ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಕ್ಷದ ಅಧ್ಯಕ್ಷರ ಸೂಚನೆ ಧಿಕ್ಕರಿಸಿ ಪ್ರಮಾಣ ವಚನ ಕಾರ್ಯಕ್ರಮಕ್ಕೆಕ್ಕೆ ಬಂದ ಕೈ ಮುಖಂಡ

|
Google Oneindia Kannada News

ಬೆಂಗಳೂರು, ಜುಲೈ 26: ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರಕ್ಕೆ ಯಾವ ಕಾಂಗ್ರೆಸ್‌ನ ನಾಯಕರು ಹೋಗಬಾರದೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಖಡಕ್‌ ಸೂಚನೆ ಹೊರಡಿಸಿದ್ದರೂ ಸಹ ಒಬ್ಬ ಕಾಂಗ್ರೆಸ್ ಮುಖಂಡರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

ತುಮಕೂರಿನ ಕಾಂಗ್ರೆಸ್ ಮುಖಂಡ, ಮಾಜಿ ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಅವರು ಯಡಿಯೂರಪ್ಪ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.

LIVE: ನೇಕಾರರಿಗೆ, ರೈತರಿಗೆ ಭರ್ಜರಿ ಗಿಫ್ಟ್‌ ಕೊಟ್ಟ ಸಿಎಂ ಯಡಿಯೂರಪ್ಪLIVE: ನೇಕಾರರಿಗೆ, ರೈತರಿಗೆ ಭರ್ಜರಿ ಗಿಫ್ಟ್‌ ಕೊಟ್ಟ ಸಿಎಂ ಯಡಿಯೂರಪ್ಪ

ಕೆ.ಎನ್.ರಾಜಣ್ಣ ಅವರು ಮೈತ್ರಿ ಸರ್ಕಾರದೊಂದಿಗೆ ತೀವ್ರ ಅಸಮಾಧಾನ ಹೊಂದಿದ್ದರು. ಅಷ್ಟೆ ಅಲ್ಲದೆ, ಜಿ.ಪರಮೇಶ್ವರ್, ದೇವೇಗೌಡ ಸೇರಿದಂತೆ ಕಾಂಗ್ರೆಸ್‌ನ ಕೆಲವು ನಾಯಕರ ಬಗ್ಗೆ ಅಸಮಾಧಾನವನ್ನು ಅವರು ಬಹಿರಂಗವಾಗಿಯೇ ಹೊರ ಹಾಕಿದ್ದರು. ಇದೀಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಸೂಚನೆ ಧಿಕ್ಕರಿಸಿ ಯಡಿಯೂರಪ್ಪ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಅವರು ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗೆ ಇಟ್ಟಂತೆ ಆಗಿದೆ.

ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದಕ್ಕೆ ಆಕ್ರೋಶ

ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದಕ್ಕೆ ಆಕ್ರೋಶ

ರಾಜಣ್ಣ ಅವರು ಇತ್ತೀಚೆಗಷ್ಟೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಅವರು ಅಧ್ಯಕ್ಷರಾಗಿದ್ದ ತುಮಕೂರಿನ ಡಿಸಿಸಿ ಬ್ಯಾಂಕ್‌ ಅನ್ನು ಸೂಪರ್ ಸೀಡ್ ಮಾಡಿದ್ದರು. ಇದು ರಾಜಣ್ಣ ಅವರನ್ನು ಕೆರಳಿಸಿತ್ತು. ದೇವೇಗೌಡ ಅವರ ಸೋಲಿಗೆ ಕುಮಾರಸ್ವಾಮಿ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದರು.

ಬಿಜೆಪಿ ತೆಕ್ಕೆಗೆ ಬೀಳಲಿದ್ದಾರೆಯೇ ರಾಜಣ್ಣ?

ಬಿಜೆಪಿ ತೆಕ್ಕೆಗೆ ಬೀಳಲಿದ್ದಾರೆಯೇ ರಾಜಣ್ಣ?

