ಕುಂದಗೋಳ, ಚಿಂಚೋಳಿ ಉಪ ಚುನಾವಣೆ: ಕಾಂಗ್ರೆಸ್ ಉಸ್ತುವಾರಿಗಳ ನೇಮಕ
ಬೆಂಗಳೂರು, ಏಪ್ರಿಲ್ 30: ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಉಸ್ತುವಾರಿಗಳನ್ನು ನೇಮಿಸಿದೆ.
ಶಾಸಕ ಸಿಎಸ್ ಶಿವಳ್ಳಿ ಅವರ ಸಾವಿನಿಂದ ತೆರವಾಗಿದ್ದ ಕುಂದಗೋಳ ಮತ್ತು ಉಮೇಶ್ ಜಾಧವ್ ಅವರ ರಾಜಿನಾಮೆಯಿಂದ ತೆರವಾಗಿದ್ದ ಚಿಂಚೋಳಿ ವಿಧಾನಸಭೆ ಕ್ಷೇತ್ರಗಳಿಗೆ ಮೇ 19ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ ಕಾಂಗ್ರೆಸ್ ಎರಡೂ ಉಪ ಚುನಾವಣೆಗಳಿಗೆ ಉಸ್ತುವಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ.
ಚಿಂಚೋಳಿ ವಿಧಾನಸಭೆ ಉಪ ಚುನಾವಣೆಗೆ ಕಾಂಗ್ರೆಸ್ ನೇಮಕ ಮಾಡಿರುವ ಉಸ್ತುವಾರಿಗಳ ವಿವರ ಹೀಗಿದೆ.

* ಒಟ್ಟಾರೆ ಮೇಲುಸ್ತುವಾರಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಸಚಿವ ಎಂ.ಬಿ. ಪಾಟೀಲ್, ಗುಲ್ಬರ್ಗಾ ವಿಭಾಗದ ಉಸ್ತುವಾರಿ ಡಾ. ಸಾಕೆ ಶೈಲಜನಾಥ್.
* ಜಂಟಿ ಉಸ್ತುವಾರಿಗಳು: ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಶಾಸಕ ಡಾ. ಅಜಯ್ ಸಿಂಗ್.
* ಸಂಯೋಜಕರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೈಲಾಶನಾಥ್ ಪಾಟೀಲ್, ಎ. ವಸಂತ್ ಕುಮಾರ್, ಗುಲ್ಬರ್ಗಾ ಡಿಸಿಸಿ ಅಧ್ಯಕ್ಷ ಜಗದೇವ್ ಗುತ್ತೇದಾರ್, ಕೆಪಿಸಿಸಿ ಕಾರ್ಯದರ್ಶಿ ಇರ್ಷದ್ ಅಲಿ.
ಕುಂದಗೋಳ ವಿಧಾನಸಭೆ ಉಪಚುನಾವಣೆ
* ಒಟ್ಟಾರೆ ಮೇಲುಸ್ತುವಾರಿ: ಸಚಿವರಾದ ಆರ್ ವಿ ದೇಶಪಾಂಡೆ, ಡಿ.ಕೆ. ಶಿವಕುಮಾರ್, ಎಚ್.ಕೆ. ಪಾಟೀಲ್ ಮತ್ತು ಎಐಸಿಸಿ ಕಾರ್ಯದರ್ಶಿ ಹಾಗೂ ಬೆಳಗಾವಿ ವಿಭಾಗದ ಉಸ್ತುವಾರಿ ಮಾಣಿಕಂ ಟ್ಯಾಗೋರ್.
* ಜಂಟಿ ಉಸ್ತುವಾರಿ: ಸಚಿವ ವಿನಯ್ ಕುಲಕರ್ಣಿ, ಮಾಜಿ ಸಚಿವ ಸಂತೋಷ್ ಲಾಡ್.
* ಸಂಯೋಜಕರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನವೀನ್ ಭಂಡಾರಿ, ಎಸ್.ಜಿ. ನಂಜಯ್ಯನ ಮಠ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಗೌಡ ಎಲ್. ಪಾಟೀಲ್, ಧಾರವಾಡ ಡಿಸಿಸಿ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್, ಹುಬ್ಬಳ್ಳಿ-ಧಾರವಾಡ ಸಿಟಿ ಡಿಸಿಸಿ ಅಧ್ಯಕ್ಷ ಅಲ್ತಾಫ್ ಹುಸೈನ್ ಹಲ್ವೂರ್.












Click it and Unblock the Notifications