ಯಡಿಯೂರಪ್ಪ ಹೆಸರಿಗೆ ಮಾತ್ರ ರಾಜಾಹುಲಿ: ಹೆಚ್.ವಿಶ್ವನಾಥ್ ಸಂದರ್ಶನ
ಬೆಂಗಳೂರು,ಡಿಸೆಂಬರ್ 17: ಯಡಿಯೂಪ್ಪರ ಸುಮ್ಮನೆ ರಾಜಾಹುಲಿ. ಏನು ಆಗಲಿಲ್ಲ, ಹಗರಣಗಳು ಆದವು ಅಷ್ಟೇ. ಯಡಿಯೂರಪ್ಪ ಹೆಸರಿಗೆ ಮಾತ್ರ ರಾಜಹುಲಿ. ರಾಜಾಹುಲಿಗೆ ವಯಸ್ಸಾಯಿತು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‌ನಿಂದ ಜೆಡಿಎಸ್, ಜೆಡಿಎಸ್‌ನಿಂದ ಬಿಜೆಪಿ, ಈಗ ಮತ್ತೆ ಬಿಜೆಪಿಯಿಂದ ಕಾಂಗ್ರೆಸ್ ಗೆ ಹೋಗುತ್ತಾರೇ ಎನ್ನುವ ಚರ್ಚೆ ಜೋರಾಗಿದ್ದು, ಸರ್ಕಾರ ಕಾರ್ಯವೈಖರಿ ಹಾಗೂ ಬಿಜೆಪಿ ಪಕ್ಷದಲ್ಲಿ ಆಗುತ್ತಿರುವ ಕಿರುಕುಳದ ಬಗ್ಗೆ 'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನಲ್ಲಿ ತಿಳಿಸಿದರು. ಸಂದರ್ಶನದ ಹಲವು ವಿಚಾರಗಳು ಇಲ್ಲಿದೆ.
1. ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್.ವಿಶ್ವನಾಥ್ ಹೋಗುತ್ತಾರೆಯೇ..?
Recommended Video

ಇದು ಚರ್ಚೆಗಳು ಅಷ್ಟೇ. ನಾನು ದೆಹಲಿಗೆ ಹೋದ ಸಂದರ್ಭದಲ್ಲಿ ಸೌಜನ್ಯಕ್ಕಾಗಿ ನಾನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯರನ್ನ ಭೇಟಿಯಾದೆ. ನಂತರ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದೇನೆ. ಯಾವ ಕಾಲಕ್ಕೆ ಏನಾಗುತ್ತದ್ದೇಯೋ ಗೊತ್ತಿಲ್ಲ. ರಾಜಕಾರಣ ಆಯಾ ಕಾಲಘಟ್ಟಕ್ಕೆ ನಿರ್ಣಯವಾಗುತ್ತದೆ ಎಂದರು.
2. ಹಿಂದಿನ ಕಾಂಗ್ರೆಸ್ ಗೂ ಇಗೀನ ಕಾಂಗ್ರೆಸ್ ಇರುವಂತಹ ವ್ಯತ್ಯಾಸವೇನು.?
