್ವಲ್ಪ ದಿನ ಕಾದು ನೋಡಬೇಕಿದೆ.
ಆರ್.ಅಶೋಕ್ ವಿರುದ್ಧವೂ ಅಸ್ತ್ರ!
ಕರ್ನಾಟಕ ಕಾಂಗ್ರೆಸ್ ಇಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜೊತೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧವೂ ಅಸ್ತ್ರ ಪ್ರಯೋಗ ಮಾಡುತ್ತಿದೆ. ಯಾಕಂದ್ರೆ ಈಗಾಗ್ಲೇ ಆರ್. ಅಶೋಕ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ಬಗ್ಗೆ ಬಿಜೆಪಿಯ ಒಳಗೆ ಕಿಚ್ಚು ಹೊತ್ತಿದೆ. ಇದನ್ನ ಪ್ರಸ್ತಾಪ ಮಾಡುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ರಣವೀಳ್ಯ ನೀಡುತ್ತಿದೆ ಕರ್ನಾಟಕ ಕಾಂಗ್ರೆಸ್. ಇನ್ನೊಂದು ಕಡೆ ಬಿಜೆಪಿ ಒಳಗೆ ಹೊತ್ತಿರುವ ಅಸಮಾಧಾನದ ಹೊಗೆ ಇದೀಗ ಜ್ವಾಲೆ ರೂಪ ಪಡೆಯುತ್ತಾ, ಕೇಂದ್ರ ಬಿಜೆಪಿ ನಾಯಕರಿಗೆ ಟೆನ್ಷನ್ ಮತ್ತಷ್ಟು ಹೆಚ್ಚಾಗುತ್ತಿದೆ. ಅದರಲ್ಲೂ 2024 ರ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿದ ಸಮಯದಲ್ಲೇ, ಹೀಗೆ ಕರ್ನಾಟಕ ಬಿಜೆಪಿ ಒಳಗೆ ಅಸಮಧಾನ ತೀವ್ರ ಸ್ವರೂಪ ಪಡೆಯುತ್ತಿದೆ. ಹೀಗಾಗಿ ಚುನಾವಣೆ ವೇಳೆ ಡಬಲ್ ಚಾಲೆಂಜ್ ಎದುರಾಗಿದೆ.












Click it and Unblock the Notifications