ಕೋಲಾರದಲ್ಲಿ ಭಾಷಣ ಮಾಡಿದಕ್ಕೆಅನರ್ಹ; ಈಗ ರಾಹುಲ್ ಗಾಂಧಿ ಕರೆಸಿ ಕೋಲಾರದಲ್ಲೇ ಕಾರ್ಯಕ್ರಮ ಮಾಡುತ್ತೇವೆ: ಕೆ.ಎಚ್ ಮುನಿಯಪ್ಪ
ಕೋಲಾರ,ಮಾರ್ಚ್28: 2019 ರ ಲೋಕಸಭಾ ಚುನಾವಣೆಯ ವೇಳೆ ಕೋಲಾರದಲ್ಲಿ ಪ್ರಚಾರದ ವೇಳೆ ರಾಹುಲ್ ಗಾಂಧಿ ಮಾತನಾಡಿದಕ್ಕೆ ಅನರ್ಹ ಮಾಡಿದ್ರು, ಹೀಗಾಗಿ ಕೋಲಾರದಿಂದಲೇ ರಾಹುಲ್ ಗಾಂಧಿ ಯನ್ನು ಕರೆಸಿ ಬೃಹತ್ ಕಾರ್ಯಕ್ರಮ ಮಾಡುತ್ತೇವೆ ಎಂದು ಕೆ.ಎಸ್ ಮುನಿಯಪ್ಪ ಹೇಳಿದ್ದಾರೆ.
ಈ ಕುರಿತು ಕೋಲಾರದಲ್ಲಿ ಮಾತನಾಡಿದ ಅವರು, ಏಪ್ರಿಲ್ 5 ರಂದು ಕೋಲಾರ,ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಜನರನ್ನು ಸೇರಿಸಿ ಬೃಹತ್ ಸಮಾವೇಶ ಮಾಡುತ್ತೇವೆ. ದೇಶದಲ್ಲಿ ಬಿಜೆಪಿ ಹಾಗೂ ಪ್ರಧಾನಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಬಿಜೆಪಿ ಪಕ್ಷ ವಾಕ್ ಸ್ವಾತಂತ್ರ್ಯ ವನ್ನು ಕಿತ್ತುಕೊಂಡಿದ್ದಾರೆ ಎಂದು ಕಿಡಿಕಾರಿದರು.

ಕೋರ್ಟ್ ತೀರ್ಮಾನದ ವಿಚಾರವನ್ನು ನಾನು ಚರ್ಚೆ ಮಾಡಲ್ಲ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಹಾಗೂ ಓರ್ವ ರಾಷ್ಟ್ರದ ನಾಯಕ. ಸ್ಪೀಕರ್ ಗೆ ಕೋರ್ಟ್ ಆದೇಶದ ಪ್ರತಿ ಸಿಗುವುದಕ್ಕೂ ಮುನ್ನ ಅನರ್ಹ ಮಾಡಿದ್ದಾರೆ. ವಯನಾಡ್ ನಲ್ಲಿ ಉಪ ಚುನಾವಣೆ ಸಹ ಮಾಡಬೇಕು ಅಂತ ತೀರ್ಮಾನ ಮಾಡಿರುವ ಬಿಜೆಪಿ ಮನಸ್ಥಿತಿ ಎಂತಹದ್ದು. ಭಾರತ್ ಜೋಡೋ ಪಾದಯಾತ್ರೆ ಮೂಲಕ ರಾಹುಲ್ ಗಾಂಧಿ ದೇಶದ ಮನಸೆಳೆದಿದ್ದಾರೆ.
ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಅಡಿಯಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಬಿಜೆಪಿ ಪಕ್ಷ ಹಿಂದೂ ಮುಸ್ಲಿಂ ನಡುವೆ ಕೋಮುವಾದಿ ಅಲೆ ಎಬ್ಬಿಸುತ್ತಿದೆ, ಸ್ವಾತಂತ್ರ್ಯ ತಂದುಕೊಟ್ಟವರಲ್ಲಿ ಎಲ್ಲಾ ಧರ್ಮದವರು ಇದ್ದಾರೆ ಎಂದು ಬಿಜೆಪಿಯವರು ಅರಿತುಕೊಳ್ಳಬೇಕು. ಭಾರತ್ ಜೋಡೋ ವೇಳೆ ಜನ ಸಮೂಹ ನೋಡಿ ಬಿಜೆಪಿ ನಮ್ಮನ್ನು ಮುಗಿಸಲು ಹೊರಟಿದೆ. ವಿರೋಧ ಪಕ್ಷವನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎನ್ನುವ ಮೌಲ್ಯ ಬಿಜೆಪಿ ಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹೀಗಾಗಿ ಏಪ್ರಿಲ್ 5 ರಂದು ರಾಹುಲ್ ಗಾಂಧಿ ಕೋಲಾರಕ್ಕೆ ಬರ್ತಿದ್ದಾರೆ. ನನ್ನ ಪರವಾಗಿ 2019 ರಲ್ಲಿ ರಾಹುಲ್ ಗಾಂಧಿ ಪ್ರಚಾರ ಮಾಡಿದರು. ಭಾಷಣದಲ್ಲಿ ಮೋದಿ ಗೆ ಅಪಮಾನ ಮಾಡಿದ್ದಾರೆ ಎಂದು ಕೆಲವರು ಕೋರ್ಟ್ ಗೆ ಹೋದರು. ಒಂದೇ ತಿಂಗಳಲ್ಲಿ ಕೋರ್ಟ್ ನಲ್ಲಿ ತೀರ್ಮಾನ ಕೊಡಿಸುತ್ತಾರೆ. ಎರಡು ವರ್ಷ ಜೈಲು ಎಂದು ತೀರ್ಪು ಆಗುತ್ತೆ. ಅನರ್ಹ ಮಾಡುದಕ್ಕೆ ಆಗೋದಿಲ್ಲ ಎಂದು ತಿಳಿದು 2 ವರ್ಷ ಜೈಲು ಎಂದು ತೀರ್ಮಾನ ಮಾಡುತ್ತಾರೆ. ಮೊದಲು ಇದ್ದ ಜಡ್ಜ್ ಇದು ಸಾರ್ವಜನಿಕವಾಗಿ ನಡೆಯೋ ಸಾಮಾನ್ಯ ಕ್ರಿಯೆ ಅಲ್ವಾ ಅಂತ ಹೇಳಿದರು, ಬಳಿಕ ಬಿಜೆಪಿ ಅವರು ಬೇರೆ ನ್ಯಾಯಾಧೀಶರನ್ನು ನೇಮಿಸಿ ತೀರ್ಪು ಕೊಡಿಸಿದ್ದಾರೆ. ಮುಸಲೋನಿ ಹಾಗೂ ಇಟ್ಲರ್ ರೀತಿ ಆಗಿದೆ ಎಂದು ಕಿಡಿಕಾರಿದರು.