ಕಾಲನ ಕಾಲಕ್ಕೆ ರಾಜಕೀಯ ಪಕ್ಷಗಳು ಮಾರ್ಪಾಟು, ಸುಧಾರಣೆಯಾಗುವುದು ಸಹಜ. ನಾನು ವಿಧ್ಯಾರ್ಥಿಯಗಿದ್ದ ಕಾಂಗ್ರೆಸ್ ಗೂ ಇಗೀನ ಕಾಂಗ್ರೆಸ್ ಗೂ ವ್ಯತ್ಯಾಸಗಳಿವೆ ಆದ್ರೆ ಕಾರ್ಯಕ್ರಮಗಳು ಅವೇ ಇದ್ದಾವೆ. ಬಡವರ ಕಾರ್ಯಕ್ರಮಗಳು, ವಿದ್ಯಾರ್ಥಿಗಳು, ರೈತರು, ಮಹಿಳೆಯರು ಹಾಗೂ ಕಾರ್ಮಿಕರಿಗಾಗಿ ಬಹಳಷ್ಟು ಕಾರ್ಯಕ್ರಮಗಳು ಮುಂದುವರೆದಿದೆ. ಆದರೆ ಬಿಜೆಪಿಯಲ್ಲಿ ಧರ್ಮ,ಜಾತಿ ಹಾಗೂ ಭಾವನಾತ್ಮಕ ವಿಚಾರಗಳನ್ನ ಆಕರ್ಷಣೆ ಮಾಡುವುದು, ಯಾವುದೇ ಕಾರ್ಯಕ್ರಮಗಳನ್ನ ಕೊಡದೆ ಇರುವಂತದ್ದು ಅಲ್ಲಿಯೂ ಸಹ ಮುಂದುವರೆದಿದೆ. ಇನ್ನೂ ಜೆಡಿಎಸ್ ಮನೆ ಪಕ್ಷವಾಗಿ ಮುಂದುವರೆಯುತ್ತಿದ್ದೆ ಎಂದು ಹೇಳಿದರು.
3. ಬಿಜೆಪಿ ಭಾವನಾತ್ಮ ವಿಚಾರಗಳ ಮೇಲೆ ರಾಜಕೀಯ ಮಾಡುತ್ತೆ ಅಂತ ಗೊತ್ತಿದ್ರು, ಬಿಜೆಪಿ ಸೇರುವ ಅನಿವಾರ್ಯತೆ ಇತ್ತಾ.?
ಒಂದು ಮನೆಯನ್ನ ಹೊರಗಿನಿಂದ ನೋಡುವಾಗ ಏನೋ ಇದೆ ಅನ್ಸುತ್ತೆ, ಮನೆ ಒಳಗೆ ಹೋದಾಗ ವಸ್ತುಸ್ಥಿತಿ ಹಾಗು ಸತ್ಯ ಗೊತ್ತಾಗುತ್ತದೆ. ನಾನು ಬಿಜೆಪಿ ಮನೆ ಒಳಗೆ ಇದೀನಿ, ಬಿಜೆಪಿ ಮನೆ ಒಳಗೆ ಏನು ಆಗ್ತಾ ಇದೆ ನೋಡುತ್ತಿದ್ದೇನೆ. ಕಾಂಗ್ರೆಸ್ ನನ್ನ ತಾಯಿ, ಕಾಂಗ್ರೆಸ್ ಜೊತೆಗೆ 40 ವರ್ಷಗಳ ಕಾಲ ಸುಧೀರ್ಘ ಯಾನ, ಈ ಕುರಿತು ದೇವೇಗೌಡರು ಕೇಳಿದ್ರು, ಏನು ಕಾಂಗ್ರೆಸ್ ನ್ನ ತಾಯಿ ಅಂದ್ರೀ ಅಂತ , ಹೆತ್ತವಳನ್ನ ತಾಯಿ ಎನ್ನದೇ ಏನ್ ಹೇಳ್ಬೇಕು, ಜೆಡಿಎಸ್ ನನ್ನ ಧಮನಿ, ಬಿಜೆಪಿ ಒಂದು ರಾಜಕೀಯ ಪಕ್ಷ . ನನ್ನ ಝಂಡಾ ಬದಲಾಗಿರ್ಬಹುದು, ಅಜೆಂಡಾ ಬದಲಾಗಿಲ್ಲ. ಸಮಾಜದ ಕಟ್ಟ ಕಡೆಯ ಮನುಷ್ಯನ ಕಷ್ಟಕ್ಕೆ ದುಡಿಯುವುದು, ಹೋರಾಟ ಮಾಡುವುದು ನನ್ನ ಅಜೆಂಡಾ ಎಂದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನಾನು ಕಾರಣ. ಒಂದು ವೇಳೆ ನಾನು ಕಾಂಗ್ರೆಸ್ ಗೆ ಬಂದ್ರು ಅದು ಪಕ್ಷಾಂತರವಲ್ಲ, ಮರಳಿ ಮನೆಗೆ, ನನ್ನ ಮನೆ ಕಾಂಗ್ರೆಸ್ ಎಂದು ತಿಳಿಸಿದರು.
