ಕಾಂಗ್ರೆಸ್ ಸಂಸದರ ಉರ್ದು, ಹಿಂದಿ ಪ್ರೀತಿಗೆ ಕನ್ನಡಿಗರ ಆಕ್ರೋಶ!
ಕರ್ನಾಟಕದಲ್ಲಿ ಹಿಂದಿ ಹೇರಿಕೆಗಿಂತ ಇತ್ತೀಚಿನ ದಿನಗಳಲ್ಲಿ ಉರ್ದು ಭಾಷೆ ಬಳಕೆಯ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಅದರಲ್ಲೂ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಉರ್ದು ಭಾಷೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎನ್ನುವ ಆರೋಪವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದಕ್ಕೆ ತಕ್ಕಂತೆ ಬೀದರ್ ಕಾಂಗ್ರೆಸ್ ಸಂಸದ ಸಾಗರ ಖಂಡ್ರೆ ಅವರು ಸಂಪೂರ್ಣ ಉರ್ದುಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ. ದಾವಣಗೆರೆ ಕಾಂಗ್ರೆಸ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹಿಂದಿ ಮಾತನಾಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರ ಸ್ವಾಭಿಮಾನವನ್ನು ಪ್ರಶ್ನೆ ಮಾಡುವ ಅಥವಾ ಕೆಣಕುವ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಸಂಸದರೇ ಮಾಡುತ್ತಿದ್ದಾರೆ. ಈಚೆಗೆ ಬೀದರ್ ಸಂಸದ ಸಾಗರ ಖಂಡ್ರೆ ಅವರು ಆಯೋಜಿಸಿದ್ದ ಸಭೆಯಲ್ಲಿ ಪೂರ್ತಿ ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಮಾತನಾಡಿ ಭಾರೀ ಆಕ್ರೋಶಕ್ಕೆ ಕಾರಣರಾಗಿದ್ದರು. ಇದೀಗ ಉರ್ದುಮಯವಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಬೀದರ್ ಜಿಲ್ಲೆಯ ಸಂಸದರಿಗೆ ಉರ್ದು, ಮರಾಠಿ ಮತ್ತು ಹಿಂದಿ ಭಾಷೆಗಳ ಮೇಲೆ ಪ್ರೀತಿ ಜಾಸ್ತಿ ಆಗಿದೆ. ಚನ್ನಬಸವ ಪಟ್ಟದೇವರು ಹೊರಗೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸುತ್ತಿದ್ದರು. ತನ್ನ ಜೀವನವನ್ನು ಕನ್ನಡಕ್ಕಾಗಿ ಮೂಡುಪಾಗಿ ಇಟ್ಟಿದರು ಅವರ ಹೆಸರಿಗೆ ಧಕ್ಕೆ ತರಬೇಡಿ😡 ಎಂದು ಸಾಗರ ವಗ್ಗಿ ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಂಜಾನ್ ಇಫ್ತಾರ್ ಕೂಟದಲ್ಲಿ ಸಂಸದ: ಸಂಸದ ಸಾಗರ ಖಂಡ್ರೆ ಅವರು ರಂಜಾನ್ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು. ಈ ಸಮಾರಂಭದಲ್ಲಿ ಬೋರ್ಡ್ ಸಂಪೂರ್ಣ ಹಿಂದಿ ಹಾಗೂ ಉರ್ದುಮಯವಾಗಿದೆ ಇದರಲ್ಲಿ ಕನ್ನಡ ಇಲ್ಲ ಎಂದು ಹೇಳಿ ವೈರಲ್ ಆಗಿದ್ದು. ಇದಕ್ಕೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಬೇರೆ ರಾಜ್ಯದಲ್ಲಿರುವ ಮುಸ್ಲಿಮರು ಆಯಾ ರಾಜ್ಯದ ಸ್ಥಳೀಯ ಭಾಷೆಯನ್ನು ಮಾತನಾಡುತ್ತಾರೆ. ಆದರೆ, ಕರ್ನಾಟಕದಲ್ಲಿರುವ ಮುಸ್ಲಿಮರಿಗೆ ಏನಾಗಿದೆ ಎಂದು