2023 ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. 2024 ರಲ್ಲಿ ಕಾಂಗ್ರೆಸ್ ಮಿತ್ರ ಪಕ್ಷದೊಂದಿದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದೇವೆ. ಬಿಜೆಪಿ ಅವರ ಗುಂಡಿಯನ್ನು ಅವರೇ ತೋಡಿಕೊಂಡಿದ್ದಾರೆ. ಕಮ್ಯುನಿಸ್ಟ್ ಪಕ್ಷ, ಮಮತಾ ಬ್ಯಾನರ್ಜಿ ಸೇರಿ ಎಲ್ಲರೂ ಬಿಜೆಪಿ ನಡೆಯ ವಿರುದ್ಧ ಖಂಡಿಸಿದ್ದಾರೆ. ಕಾಂಗ್ರೆಸ್ ಗೆ ಭಾಷಣ ಮಾಡುವುದಕ್ಕೂ ಸಿಗಬಾರದು ಎಂದು ಬಿಜೆಪಿ ಈ ಕೆಲಸ ಮಾಡಿದೆ. ಪ್ರಧಾನಿ ಜೊತೆ ಕುಳಿತು ಅದಾನಿ ಮಾತನಾಡಿರುವ ಫೋಟೋ ದಾಖಲೆ ಸಮೇತ ರಾಹುಲ್ ಗಾಂಧಿ ತೋರಿಸಿದರು.
ಹೀಗಾಗಿ ಬಿಜೆಪಿ ಅವರು ರಾಹುಲ್ ಗಾಂಧಿಯನ್ನು ಅನರ್ಹ ಮಾಡಿದ್ದಾರೆ. ರಾಹುಲ್ ಗಾಂಧಿ ಅನುರ್ಚಿತ ಆದ ಬಳಿಕ ಕೋಲಾರದಲ್ಲಿ ಮೊದಲ ಸಭೆ ಆಗ್ತಿದೆ. ಕೋಲಾರದಲ್ಲಿ ಈ ವಿವಾದ ಶುರು ಆಗಿರುವುದರಿಂದ ಕೋಲಾರದಿಂದಲೇ ಆರಂಭ ಮಾಡಲು ತೀರ್ಮಾನ ಮಾಡಿದ್ದಾರೆ. ರಾಹುಲ್ ಗಾಂಧಿ ಹಾಗೂ ಖರ್ಗೆ ಇಬ್ಬರು ಸೇರಿ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.












Click it and Unblock the Notifications