4. ಸಚಿವ ಸ್ಥಾನ ಸಿಗದೇ ಹಿನ್ನೆಲೆ ಬಿಜೆಪಿ ಪಕ್ಷವನ್ನ ಬಿಡುವ ನಿರ್ಧಾರ ಮಾಡಿದೀರಾ ಅಥವಾ ಮುಂದಿನ ರಾಜಕೀಯ ಭವಿಷ್ಯಕ್ಕಾಗಿಯೋ.?
ನಾನು ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಬೇಸರದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ, ನಾನು ಶಾಸಕನಾಗಿ, ಮಂತ್ರಿಯಾಗಿದ್ದೇನೆ. ನಾನು ಮಂತ್ರಿಯಾಗಿ ಎಲ್ಲಾ ಇಲಾಖೆಗೂ ನ್ಯಾಯ ಕೊಟ್ಟಿದ್ದೇನೆ. ನಾನು ತಂದ ಕಾರ್ಯಕ್ರಮಗಳು ಇಂದಿಗೂ ಜೀವಂತವಾಗಿದೆ. ಇದಕ್ಕೂ ಮೀರಿದ್ದು, ಸ್ವಾಭಿಮಾನ ಇರುತ್ತದೆ ಎಂದು ಅಸಮಾಧಾನಗೊಂಡರು.

5. ಪಕ್ಷಾತೀಕತವಾಗಿ ಮಾತನಾಡುತ್ತಿರುವುದನ್ನ ಪಕ್ಷದಲ್ಲಿ ಯಾವ ರೀತಿಯಲ್ಲಿ ಎದುರಿಸುತ್ತಿದೀರಾ..?
ನನಗೆ ಯಾವುದೋ ತಪ್ಪು ಎನಿಸುತ್ತೋ ಅದನ್ನ ನಾನು ನೇರವಾಗಿಯೇ ಹೇಳುತ್ತೇನೆ. ಎಲ್ಲಾ ರಾಜಕೀಯ ಪಕ್ಷಗಳ ತತ್ವ ಸಿದ್ದಾಂತ ಕಾರ್ಯಕ್ರಮಗಳು ಸರಿಯಾಗಿದ್ದೇವೆ, ಆದರೆ ಪಕ್ಷವನ್ನ ನಡೆಸುವ ನಾವಿಕರ ನಡವಳಿಕೆ ಸರಿ ಇಲ್ಲ. ಪಕ್ಷವನ್ನ ನಡೆಸುವ ನಾಯಕನ ನಡವಳಿಕೆಗಳಿಂದ ಪಕ್ಷಗಳೇ ಛಿದ್ರ ಆಗುತ್ತವೆ. ನಾನು ಯಾವಾಗಲೂ ಪಕ್ಷದ ಬಗ್ಗೆ ಮಾತನಾಡುವುದಿಲ್ಲ , ಪಕ್ಷದ ನಾಯಕರ ಬಗ್ಗೆ ಮಾತನಾಡುತ್ತೇನೆ ಎಂದರು.
6. ಸಿದ್ದರಾಮಯ್ಯ ವಿರುದ್ದವಾಗಿ ಹಿಂದೆ ಸಾಕಷ್ಟು ಸರಿ ವಾಗ್ದಾಳಿ ನಡೆಸಿದ್ದೀರಾ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಹೋದಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಜೊತೆಗೆ ವೇದಿಕೆ ಹಂಚಿಕೊಳ್ಳಲು ಮುಜುಗರವಾಗುವುದಿಲ್ವಾ.?
ಮುಜುಗರ ಯಾಕೆ ಆಗ್ಬೇಕು, ನಾನು ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ ಆಸ್ತಿ ಕೇಳಲು ಹೋಗಿದ್ದೇವೆಯೇ, ರಾಜಕೀಯ ಪಕ್ಷಗಳು ಸಾರ್ವಜನಿಕರ ಆಸ್ತಿ ಎಂದರು.
