ಅರೆಸ್ಟ್ ವಾರೆಂಟ್‌ಗೆ ಹೆದರಿ ಕೋರ್ಟ್‌ಗೆ ಓಡೋಡಿ ಬಂದ ಕಾಂಗ್ರೆಸ್ ಸಚಿವ
ನ್ಯಾಯಾಲಯದ ಮುಂದೆ ಎಂತವರೂ ತಲೆಬಾಗಲೇಬೇಕು. ಅದೇ ನ್ಯಾಯಾಲಯಕ್ಕಿರುವ ಪವರ್. ಇಂತದ್ದೇ ಘಟನೆ ಇಂದು ರಾಜ್ಯದಲ್ಲಿ ನಡೆದಿದೆ. ಕೋರ್ಟ್ ಆದೇಶದ ಬೆನ್ನಲ್ಲೇ ಕಾಂಗ್ರೆಸ್ ಸಚಿವರೊಬ್ಬರು ಓಡೋಡಿ ಬಂದಿರುವ ಪ್ರಸಂಗ ಎದುರಾಗಿದೆ. ಖುದ್ದಾಗಿ ಹಾಜರಾಗದಿದ್ದರೆ ಅರೆಸ್ಟ್ ವಾರೆಂಟ್ ಹೊರಡಿಸುತ್ತೇವೆ ಎಂದು ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ಕೋರ್ಟ್‌ಗೆ ತಕ್ಷಣ ಓಡಿ ಬಂದಿದ್ದು, ಕೊನೆಗೆ ಕೇಸ್‌ವೊಂದರಲ್ಲಿ ಅವರಿಗೆ ಜಾಮೀನು ಸಿಕ್ಕಿದೆ. ಇಷ್ಟಕ್ಕೂ ಇದು ಯಾವ ಪ್ರಕರಣ ಎಂಬ ಮಾಹಿತಿ ಇಲ್ಲಿದೆ...
ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಈ ಘಟನೆ ನಡೆದಿದೆ. 2013ರಲ್ಲಿ ನಡೆದಿದ್ದ ಹಲ್ಲೆಯ ಕುರಿತು ಅಟ್ರಾಸಿಟಿ ಕೇಸ್ ಸಂಬಂಧ ರಾಬರ್ಟ್‌ಸನ್ ಪೇಟೆಯ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿ, ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಕೋರ್ಟ್‌ನಿಂದ ಸಮನ್ಸ್ ಜಾರಿಯಾಗಿತ್ತು. ಈ ಹಿನ್ನೆಲೆ ಅವರು ಇಂದು ನಡೆದ ವಿಚಾರಣೆಗಾಗಿ ಕೋರ್ಟ್‌ಗೆ ಹಾಜರಾಗಬೇಕಾಗಿತ್ತು. ಆದರೆ ಅವರು ಒಂದು ಗೈರಾಗಿದ್ದರು. ಇದರಿಂದ ಜಡ್ಜ್ ಸಂತೋಷ್ ಗಜಾನನ ಭಟ್ ಕೋಪಗೊಂಡಿದ್ದರು. ಸಚಿವರು ಖುದ್ದಾಗಿ ಕೋರ್ಟ್‌ಗೆ ಹಾಜರಾಗದಿದ್ದರೆ ಅರೆಸ್ಟ್ ವಾರೆಂಟ್ ಹೊರಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಚಿವ ಮುನಿಯಪ್ಪ ಕೋರ್ಟ್‌ಗೆ ಧಾವಿಸಿದರು ಎನ್ನಲಾಗಿದೆ.

2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೆಜಿಎಫ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಶಂಕರ್ ಎಂಬುವರ ಮೇಲೆ ಅಂದಿನ ಸಂಸದರಾಗಿದ್ದ ಕೆಹೆಚ್ ಮುನಿಯಪ್ಪ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಗಲಾಟೆ ಪ್ರಕರಣದಲ್ಲಿ ಸಚಿವ ಕೆ.ಹೆಚ್ ಮುನಿಯಪ್ಪ ಎ2 ಆರೋಪಿ ಎನ್ನಲಾಗಿತ್ತು. ಇದೇ ಕೇಸ್ ವಿಚಾರಣೆಗೆ ಅವರು ಖುದ್ದಾಗಿ ಹಾಜರಾಗುವಂತೆ ಸಚಿವರಿಗೆ ಸೂಚಿಸಲಾಗಿತ್ತು.
ಆದರೆ, ಅವರು ಇಂದು ಕೋರ್ಟ್‌ಗೆ ಹಾಜರಾಗಿರಲಿಲ್ಲ. ಇದರಿಂದ ನ್ಯಾಯಾಧೀಶರು ಗರಂ ಆಗಿದ್ದರು. ಕೋರ್ಟ್‌ಗೆ ಖುದ್ದು ಹಾಜರಾಗದಿದ್ದರೆ ಅರೆಸ್ಟ್ ವಾರೆಂಟ್ ಹೊರಡಿಸುವುದಾಗಿ ಕೊಟ್ಟ ಎಚ್ಚರಿಕೆಗೆ ಹೆದರಿ ಸಚಿವ ಮುನಿಯಪ್ಪ ಕೊನೆಗೂ ಕೋರ್ಟ್‌ಗೆ ಹಾಜರಾದರು. ಬಳಿಕ ಅವರ ಪರ ವಕೀಲರ ಮನವಿ ಮೇರೆಗೆ ಜಾಮೀನು ಕೂಡ ಸಿಕ್ಕಿದೆ ಎಂದು ತಿಳಿದುಬಂದಿದೆ. 2013ರ ಅಟ್ರಾಸಿಟಿ ಕೇಸ್ ಸಂಬಂಧ ಜನಪ್ರತಿನಿಧಿಗಳ ಕೋರ್ಟ್ ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆರ ಜಾಮೀನು ಮಂಜೂರು ಮಾಡಿದೆ.

ಕಸ್ಟಡಿಗೆ ಕೊಡೋಣ ಎಂದ ಕೋರ್ಟ್
ಇಂದು ಈ ಕೇಸ್ ವಿಚಾರಣೆ ನಡೆಸಿದ ಕೋರ್ಟ್, ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಜಾಮೀನು ಕೊಡಲು ಸಾಧ್ಯವಿಲ್ಲ. ಬದಲಿಗೆ ಕಸ್ಟಡಿಗೆ ಕೊಡೋಣ ಎಂದು ಹೇಳಿದರು. ಬಳಿಕ ವಕೀಲರು ಜಾಮೀನಿಗೆ ಮನವಿ ಮಾಡಿದರು. ಕಾನೂನಿನಲ್ಲಿ ಅವಕಾಶ ಇದ್ದರೆ ತಿಳಿಸಿ ಎಂದು ಕೋರ್ಟ್ ವಕೀಲರಿಗೆ ಮರುಪ್ರಶ್ನೆ ಮಾಡಿತು. ಅಲ್ಲದೆ ನಿರೀಕ್ಷಣಾ ಜಾಮೀನಿಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಕಿದಂಗೆ ಅರ್ಜಿ ಸಲ್ಲಿಸಿದ್ದೀರಿ ಎಂದೂ ಕ್ಲಾಸ್ ತೆಗೆದುಕೊಂಡಿತು. ಕೊನೆಗೆ ಸಚಿವ ಮುನಿಯಪ್ಪ ಅವರಿಗೆ 50 ಸಾವಿರ ರೂಪಾಯಿ ಶ್ಯೂರಿಟಿ ಜೊತೆಗೆ ಜಾಮೀನು ನೀಡಲು ಒಪ್ಪಿತು.












Click it and Unblock the Notifications