ದೇವೇಗೌಡ ಅವರು ತುಮಕೂರಿನಲ್ಲಿ ಸೋಲಲು ರಾಜಣ್ಣ ಅವರೂ ಸಹ ಕಾರಣ ಎನ್ನಲಾಗುತ್ತಿತ್ತು. ಅವರೀಗ ಯಡಿಯೂರಪ್ಪ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿ ಆಗುವ ಮೂಲಕ ಈ ಕಾಂಗ್ರೆಸ್‌ನಿಂದ ದೂರಾಗಿ ಬಿಜೆಪಿ ತೆಕ್ಕೆಗೆ ಬೀಳುವ ಸರ್ವ ಸಾಧ್ಯತೆಯನ್ನೂ ಅವರು ತೆರೆದಿಟ್ಟಿದ್ದಾರೆ.

ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ದ್ವೇಷದ ರಾಜಕಾರಣ : ಕೆ.ಎನ್.ರಾಜಣ್ಣಡಿಸಿಸಿ ಬ್ಯಾಂಕ್ ಸೂಪರ್ ಸೀಡ್ ದ್ವೇಷದ ರಾಜಕಾರಣ : ಕೆ.ಎನ್.ರಾಜಣ್ಣ

ರಾಜಣ್ಣ ಅವರ ಹೆಗಲ ಮೇಲೆ ಯಡಿಯೂರಪ್ಪ ಕೈ

ರಾಜಣ್ಣ ಅವರ ಹೆಗಲ ಮೇಲೆ ಯಡಿಯೂರಪ್ಪ ಕೈ

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರಿಗೆ ವೈಯಕ್ತಿಕವಾಗಿ ಅಭಿನಂದನೆಯನ್ನು ರಾಜಣ್ಣ ಅವರು ಹೇಳಿದರು. ರಾಜಣ್ಣ ಅವರ ಹೆಗಲ ಮೇಲೆ ಕೈ ಹಾಕಿದ ಯಡಿಯೂರಪ್ಪ ಅವರು ಕೆಲ ಸಮಯ ನಗು-ನಗುತ್ತಾ ಮಾತನಾಡಿದರು. ಫೊಟೊಗಳಿಗೂ ಅವರು ಫೋಸು ನೀಡಿದರು.

ಪ್ರಮಾಣ ವಚನ ಕಾರ್ಯಕ್ರಮದಿಂದ ಕಾಂಗ್ರೆಸ್-ಜೆಡಿಎಸ್ ದೂರ

ಪ್ರಮಾಣ ವಚನ ಕಾರ್ಯಕ್ರಮದಿಂದ ಕಾಂಗ್ರೆಸ್-ಜೆಡಿಎಸ್ ದೂರ

ಯಡಿಯೂರಪ್ಪ ಅವರು ಸರ್ಕಾರ ರಚಿಸಲು ಹೊರಟಿರುವುದು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ಅವರ ಬಳಿ ಬಹುಮತ ಇಲ್ಲ ಎಂದು ವಾದಿಸಿರುವ ಕಾಂಗ್ರೆಸ್ ನಾಯಕರು ಇಂದಿನ ಪ್ರಮಾಣ ವಚನ ಕಾರ್ಯಕ್ರಮದಿಂದ ದೂರ ಉಳಿದರು. ಜೆಡಿಎಸ್‌ನ ನಾಯಕರೂ ಸಹ ಯಡಿಯೂರಪ್ಪ ಪ್ರಮಾಣ ವಚನ ಕಾರ್ಯಕ್ರಮದಿಂದ ದೂರ ಉಳಿದರು.

ತುಮಕೂರಲ್ಲಿ ರಾಜಣ್ಣ ಗುರ್ ಅಂದರೆ ಪರಮೇಶ್ವರ್ ಗೆ ಏಕೆ ಢವ ಢವ?ತುಮಕೂರಲ್ಲಿ ರಾಜಣ್ಣ ಗುರ್ ಅಂದರೆ ಪರಮೇಶ್ವರ್ ಗೆ ಏಕೆ ಢವ ಢವ?

English summary
Congress leader, former MLA KN Rajanna sean in Yeddyurappa swearing-in ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X