7. ಮಲ್ಲಿಕಾರ್ಜುನ್ ಖರ್ಗೆ ಅಧ್ಯಕ್ಷರಾಗಿರುವುದು ಸಿದ್ದರಾಮಯ್ಯ ಅವರಿಗೆ ಹಿನ್ನೆಡೆಯಾಗುತ್ತದೆಯೇ. ?
ಸಿದ್ದರಾಮಯ್ಯ ಅವರಿಗೆ ಯಾವುದೇ ರೀತಿಯ ಹಿನ್ನೆಡೆ ಯಾಗುವುದಿಲ್ಲ, ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಚನ್ನಾಗಿಯೇ ನೋಡಿಕೊಂಡಿದೆ. ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಇದ್ದಾಗ ಪ್ರಾಥಮಿಕ ಸದಸ್ಯತ್ವದಿಂದಲೇ ಹೊರ ಹಾಕಿದರು ಆಗ ಕಾಂಗ್ರೆಸ್ ನೆಲೆ ಕೊಡಲಿಲ್ವೇ, ಅವರನ್ನ ಮುಖ್ಯಮಂತ್ರಿ ಮಾಡಲಿಲ್ವೇ.. ಎಲ್ಲಾರಿಗೂ ಆಯಾ ಪಕ್ಷಗಳಲ್ಲಿ ಋಣ ಇದೆ ಎಂದು ತಿಳಿಸಿದರು.
8. 17 ಜನ ಬಾಂಬೆ ಸ್ನೇಹಿತರು ಮತ್ತೆ ಪಕ್ಷ ಬದಲಾವಣೆ ಮಾಡುವಂತಹ ಸಾದ್ಯತೆ ಇದಿಯಾ..?
17 ಜನರಲ್ಲಿ ನಾನು ಒಬ್ಬ, ಅವರೆಲ್ಲಾ ಅಧಿಕಾರದಲ್ಲಿ ಇದ್ದಾರೆ ಚನ್ನಾಗಿ ಇದ್ದಾರೆ. ನಾವು ಬಿಡ್ತಾ ಇದ್ದೇವೆ ನೀವು ಬನ್ನಿ ಅಂತ ಕರೆಯೋಕೆ ಆಗಲ್ಲ. ಅನವಶ್ಯಕವಾಗಿ ಆರ್. ಅಶೋಕ್ ಹಾಗು ಸಿ ಟಿ ರವಿ ಮಾತನಾಡಬಾರ್ದು ಎಂದರು.
9. ಕಾಂಗ್ರೆಸ್ ಗೆ ಹೋದ್ರೆ ಡಿ.ಕೆ.ಶಿವಕುಮಾರ್ ಬಣದಲ್ಲಿ ಇರುತ್ತಿರೋ ಅಥವಾ ಸಿದ್ದರಾಮಯ್ಯ ಬಣದಲ್ಲಿ ಇರುತ್ತಿರೋ.?
ನಾನು ಯಾವ ಬಣದಲ್ಲೂ ಇರಲ್ಲ, ಕಾಂಗ್ರೆಸ್ ನಲ್ಲೇ ಇರ್ತಿನಿ. ನಾನು ಇಲ್ಲಿಯವರೆಗೂ ಯಾವ ಬಣದಲ್ಲೂ ಇದ್ದವನ್ನಲ್ಲಾ. ರಾಜಕಾರಣವೇ ಒಂದು ಸಂಘರ್ಷ, ಅಭಿಪ್ರಾಯದಲ್ಲಿ ಭಿನ್ನಾಭಿಪ್ರಾಯ ಇರುವುದು ಸಹಜ.
10. ನಿಮ್ಮ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತಿದೆ. ?
