• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಟಿಗಳಿಗೆ ಮೀಸಲಾತಿ ಶೇ. 7ಕ್ಕೆ ಹೆಚ್ಚಿಸುವಂತೆ ಕಾಂಗ್ರೆಸ್ ನಾಯಕರ ಒತ್ತಾಯ

|
Google Oneindia Kannada News

ಬೆಂಗಳೂರು, ಅ. 6: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಒದಗಿಸಬೇಕು ಎಂದು ಹೇಳಿರುವ ಕಾಂಗ್ರೆಸ್ ನಾಯಕರು, ಪರಿಶಿಷ್ಟ ಪಂಗಡಕ್ಕೆ ಶೇ. 3 ಇರುವ ಮೀಸಲಾತಿಯನ್ನು ಶೇ. 7ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಕೆಪಿಸಿಸಿ ಸಂವಹನ ಮತ್ತು ಜಾಲತಾಣ ವಿಭಾಗದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಗುರುವಾರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ನಾಗಮೋಹನ್ ದಾಸ್ ವರದಿ ಜಾರಿ ಮಾಡಬೇಕೆಂದು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಪರೇಶ್‌ ಮೆಸ್ತಾ ಸಾವು ಪ್ರಕರಣದಲ್ಲಿ ಬಿಜೆಪಿ ರಾಜಕೀಯ; ಹೊನ್ನಾವರದಲ್ಲಿ ಕಾಂಗ್ರೆಸ್ ಆರೋಪಪರೇಶ್‌ ಮೆಸ್ತಾ ಸಾವು ಪ್ರಕರಣದಲ್ಲಿ ಬಿಜೆಪಿ ರಾಜಕೀಯ; ಹೊನ್ನಾವರದಲ್ಲಿ ಕಾಂಗ್ರೆಸ್ ಆರೋಪ

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬ ಒತ್ತಾಯ ಬಹಳ ವರ್ಷಗಳಿಂದ ಇದೆ, ಕೇಂದ್ರದಲ್ಲಿ ಈ ವರ್ಗಗಳ ಜನರಿಗೆ ಕೇಂದ್ರ ಸರ್ಕಾರಿ ನೌಕರಿಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಎಸ್‌,ಸಿ ಗಳಿಗೆ 15% ಹಾಗೂ ಎಸ್‌,ಟಿ ಗಳಿಗೆ 7.5% ಇದೆ. ಎರಡೂ ಸೇರಿ 22.5% ಮೀಸಲಾತಿ ಇದೆ. ರಾಜ್ಯದಲ್ಲಿ ಎಸ್‌ಸಿಗಳಿಗೆ 15% ಹಾಗೂ ಎಸ್‌ಟಿಗಳಿಗೆ 3% ಸೇರಿ ಒಟ್ಟು 18% ಮೀಸಲಾತಿ ಇದೆ. 2011ರ ಜನಗಣತಿ ಪ್ರಕಾರ ಎಸ್‌,ಸಿ 17.15% ಹಾಗೂ ಎಸ್.ಟಿ ಜನರು 6.95% ಒಟ್ಟು 24.10% ಜನಸಂಖ್ಯೆ ಹೊಂದಿದ್ದಾರೆ. ಆದರೆ ಇವರಿಗೆ ಮೀಸಲಾತಿ ಇರುವುದು 18% ಮಾತ್ರ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ 2019ರಲ್ಲಿ ನಾಗಮೋಹನ್ ದಾಸ್‌ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ 2020 ಜುಲೈ 2ರಂದು ವರದಿ ಸಲ್ಲಿಸಿತ್ತು. ಆ ವೇಳೆಗೆ ಸಮ್ಮಿಶ್ರ ಸರ್ಕಾರ ಇರಲಿಲ್ಲ. ಈ ವರದಿ ನೀಡಿ 2 ವರ್ಷ 3 ತಿಂಗಳಾದರೂ ಈ ಸರ್ಕಾರ ವರದಿಯನ್ನು ಒಪ್ಪಿಕೊಂಡಿಲ್ಲ ಮತ್ತು ಜಾರಿ ಮಾಡಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಕಿಡಿಕಾರಿದರು.

ನಾಗಮೋಹನ್ ದಾಸ್ ವರದಿಯಲ್ಲೇನಿದೆ?

