ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿ ಹೋರಾಟ : ರೈತರ ಭೇಟಿ ಬಳಿಕ ಯಡಿಯೂರಪ್ಪ ಹೇಳಿದ್ದೇನು?

|
Google Oneindia Kannada News

Recommended Video

ಬೆಂಗಳೂರಿನಲ್ಲಿ ಕಾವೇರಿದ ಮಹದಾಯಿ ಧರಣಿ : ರೈತರ ಬಳಿ ಮಾತನಾಡಿದ ಯಡಿಯೂರಪ್ಪ | Oneindia Kannada

ಬೆಂಗಳೂರು, ಡಿಸೆಂಬರ್ 26 : 'ಮಹದಾಯಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಮುಂದೆ ಧರಣಿ ನಡೆಸಲಿ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಚನಭ್ರಷ್ಟ ಯಡಿಯೂರಪ್ಪ, ಆತನ ವಂಶ ನಿರ್ವಂಶ ಆಗಲಿ: ರೈತರ ಆಕ್ರೋಶ ವಚನಭ್ರಷ್ಟ ಯಡಿಯೂರಪ್ಪ, ಆತನ ವಂಶ ನಿರ್ವಂಶ ಆಗಲಿ: ರೈತರ ಆಕ್ರೋಶ

ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ಧರಣಿ ನಡೆಸುತ್ತಿರುವ ರೈತರ ಜೊತೆ ಮಾತುಕತೆ ನಡೆಸಿದ ಬಳಿಕ, ಯಡಿಯೂರಪ್ಪ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ರೈತರ ಜೊತೆಗಿನ ಯಡಿಯೂರಪ್ಪ ಮಾತುಕತೆ ವಿಫಲವಾಗಿದೆ.

ಮಹದಾಯಿ ಹೋರಾಟ, ಬಿಜೆಪಿ ಹೈಕಮಾಂಡ್ ಗರಂ!ಮಹದಾಯಿ ಹೋರಾಟ, ಬಿಜೆಪಿ ಹೈಕಮಾಂಡ್ ಗರಂ!

Congress politicizing Mahadayi issue says BS Yeddyurappa

ಯಡಿಯೂರಪ್ಪ ಹೇಳಿದ್ದೇನು?

ತೀವ್ರ ರಾಜಕೀಯ ಸ್ವರೂಪ ಪಡೆಯುತ್ತಿರುವ ಮಹದಾಯಿ ತೀವ್ರ ರಾಜಕೀಯ ಸ್ವರೂಪ ಪಡೆಯುತ್ತಿರುವ ಮಹದಾಯಿ

* ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದಂತೆ ಬಿಜೆಪಿ ನಾಯಕರನ್ನು ನಾವು ಒಪ್ಪಿಸಿದ್ದೇವೆ. ಗೋವಾ ಕಾಂಗ್ರೆಸ್‌ ನಾಯಕರನ್ನು ಒಪ್ಪಿಸಿ ಯೋಜನೆ ಜಾರಿಗೆ ಪ್ರಯತ್ನ ಮಾಡಬೇಕಿರುವುದು ಸಿದ್ದರಾಮಯ್ಯ

ನೀರಿನ ಚಿಂತೆ ಬಿಟ್ಟುಬಿಡಿ, ನಾ ತಂದೆ ತರುವೆ : ಯಡಿಯೂರಪ್ಪ ಘೋಷಣೆನೀರಿನ ಚಿಂತೆ ಬಿಟ್ಟುಬಿಡಿ, ನಾ ತಂದೆ ತರುವೆ : ಯಡಿಯೂರಪ್ಪ ಘೋಷಣೆ

* 20/12/2017ರಂದು ದೆಹಲಿಯಲ್ಲಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ಜೊತೆ ಸಭೆ ನಡೆಸಿದೆವು. ಅವರು ನಿಮ್ಮ ಬೇಡಿಕೆ ಬಗ್ಗೆ ಪತ್ರ ಬರೆಯಿರಿ ಎಂದರು. ನಾನು ಮತ್ತು ಜಗದೀಶ್ ಶೆಟ್ಟರ್ ಪತ್ರ ಬರೆದು 7.56 ಟಿಎಂಸಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಕೊಡಿ ಉಳಿದ ವಿಚಾರ ನ್ಯಾಯಾಧೀಕರಣ ಮುಂದೆ ತೀರ್ಮಾನವಾಗಲಿ ಎಂದು ಮನವಿ ಮಾಡಿದೆವು.

ಮಹದಾಯಿ ವಿವಾದ : ಗೋವಾ ಸಿಎಂ ಬರೆದ ಪತ್ರದಲ್ಲೇನಿದೆ?ಮಹದಾಯಿ ವಿವಾದ : ಗೋವಾ ಸಿಎಂ ಬರೆದ ಪತ್ರದಲ್ಲೇನಿದೆ?