ಜನರೇ ಹೇಳುತ್ತಿದ್ದಾರೆ. ನಾವು ಅನುಭವ ಪಡುತ್ತಿದ್ದೇವೆ. ಬಿಜೆಪಿ ದೆಹಲಿ ತರ ಇಲ್ಲ. ಎಂದಾದ್ರೂ ಪ್ರಧಾನಿ ಮೋದಿಯವರು ಮುಸ್ಲಿಂರ, ಕ್ರಿಶ್ಚಿನಿಯರ ವಿರುದ್ದ ಮಾತನಾಡಿಲ್ಲ. ಇಲ್ಲಿಯೇ ಸುಮ್ಮನೆ ಕೂಗಾಡುತ್ತಾರೆ. ಜನರ ಕಷ್ಟ ನೋಡಿ, ಜನರಿಗೆ ಬೇಕಾದ ಕಾರ್ಯಕ್ರಮ ನೋಡಿ ಅಂದ್ರೆ ಮಸಿದಿಯಲ್ಲಿ ಶಿವಲಿಂಗವನ್ನ ಹುಡುಕಿಕೊಂಡು ಹೋಗುವುದು, ಸಲಾಂ ಆರತಿಯ ಹೆಸರನ್ನ ಬದಲಾಯಿಸುವುದು ಇದರಿಂದ ಉಪಯೋಗವೇನು..? ಇವೇಲ್ಲಾ ಜನರ ಕಾರ್ಯಕ್ರಮಗಳಾ..? ಹಿಂದು ಭಾವನೆ ಎನ್ನುವುದು ಬಿಜೆಪಿ ಗೆ ಇದ್ದಾರೆ, ನಮ್ಮಲ್ಲಿರುವ ದಲಿತರನ್ನ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಊಟ ಹಾಕಿ, ನಾನು ಹಿಂದೂ ಎನ್ನುವುದನ್ನ ನಾನು ನಿಮ್ಮ ಹತ್ತಿರ ಹೇಳಿಸಿಕೊಳ್ಳಬೇಕಾ..? ಧರ್ಮದ ಹೆಸರಿನಲ್ಲಿ ಮನುಷ್ಯತ್ವವನ್ನೆ ಕೊಲ್ಲಲ್ಲು ಹೊರಟಿರುದು ಒಳ್ಳೆಯದಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿರು. ಮುಸ್ಲಿಂ ಈ ದೇಶದ ಪ್ರಜೆಗಳು, ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದರು.

ಮುತಾಲಿಕ್ ಯಾರು ನೀನು..? ಜನರ ಕಷ್ಟ ಗೊತ್ತಿಲ್ಲ, ಪಂಚಾಯಿತಿ ಎಲೆಕ್ಷನ್ ನಲ್ಲಿ ಗೆದ್ದಿಲ್ಲ. ಎಲ್ಲಿಯೋ ಕುಳಿತುಕೊಂಡು ಬಾಯಿಗೆ ಬಂದಂತೆ ಮಾತನಾಡುವುದು, ಸರ್ಕಾರ ಅದನ್ನ ಸಹಿಸಿಕೊಂಡು ಕುಳಿತುಕೊಂಡಿದೆ ಎಂದು ಪ್ರಮೋದ್ ಮುತಾಲಿಕ್ ವಿರುದ್ದ ವಾಗ್ದಾಳಿ ನಡೆಸಿದರು.
11. ಮುಂದಿನ ಚುನಾವಣೆ ಯಾವ ಪಕ್ಷಕ್ಕೆ ಅನುಕೂಲವಾಗಲಿದೆ..?
