• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ರೌಡಿ ಮೋರ್ಚಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಯಾಂಟ್ರೋ ರವಿ,ಫೈಟರ್ ರವಿ, ಲೂಟಿ ರವಿ ಪೈಪೋಟಿ: ಬಿ.ಕೆ ಹರಿಪ್ರಸಾದ್

ಸ್ಯಾಂಟ್ರೋ ರವಿ,ಫೈಟರ್ ರವಿ, ಲೂಟಿ ರವಿ,ಬಾಟಲ್ ರವಿಗಳಿಂದ ಬಿಜೆಪಿಯ ರೌಡಿ ಮೋರ್ಚಾಗೆ ಶಕ್ತಿ ಬಂದು ಕೊತ್ವಾಲನ ಇಲ್ಲದಿರುವಿಕೆಯಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಹೆಚ್ಚು ಬೆಳೆದ ಕೊತ್ವಾಲನ ನೆರಳು ತಾಗಿಸಿಕೊಂಡಿರುವ ಮಾನದಂಡದ ಮ
|
Google Oneindia Kannada News

ಬೆಂಗಳೂರು,ಜನವರಿ25: ನೂತನ ರೌಡಿ ಮೋರ್ಚಾದ ಶಾಖೆ ಉದ್ಘಾಟಿಸಿರುವ ಬಿಜೆಪಿಗೆ ರಾಜ್ಯಾಧ್ಯಕ್ಷ ಇಲ್ಲದೆ ಮತಿ ಭ್ರಮಣೆಯಾಗಿ ಕೋತ್ವಾಲನ ಜಪ ಶುರು ಮಾಡಿದ್ದಾರೆ. ಕನಸಿನಲ್ಲೂ ಕೊತ್ವಾಲ ಬಂದು ಕಾಡುತ್ತಿರುವುದರಿಂದ ಬ್ಲೇಡು, ಚಾಕು,ಚೂರಿ,ಕತ್ತಿಗಳೇ ಬಿಜೆಪಿ ನಾಯಕರ ನುಡಿಮುತ್ತುಗಳಾಗಿ ಉದುರುತ್ತಿದೆ ಎಂದುವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿ.ಕೆ.ಹರಿಪ್ರಸಾದ್, ಸ್ಯಾಂಟ್ರೋ ರವಿ,ಫೈಟರ್ ರವಿ, ಲೂಟಿ ರವಿ,ಬಾಟಲ್ ರವಿಗಳಿಂದ ಬಿಜೆಪಿಯ ರೌಡಿ ಮೋರ್ಚಾಗೆ ಶಕ್ತಿ ಬಂದು ಕೊತ್ವಾಲನ ಇಲ್ಲದಿರುವಿಕೆಯಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಹೆಚ್ಚು ಬೆಳೆದ ಕೊತ್ವಾಲನ ನೆರಳು ತಾಗಿಸಿಕೊಂಡಿರುವ ಮಾನದಂಡದ ಮೇಲೆ ವಸೂಲಿಗಾರನಿಗೆ ಮೊದಲ ಆದ್ಯತೆ ಸಿಗುವ ಸಾಧ್ಯತೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಭವಿಷ್ಯತ್ತಿನಲ್ಲಿ ಮಾಲೆಗಾಂವ್ ಬಾಂಬ್ ಸ್ಪೋಟದ ಸಂಸದೆಯಿಂದ ಭಯೋತ್ಪಾದಕರ ಮೋರ್ಚಾ ಸ್ಥಾಪಿಸುವ ಗುರಿಯೂ ಹೊಂದಿರುವಂತಿದೆ ಬಿಜೆಪಿ ಪಕ್ಷ. ಮಹಾತ್ಮಾ ಗಾಂಧಿಯನ್ನೇ ಕೊಂದ ದೇಶದ ಮೊಟ್ಟ ಮೊದಲ ಭಯೋತ್ಪಾದಕ ಗೋಡ್ಸೆಯ ಸಂತಾನರಿಂದ ಪಾಠ ಕಲಿಯಬೇಕಾದ ದುರ್ದೈವ ಬಂದಿಲ್ಲ.

ರಾಜ್ಯದಲ್ಲಿ ಚುನಾವಣಾ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಪಕ್ಷದ ರೌಡಿ ಮೋರ್ಚಾ ಮತ್ತು ಭಯೋತ್ಪಾದಕರ ಮೋರ್ಚಾ ಹೆಚ್ಚು ಸಕ್ರಿಯವಾಗುತ್ತಿದೆ. ಬೀದಿ ಬೀದಿಗಳಲ್ಲಿ ಹೊಡಿ,ಬಡಿ,ಕಡಿ,ಮಾತುಗಳೇ ಮುನ್ನಲೆಗೆ ಬರುತ್ತಿವೆ ಹೊರತು ಅನ್ನ,ಅರಿವು,ಶಿಕ್ಷಣ,ಆರೋಗ್ಯ, ಅಭಿವೃದ್ಧಿಯ ಚರ್ಚೆಗಳಿಗೆ ಅವಕಾಶವೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಯುವಕರಿಗೆ ಚಾಕು, ಚೂರಿ, ಬಂದೂಕು ತರಬೇತಿ ನೀಡುವ ಪಕ್ಷಕ್ಕೆ ಜನರು ಮತ ನೀಡಬೇಕಾ? ಅಥವಾ ಅದೇ ಮಕ್ಕಳ ಕೈಗೆ ಪೆನ್ನು ಪುಸ್ತಕ ನೀಡಿ ದೇಶದ ಭವಿಷ್ಯ ರೂಪಿಸುವ ಪ್ರಜೆಗಳನ್ನಾಗಿ ಮಾಡುವ ಪಕ್ಷಕ್ಕೆ ಮತ ನೀಡಬೇಕಾ? ಜನರೇ ತೀರ್ಮಾನಿಸಲಿ ಎಂದು ಟ್ವೀಟ್ ಮಾಡಿದರು.

English summary
Santro Ravi, Fighter Ravi, Luti Ravi are competing for the post of State President of BJP's Rowdy Morcha said BK Hariprasad,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X