Priyanka Gandhi: ಶೃಂಗೇರಿ ಶಾರದ ಪೀಠಕ್ಕೆ ಅಪ್ಪನೊಂದಿಗೆ ಬಂದಿದ್ದೆ: ತಂದೆಯ ನೆನದು ಪ್ರಿಯಾಂಕಾ ಗಾಂಧಿ ಹೇಳಿದ್ದೇನು?
ಚಿಕ್ಕಮಗಳೂರು,ಏಪ್ರಿಲ್26: ರಾಜ್ಯ ಚುನಾವಣಾ ಅಖಾಡದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ಘಾಟನುಘಟಿ ನಾಯಕರು ಅಬ್ಬರದ ಪ್ರಚಾರವನ್ನ ನಡೆಸುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯ ದಿಗ್ಗಜರ ನಡುಗೆ ಆರೋಪ-ಪ್ರತ್ಯಾರೋಪ ಜೋರಾಗಿದೆ.
ಬಿಜೆಪಿಯ ಕಮಲ ಕಲಿಗಳಿಗೆ ಠಕ್ಕರ್ ಕೊಡಲು ಕಾಂಗ್ರೆಸ್ ನ ಮಹಿಳಾ ನಾಯಕಿ ಪ್ರಿಯಾಂಕಾ ಗಾಂಧಿ ರಾಜ್ಯದ ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರವನ್ನ ಕೈಗೊಂಡಿದ್ದಾರೆ.

ಬುಧವಾರ ಶೃಂಗೇರಿ ಶಾರದ ಮಠಕ್ಕೆ ಭೇಟಿ ನೀಡಿದ ಪ್ರಿಯಾಂಕಾ ಗಾಂಧಿ ಶಾರದೆ ದರ್ಶನ ಪಡೆದರು. ಈ ವೇಳೆ ಶೃಂಗೇರಿ ದೇವಾಲಯದ ಮಠದ ಜಯಲಕ್ಷ್ಮಿ ಮತ್ತು ಶ್ರೀಲಕ್ಷ್ಮೀ ಆನೆಗಳಿಗೆ ಸೇಬು, ಬಾಳೆಹಣ್ಣು ತಿನ್ನಿಸಿದರು. ಆನೆಗಳ ಮೈ ಸವರಿದರು ಹಾಗೂ ಆಶೀರ್ವಾದ ಪಡೆದರು.
ಈ ವೇಳೆ ಶೃಂಗೇರಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ತಂದೆಯೊಂದಿಗೆ ಶಾರದ ಪೀಠಕ್ಕೆ ಈ ಮೊದಲು ಭೇಟಿ ನೀಡಿದ್ದೆ, ಇದೊಂದು ಪುಣ್ಯ ಸ್ಥಳ. ಇಂದಿನ ಭೇಟಿಯಿಂದ ಸಂತಸವಾಯಿತು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಡಬಲ್ ಇಂಜಿನ್ ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.