ಅದು ಮತದಾರರನಿಗೆ ಬಿಟ್ಟ ವಿಚಾರ. ಯಡಿಯೂರಪ್ಪ ನವರು ಮ್ಯಾಜೀಕ್ 140 ಅಂತಾರೆ, ಕುಮಾರಸ್ವಾಮಿ ಅವರು 123 ಅಂತಾರೆ, ಸಿದ್ದರಾಮಯ್ಯ 140 ಅಂತಾರೆ.. ಅದನ್ನ ಹೇಳ ಬೇಕಾಗಿರುವುದು ಮತದಾರರ, ರಾಜಕೀಯ ನಾಯಕರೇ ಹೇಳಿಕೊಳ್ಳುತ್ತಿದ್ದಾರೆ. ಮತದಾರರ ಲಿಸ್ಟ್ ನ್ನ ಬದಲಾವಣೆ ಮಾಡುವಂತಹ ದುರಂತ, ದೇಶ ವಿರೋಧಿ ತನವನ್ನ ಯಾರು ಸಹಿಸುವುದಿಲ್ಲ, ಮತದಾನ ಮಾಡುವುದು ನನ್ನ ಹಕ್ಕು ಆ ಹಕ್ಕನ್ನೆ ಕಸಿಯುತ್ತಿದ್ದಾರೆ. ಇದನ್ನೆಲ್ಲಾ ನೋಡಿ ದೇಶದ ಜನರ ಯಾಕೆ ಸುಮ್ಮನೆ ಇದ್ದಾರೆ. ಈ ದೇಶದ , ರಾಜ್ಯದ ಯುವಕರು ಯಾಕೆ ಸುಮ್ಮನಿದ್ದೀರಾ. ಮತದಾನದ ಹಕ್ಕನ್ನ ಕಸಿಯುವ ಹಕ್ಕು ಯಾವ ಸರ್ಕಾರಕ್ಕೂ ಇಲ್ಲ, ಯಾವ ಪಕ್ಷಕ್ಕೂ ಇಲ್ಲ. ಅದು ಈ ರಾಜ್ಯದಲ್ಲಿ ನಡೆದು ಹೋಗಿದೆ ಎಂದು ಅಸಮಾಧಾನ ಹೊರ ಹಾಕಿದ್ರು.
12. ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ತನಿಖೆ ಮಾಡುವಲ್ಲಿ ಹಿಂದೆಟಾಕುತ್ತಿದಿಯಾ..?
ನಿಜ, ಸರ್ಕಾರ .. ಸರ್ಕಾರವಾಗಿ ಕೆಲಸ ಮಾಡುತ್ತಿಲ್ಲ. ಶ್ರೀರಾಮ ಸೇನೆಯಾಗಿ ಕೆಲಸ ಮಾಡುತ್ತಿದ್ದೇ. ಬಿಜೆಪಿ ಪ್ರಣಾಳಿಕೆಯಲ್ಲಿ ಎಲ್ಲಿಯಾದ್ರೂ ಟಿಪ್ಪು ಬಗ್ಗೆ ವಿರೋಧ ಮಾಡುತ್ತೇವೆ ಎಂದು ಎಲ್ಲಿಯಾದ್ರೂ ಹೇಳಿದ್ದಿರಾ..? ಸಲಾಂ ಆರತಿ ಬದಲಾವಣೆ ಮಾಡುತ್ತೇವೆ ಅಂತ ಹೇಳಿದ್ದೀರಾ.. ನಿಮ್ಮ ಪ್ರಣಾಳಿಕೆಯ ಮೇಲೆ ನಿಮಗೆ ನಂಬಿಕೆ ಇಲ್ವಾ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.
13. ಸಂಸದ ಪ್ರತಾಪ್ ಸಿಂಹ ಅವರಿಗೆ ಹಾಗೂ ನಿಮಗೂ ಹೊಂದಾಣಿಕೆ ಆಗ್ತಾ ಇಲ್ವಾ..?
ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ. ಸಂಸದರ ಕೆಲಸವೇನು ಅದನ್ನ ಮಾಡ್ಬೇಕು. ಅದನ್ನ ಬಿಟ್ಟು ರಸ್ತೆ ಮಾಡಿದ್ದು ನಾನೇ ಅಂತಾರೆ. ಟಿಪ್ಪು ಹೆಸರು ಬದಲಾವಣೆ ಮಾಡಿದ್ರೆ ಎಲ್ಲಿ ಮುಸ್ಲಿಂ ರು ಓಡಾಡೋದೆ ಇಲ್ವಾ ಎಂದು ಪ್ರಶ್ನಿಸಿದರು.
14. ಪಕ್ಷದಲ್ಲಿ ಕಿರುಕುಳ ಇದೆ ಎಂದು ರಾಮದಾಸ್ ಹೇಳಿದ್ರು. ಆ ವಾತಾವರಣ ಬಿಜೆಪಿಯಲ್ಲಿ ಇದೆಯಾ.?