ನಾಗಮೋಹನ್ ದಾಸ್ ಸಲ್ಲಿಸಿರುವ ವರದಿಯಲ್ಲಿ ಎಸ್‌ಟಿ ಜನಾಂಗದ ಮೀಸಲಾತಿಯನ್ನು 3% ಇಂದ 7% ಗೆ ಏರಿಕೆ ಮಾಡಬೇಕು ಎಂದಿದೆ. ಎಸ್‌ಸಿ ಜನಾಂಗದವರಿಗೆ 15% ಇಂದ 17% ಗೆ ಮೀಸಲಾತಿ ಏರಿಕೆ ಮಾಡಬೇಕು. ಅಂದರೆ ಎಸ್‌ಸಿ ಮತ್ತು ಎಸ್‌ಟಿ ಸೇರಿ ಒಟ್ಟು ಮೀಸಲಾತಿಯನ್ನು 18ರಿಂದ 24% ಏರಿಕೆ ಮಾಡಬೇಕು ಎಂದು ಶಿಫಾರಸು ಮಾಡಿದ್ದಾರೆನ್ನಲಾಗಿದೆ.

ಭಾರತ್‌ ಜೋಡೋಗೆ ಬಿಜೆಪಿ ಪ್ರತಿತಂತ್ರ; 7 ಬೃಹತ್ ಸಮಾವೇಶ!ಭಾರತ್‌ ಜೋಡೋಗೆ ಬಿಜೆಪಿ ಪ್ರತಿತಂತ್ರ; 7 ಬೃಹತ್ ಸಮಾವೇಶ!

ಈ ಅಂಶವನ್ನು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕರು, ಬಿಜೆಪಿಯನ್ನು ಮೀಸಲಾತಿ ವಿರೋಧಿಗಳು ಎಂದು ಕುಟುಕಿದರು.

Congress Leaders Urge Govt To Implement Nagamohan Das Report on Raising Reservation For SC STs

"ನಾಗಮೋಹನ್ ದಾಸ್‌ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿಗಳು. ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ. ಅವರು ಕೊಟ್ಟಿರುವ ಶಿಫಾರಸನ್ನು ಇಟ್ಟುಕೊಂಡು ಎರಡು ವರ್ಷಗಳಿಂದ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಬಿಜೆಪಿಯವರು ಮೀಸಲಾತಿಗೆ ವಿರುದ್ಧವಾಗಿರುವವರು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇಲ್ಲದವರು. ಸಾಮಾನ್ಯ ವರ್ಗದ ಬಡ ಜನರಿಗೆ ಒಂದೇ ದಿನದಲ್ಲಿ ತಿದ್ದುಪಡಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಿಲ್‌ ಪಾಸ್‌ ಮಾಡಿಕೊಂಡಿದ್ದಾರೆ. ನಾವು ಎಸ್‌ಸಿ, ಪಿ/ಟಿ, ಎಸ್‌ಪಿ ಕಾನೂನನ್ನು ಜಾರಿ ಮಾಡಿದ್ದೇವೆ, ಇದನ್ನು ಕೇಂದ್ರ ಸರ್ಕಾರ ಆಗಲೀ ಬಿಜೆಪಿ ಆಡಳಿತವಿರುವ ಯಾವ ರಾಜ್ಯಗಳಲ್ಲಿ ಜಾರಿ ಮಾಡಿದ್ದಾರೆ? ಇವರದ್ದು ಮೊಸಳೆ ಕಣ್ಣೀರು ಸುರಿಸುವ ಕೆಲಸ ಮಾತ್ರ. ಈ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದ ಕಾರಣಕ್ಕೆ ಸರಕಾರ ತಾನು ಮುಂದೆ ಮಾಡುತ್ತೇನೆ ಎಂದು ಕಾಲಹರಣ ಮಾಡುತ್ತಿದೆ" ಎಂದು ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಸಿಡಿಗುಟ್ಟಿದರು.

ಸುಭಾಷ್ ಆಡಿ ಸಮಿತಿ ಕಾನೂನುಬಾಹಿರ

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಇದೆ. ನಾಗಮೋಹನ್ ದಾಸ್‌ ಅವರ ಸಮಿತಿ ವರದಿ ಇದೆ. ಇದಲ್ಲದೆ ಸುಭಾಶ್ ಹಾಡಿ ನೇತೃತ್ವದಲ್ಲಿ ಇನ್ನೊಂದು ಸಮಿತಿ ರಚನೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾದ ಸಮಿತಿ ಎಂದು ಕಾಂಗ್ರೆಸ್ಸಿಗರು ಅಭಿಪ್ರಾಯಪಟ್ಟರು.