ಇನ್ನೂ ನಾನು ಚುನಾವಣೆಗೋಸ್ಕರ ಇಲ್ಲಿಗೆ ಬಂದಿಲ್ಲ. ಕರ್ನಾಟಕ ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ರಾಜ್ಯವಾಗಿದೆ, ನಮ್ಮ ಕುಟುಂಬಕ್ಕೂ ಚಿಕ್ಕಮಗಳೂರಿಗೆ ಅವಿನಾಭಾವ ಸಂಬಂಧ ಇದೆ. ಈಗಲೂ ನಮ್ಮ ಕುಟುಂಬ ಸಂಕಷ್ಟ ಸಮಯ ಅನುಭವಿಸುತ್ತಿದೆ. ಅಂದು ಸಂಕಷ್ಟದಲ್ಲಿದ್ದಾಗ ಚಿಕ್ಕಮಗಳೂರು ಜನರು ಕೈ ಹಿಡಿದಿದರು. ಅಜ್ಜಿ ಬಂದಾಗ ಹೇಗಿತ್ತು ಅದೇ ರೀತಿ ಸೌಂದರ್ಯ ಈಗಲೂ ಇದೆ
ಚಿಕ್ಕಮಗಳೂರನ್ನು ಜೀವಮಾನದಲ್ಲಿ ನಾನು ಯಾವತ್ತು ಮರೆಯಲ್ಲ ಎಂದು ಹೇಳಿದರು.
ಸ್ವಾಭಿಮಾನದ ಪ್ರತೀಕ ಕರ್ನಾಟಕದ ರಾಜ್ಯ. ರಾಜ್ಯ ಚಿಕ್ಕಮಗಳೂರಿನ ಮೇಲೆ ನಮ್ಮ ಕುಟುಂಬಕ್ಕೆ ಋಣವಿದೆ, ಅತ್ಯಂತ ಸಂಕಷ್ಟದ ಸಮಯದಲ್ಲಿ ನಮ್ಮ ಕುಟುಂಬವನ್ನು ಕೈ ಹಿಡಿದ ಜಿಲ್ಲೆ ಚಿಕ್ಕಮಗಳೂರು. ಈಗ ಮತ್ತದೇ ಅದೇ ಸಂಘರ್ಷ, ಸಂಕಷ್ಟದ ಸಮಯ ಬಂದಿದೆ, ಈ ಬಾರಿಯೂ ನಮ್ಮೊಂದಿಗೆ ಜನರು ನಿಲ್ತಾರೆ ಎನ್ನುವ ವಿಶ್ವಾಸವಿದೆ. ಈ ಚುನಾವಣೆಯನ್ನು ಸತ್ಯದ ಚುನಾವಣೆವೆಂದು ಬಣ್ಣಿಸಿದ ಪ್ರಿಯಾಂಕಾ ಗಾಂಧಿ ಅವರು ಸತ್ಯಕ್ಕೆ ಜಯವಾಗಲಿದೆ ಎಂದರು.
ರಾಹುಲ್ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕಿ ಲೋಕಸಭೆಯಿಂದ ಹೊರಹಾಕಿದ್ದಾರೆ. ನಮಗೆ ವಿಶ್ವಾಸ ಇದೆ ಮತ್ತೆ ಲೋಕಸಭಾ ಸದಸ್ಯರಾಗಿ ಬರ್ತಾರೆ, ಪರ ಶಿವನ ಆಶೀರ್ವಾದ ಇದೆ ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ. ಕರ್ನಾಟಕ ಚುನಾವಣೆ ಸತ್ಯ ಮತ್ತು ಜಯದ ಹೋರಾಟ, ಒಂದು ಮಾತು ಹೇಳ್ತೇನೆ ನಮಗೆ ಎಲ್ಲ ಕಡೆ ಮೋಸ ಅಗ್ತಿದೆ. ನಿಮ್ಮ ಮತವನ್ನು ನೀಡಿ ವಿಶ್ವಾಸ ತುಂಬಿ. ಕರ್ನಾಟಕದಲ್ಲಿ ಹೇಳುವವರು ಕೇಳುವವರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು.
ಕರ್ನಾಟಕ ಸ್ವಾಭಿಮಾನದ ರಾಜ್ಯ. ಇದು ಕರ್ನಾಟಕ ಸ್ವಾಭಿಮಾನ ಪರಿಚಯ ಮಾಡುವಂತಹ ಸಮಯ, ಪ್ರತಿಯೊಬ್ಬರಿಗೂ ಗೊತ್ತಿದೆ ರಾಜ್ಯದ ಪರಿಸ್ಥಿತಿ ಏನು ಅಂತಾ. ನಾವು ಈ ಪರಿಸ್ಥಿತಿ ಬದಲಾಯಿಸುತ್ತೇವೆ. ನಾವು ನಿಮ್ಮಿಂದ ಲೂಟಿ ಮಾಡುವುದಿಲ್ಲ, ನಾವು ನಿಮ್ಮ ಹಣವನ್ನ ವಾಪಸ್ಸು ನೀಡುತ್ತೇವೆ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ, ಕರ್ನಾಟಕ ವನ್ನ ಅಭಿವೃದ್ಧಿ ಪಡಿಸುವ ಉದ್ದೇಶ ದಿಂದ ನಮ್ಮ ಸರ್ಕಾರ ಬರಬೇಕು ಎಂದು ಹೇಳಿದರು.












Click it and Unblock the Notifications