ಜನ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಬೀದರ್ ಜಿಲ್ಲೆಯ ಸಂಸದರಿಗೆ ಉರ್ದು, ಮರಾಠಿ ಮತ್ತು ಹಿಂದಿ ಭಾಷೆಗಳ ಮೇಲೆ ಪ್ರೀತಿ ಜಾಸ್ತಿ ಆಗಿದೆ, ಚನ್ನಬಸವ ಪಟ್ಟದೇವರು ಹೊರಗೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸುತ್ತಿದ್ದರು, ತನ್ನ ಜೀವನವನ್ನು ಕನ್ನಡಕ್ಕಾಗಿ ಮೂಡುಪಾಗಿ ಇಟ್ಟಿದರು ಅವರ ಹೆಸರಿಗೆ ಧಕ್ಕೆ ತರಬೇಡಿ😡@SagarKhandre12 @ZPBidar @eshwar_khandre pic.twitter.com/wRqX1QbDBN
— ಸಾಗರ ವಗ್ಗಿ (@sagarwaggi) March 26, 2025
ಸಭೆ ನಡೆಸಿದ್ದರು: ಇನ್ನು ಈಚೆಗೆ ಬೀದರ್‌ನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದ ಸಂಸದ ಸಾಗರ ಅವರು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಮಾತ್ರ ಮಾತನಾಡಿದ್ದರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಕೆಲವೇ ದಿನಗಳಿಗೆ ಈ ಘಟನೆ ನಡೆದಿದೆ.
ದಾವಣಗೆರೆಯ ಹಳೆ ಪಿ ಬಿ ರಸ್ತೆಯ ಖಬರಸ್ತಾನದಲ್ಲಿ ವಜುಖಾನ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದ ಸಂದರ್ಭದಲ್ಲಿ ಮಾತನಾಡಿದ ಕ್ಷಣಗಳು#Davanagere #OldPBRoad #Khabrastan #Construction #BhoomiPooja pic.twitter.com/9Ja1k5TKYW
— Prabha Mallikarjun (@DrPrabhaSSM) March 26, 2025

ಹಿಂದಿಯಲ್ಲಿ ಭಾಷಣ ಮಾಡಿದ ಸಂಸದೆ
ಇನ್ನು ಬೀದರ್ ಸಂಸದರ ಸಾಗರ ಖಂಡ್ರೆ ಅವರ ಪ್ರಕರಣ ಒಂದು ಕಡೆಯಾದರೆ. ದಾವಣಗೆರೆಯ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಹ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಅವರ ಹಿಂದಿ ಭಾಷಣದ ವಿಡಿಯೋ ವೈರಲ್ ಆಗಿದ್ದು. ಇವರಿಗೆ ಕನ್ನಡ ಬರುವುದಿಲ್ಲವೋ ಇಲ್ಲ ಕೇಳಿಸಿಕೊಳ್ಳುತ್ತಿರುವವರಿಗೆ ಕನ್ನಡ ಬರುವುದಿಲ್ಲವೋ ಎಂದು ಜನ ಪ್ರಶ್ನೆ ಮಾಡಿದ್ದಾರೆ. ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು, ದಾವಣಗೆರೆಯ ಹಳೆ ಪಿ.ಬಿ ರಸ್ತೆಯ ಖಬರಸ್ತಾನದಲ್ಲಿ ವಜುಖಾನ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದ ಸಂದರ್ಭದಲ್ಲಿ ಮಾತನಾಡಿದ ಕ್ಷಣಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸಮಾರಂಭದಲ್ಲಿ ಅವರು ಹಿಂದಿಯಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಈ ಎರಡೂ ಘಟನೆಗಳಿಗೂ ಕನ್ನಡಿಗರು ಕೆಂಡವಾಗಿದ್ದಾರೆ.












Click it and Unblock the Notifications