ತಾವೆಲ್ಲ ಒತ್ತಾಯ ಮಾಡಿದ ಮೇಲೆ, ವಾಲ್ಮೀಕಿ ಗುರುಪೀಠದ ಶ್ರೀಗಳು ನಿರಂತರ ಹೋರಾಟ ಮಾಡಿದ ಮೇಲೆ ನಾಳೆ (ಅ. 7) ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ ಎಂದು ಹೇಳಿದ ಕಾಂಗ್ರೆಸ್ ನಾಯಕರು, ಸದನದಲ್ಲಿ ತನ್ನ ಕಾರ್ಯತಂತ್ರ ಏನು ಎಂಬುದನ್ನು ವಿಶದಪಡಿಸಿದರು.

"ನಮ್ಮ ಪಕ್ಷದ ನಿಲುವು ನಾಗಮೋಹನ್ ದಾಸ್‌ ವರದಿ ಜಾರಿ ಮಾಡಬೇಕು ಎಂಬುದಾಗಿದೆ. ನಾವು ಮೀಸಲಾತಿ ಪರವಾಗಿ ಇರುವವರು. ಎಸ್‌ಸಿ ಹಾಗೂ ಎಸ್‌ಟಿ ಮೀಸಲಾತಿಯನ್ನು ಏರಿಕೆ ಮಾಡಬೇಕು ಎಂಬ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಇದನ್ನು ಸದನದಲ್ಲಿ ಚರ್ಚಿಸಿ ರೆಗ್ಯುಲೇಷನ್ ಪಾಸ್‌ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ನಂತರ ಕೇಂದ್ರ ಸರ್ಕಾರ 15 ದಿನಗಳ ಒಳಗೆ ಸಂವಿಧಾನ ತಿದ್ದುಪಡಿ ಮಾಡಬೇಕಾ ಅಥವಾ ಬೇಡವೇ ಎಂಬುದನ್ನು ನೋಡಿ ಜಾರಿ ಮಾಡಬೇಕು. ಇದು ನಮ್ಮ ಪಕ್ಷದ ನಿಲುವಾಗಿದೆ. ಇದೇ ಮಾತನ್ನು ನಾಳೆಯ ಸರ್ವ ಪಕ್ಷ ಸಭೆಯಲ್ಲಿ ಹೇಳುತ್ತೇವೆ" ಎಂದು ಸಿದ್ದರಾಮಯ್ಯ, ಡಿಕೆಶಿ ಮೊದಲಾದವರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಲಾಗಿದೆ.

ಹೆದರಿದ ಬಿಜೆಪಿಗರು:

"ಬಿಜೆಪಿಯವರು ನಮ್ಮ ಪಾದಯಾತ್ರೆಗೆ ಹೆದರಿದ್ದಾರೆ. ರಾಜ್ಯದಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಚುನಾವಣೆ ಬರುತ್ತದೆ. ಈ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬುದು ಖಾತ್ರಿಯಾಗಿರುವುದರಿಂದ ಭಯಭೀತರಾಗಿ ಸುಳ್ಳು ಜಾಹಿರಾತುಗಳನ್ನು ನೀಡುತ್ತಿದ್ದಾರೆ. ಬಿಜೆಪಿಯವರ ಜಾಹಿರಾತಿನಲ್ಲಿ ಯಾವ ಸತ್ಯವೂ ಇಲ್ಲ, ಹಾಗಾಗಿ ನಾವು ಈ ಜಾಹಿರಾತಿಗೆ ಯಾವ ಮಹತ್ವವನ್ನು ನೀಡುವುದಿಲ್ಲ" ಎಂದೂ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹೇಳಿದರು.

(ಒನ್ಇಂಡಿಯಾ ಸುದ್ದಿ)

ಸಿದ್ದರಾಮಯ್ಯ
Know all about
ಸಿದ್ದರಾಮಯ್ಯ

English summary
Siddaramaiah, DK Shivakumar, Randeep Surjewala and other Congress leaders made press conference in Bengaluru to urge State government to implement Nagamohan das commission's report on reservation for SC STs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X