* ಗೋವಾ ಮುಖ್ಯಮಂತ್ರಿಗಳು ನನ್ನ ಪತ್ರಕ್ಕೆ ಉತ್ತರ ಕೊಟ್ಟರು. ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ನಮ್ಮ ಅಭ್ಯಂತರವಿಲ್ಲ. ಈ ವಿಚಾರ ನ್ಯಾಯಾಧೀಕರಣದ ಮುಂದಿದೆ. ಕುಡಿಯುವ ನೀರು ಕೊಡಲು ನಾವು ಸಿದ್ಧ ಎಂದು ಪತ್ರದಲ್ಲಿ ತಿಳಿಸಿದರು.

* ಈ ಪತ್ರ ಬರೆದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ಅಭಿನಂದನೆ ಸಲ್ಲಿಸಲಿಲ್ಲ. ಬದಲಾಗಿ ರಾಜಕೀಯ ಆರಂಭಿಸಿದರು. ಮನೋಹರ್ ಪರಿಕ್ಕರ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದು ಏಕೆ, ಅವರು ಯಾರು? ಎಂದು ಪ್ರಶ್ನಿಸಿದರು.

* ಗೋವಾ ಕಾಂಗ್ರೆಸ್ ಅಧ್ಯಕ್ಷರಿಗೆ ಹೇಳಿಕೊಟ್ಟು ವಿರೋಧಿಯಾದ ಹೇಳಿಕೆ ಕೊಡಿಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಬೆಂಬಲವೂ ಇದಕ್ಕೆ ಇದೆ.

* ಗೋವಾದ ಪ್ರತಿಪಕ್ಷ ಕಾಂಗ್ರೆಸ್ ನೀರು ಕೊಡಲು ವಿರೋಧ ವ್ಯಕ್ತಪಡಿಸುತ್ತಿದೆ. ಜನವರಿ 6ರಿಂದ ಹೋರಾಟ ಮಾಡುತ್ತೇವೆ ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಿದ್ದಾರೆ. ಇವರ ಮನವೊಲಿಸುವ ಕೆಲಸವನ್ನು ಸಿದ್ದರಾಮಯ್ಯ ಅವರು ಮಾಡಬೇಕು.

* ಸಿದ್ದರಾಮಯ್ಯ ಅವರು ಪ್ರಾಮಾಣಿಕವಾಗಿ ಹೇಳಲಿ. ಗೋವಾ ಕಾಂಗ್ರೆಸ್ ನಾಯಕರ ಹೇಳಿಕೆ ಹಿಂದೆ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರ ಕೈವಾಡವಿಲ್ಲವೇ?. ವಿವಾದದ ಬಗ್ಗೆ ಗೊಂದಲ ಮಾಡಿ ರಾಜಕಾರಣ ಮಾಡುವಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿಲ್ಲವೇ?

* ನಾನು ಪರಿವರ್ತನಾ ಯಾತ್ರೆಯ ಪ್ರವಾಸದಲ್ಲಿದ್ದೆ. ಇಂದು ಮತ್ತೆ ಪ್ರವಾಸಕ್ಕೆ ಹೊರಡುತ್ತೇನೆ. ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ.

* ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ, ಗೋವಾ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಿ. ರೈತರು ಮಾಡುತ್ತಿರುವ ಹೋರಾಟದ ಬಗ್ಗೆ ಸಹಾನುಭೂತಿ ಇದೆ. ಅವರು ಸಿದ್ದರಾಮಯ್ಯ ಅವರ ಮನೆ ಮುಂದೆ ಪ್ರತಿಭಟನೆ ಮಾಡಲಿ.

* ಸಿದ್ದರಾಮಯ್ಯ ಅವರು ಗೋವಾ ಕಾಂಗ್ರೆಸ್ ಅಧ್ಯಕ್ಷರ ಜೊತೆ ಮಾತನಾಡಿ, ಮನವೊಲಿಸಿ ರಾಜ್ಯದ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಲಿ. ರಾಹುಲ್ ಗಾಂಧಿ ಅವರ ಸಹಾಯವನ್ನು ಪಡೆಯಲಿ.

* ಗೋವಾ ಮುಖ್ಯಮಂತ್ರಿ ಬರೆದ ಪತ್ರವನ್ನು ನ್ಯಾಯಾಧೀಕರಣದ ಮುಂದೆ ಇಟ್ಟು. ಕುಡಿಯುವ ನೀರು ಬಿಡಲು ಅನುಮತಿ ನೀಡಿ ಎಂದು ಮನವಿ ಮಾಡಲಿ

English summary
Karnataka BJP president B.S.Yeddyurappa alleged that Congress politicizing Mahadayi issue. Yeddyurappa meeting with farmers failed on December 26, 2017. Farmers protesting outside the BJP office at Malleswaram, Bengaluru and demanding for solve the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X