ಹೌದು, ರಾಮದಾಸ್ ಗೆ ಪಕ್ಷದಲ್ಲಿ ಕಿರುಕುಳ ಇದೆ. ರಾಮದಾಸ್ ಗೆ ಸಚಿವ ಸ್ಥಾನ ಕೊಡ್ಬೇಕು. ಪ್ರತಾಪ್ ಸಿಂಹ ಗೆ ಬುದ್ದಿ ಇದಿಯಾ..? ಸರ್ಕಾರ ಬರಲು ನಾನು ಕಾರಣ.. ರಾಮದಾಸ್ ಗೆ ಮಂತ್ರಿ ಸ್ಥಾನ ಕೊಡಿ ಎಂದು ನಾನು ಹೇಳಿದ್ದೇ. ಮೈಸೂರು ಅಭಿವೃದ್ದಿ ಬಗ್ಗೆ ಪ್ರತಾಪ್ ಸಿಂಹ ಗೆ ಆಸಕ್ತಿ ಇದ್ದಿದ್ದರೇ ಯಾಕೆ ಆಗ್ರಹ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
15. ಚುನಾವಣಾ ಸಂದರ್ಭದಲ್ಲಿ ಸಚಿವ ಸ್ಥಾನ ವಿಸ್ತರಣೆ ಮಾಡಿದರೇ ಅನುಕೂಲವಾಗುತ್ತದೆಯೇ..?
ಈಗ ಸಚಿವ ಸಂಪುಟ ವಿಸ್ತರಣೆ ಮಾಡಿದಾರೆ ಜನರಿಗೆ ಅನುಕೂಲ ಆಗುವುದಿಲ್ಲ, ಮಂತ್ರಿ ಆದವನಿಗೆ ಅನುಕೂಲವಾಗುತ್ತದೆ. ಇದರಿಂದ ಸರ್ಕಾರಕ್ಕೂ ಒಳ್ಳೆಯ ಹೆಸರು ಬರಲ್ಲ. ಯಡಿಯೂರಪ್ಪ ನವರು ರಾಜೀನಾಮೆ ಕೊಟ್ಟ ಸಂದರ್ಭದಲ್ಲೇ ಪಂಚಮಸಾಲಿಯವರನ್ನ ಮುಖ್ಯಮಂತ್ರಿ ಮಾಡಿ ಎಂದು ಹೇಳಿದ್ದೇ. ಅರವಿಂದ್ ಬೆಲ್ಲದ್, ಯತ್ನಾಳ್ ಹಾಗು ಮುರುಗೇಶ್ ನಿರಾಣಿಯವರು ಇದ್ದಾರೆ ಮಾಡಿ ಎಂದು ಹೇಳಿದ್ದೇ ಎಂದರು.
16. ಯಡಿಯೂರಪ್ಪ ಅವರು ನಿಮಗೆ ಕೊಟ್ಟ ಮಾತನ್ನ ಉಳಿಸಿಕೊಂಡರೇ.?
ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ. ಕೃತಜ್ಞತೆ ಇಲ್ಲದ ನಾಯಕರು, ಇದ್ದಾಗ ಇದ್ದ ಹಾಗೇ ಹೇಳ್ಬೇಕು, ಹೋದಾಗ ಹೇಳುವುದಲ್ಲಾ. ನೀವು ನೇರವಾಗಿ ಹೇಳಲಿಲ್ಲ ಅಂದ್ರೆ ರಾಜ್ಯದ ಜನರಿಗೆ ಅನ್ಯಾಯ ಮಾಡಿದಂತೆ. ಇರುವಾಗ ಜೈ ಎನ್ನುವುದು. ಇರುವಾಗ್ಲೇ ಸರ್ಕಾರ ಸರಿ ಇಲ್ಲ ಅಂತ ಹೇಳಿ. ಜನ ಅಧಿಕಾರ ಕೊಡುವುದು, ಜನರ ಬೇಡಿಕೆಗಳನ್ನ ಈಡೇರಿಸುವುದಕ್ಕೆ ಎಂದರು.












Click it and Unblock the Notifications