Hubbali Central ನಲ್ಲಿ ಕೈ ಅಭ್ಯರ್ಥಿ ಘೋಷಿಸದ AICC: ಇತ್ತ ಜಗದೀಶ್ ಶೆಟ್ಟರ್ ಭಾವುಕ ಮಾತಿನ ಹಿಂದಿನ ಮರ್ಮವೇನು?
ಬೆಂಗಳೂರು,ಏಪ್ರಿಲ್15: ರಾಜ್ಯ ರಾಜಕಾರಣದಲ್ಲಿ ಟಿಕೆಟ್ ಗಾಗಿ ಬಂಡಾಯದ ಬೀರುಗಾಳಿ ಜೋರಾಗಿದೆ. ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಟಿಕೆಟ್ ಘೋಷಣೆ ಮಾಡಿದ್ದು, ಟಿಕೆಟ್ ನಿರೀಕ್ಷೆಯಲ್ಲಿದ್ದ ಹಲವು ನಾಯಕರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ರಾಜೀನಾಮೆ ನೀಡಿ ಅನ್ಯ ಪಕ್ಷಗಳತ್ತ ಮುಖ ಮಾಡಿದ್ದಾರೆ.
ಈಗಾಗಲೇ ಬಿಜೆಪಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಪ್ರತಿನಿಧಿಸುತ್ತಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ನಲ್ಲಿ ಬಿಜೆಪಿ ಹೈಕಮಾಂಡ್ ಟಿಕೆಟ್ ಕಾಯ್ದಿರಿಸಿದ್ದು ಹೊಸಬರಿಗೆ ಟಿಕೆಟ್ ನೀಡುವ ಲೆಕ್ಕಾಚಾರವನ್ನ ಅನುಸರಿಸಿದಂತೆ ಕಾಣುತ್ತಿದ್ದೆ. ಇತ್ತ ಬಿಜೆಪಿ ಅಸಮಾಧಾನಿತರಿಗೆ ಗಾಳ ಹಾಕುತ್ತಿರುವ ಕಾಂಗ್ರೆಸ್ ಈಗಾಗಲೇ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ನೀಡಿದೆ. ಇತ್ತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸಹ ಬಿಜೆಪಿ ಹೈಕಮಾಂಡ್ ಗೆ ಡೆಡ್ ಲೈನ್ ಕೊಟ್ಟಿದ್ದು, ಮುಂದಿನ ನಡೆಯನ್ನ ಕಾದುನೋಡಿ ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್ ಹೈಕಮಾಂಡ್ ಮೂರು ಪಟ್ಟಿಗಳನ್ನ ಬಿಡುಗಡೆ ಮಾಡಿದ್ದು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಅಭ್ಯರ್ಥಿಯನ್ನ ಘೋಷಿಸದೇ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ. ಈಗಾಗಲೇ ಮುಂದಿನ ನಡೆ ತಿಳಿಸುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದು, ಕಮಲ ಬಿಟ್ಟು ಕೈ ಹಿಡಿಯುತ್ತಾರಾ ಎಂಬ ಅನುಮಾನಗಳನ್ನ ಹುಟ್ಟಿಸಿದೆ.
ಇತ್ತ ಕಾಂಗ್ರೆಸ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವನ್ನ ಕಾಯ್ದಿರಿಸಿದ್ರೆ, ಅತ್ತ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾಗದ ಹಿನ್ನೆಲೆ ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆ ತಮ್ಮ ನಿವಾಸದಲ್ಲಿ ಬೆಂಬಲಿಗರ ಜೊತೆ ಸಭೆ ನಡೆಸಿ ಭಾವುಕ ಮಾತುಗಳನ್ನು ಆಡಿದ್ದಾರೆ. ಬಿಜೆಪಿ ನನಗೆ ಎಲ್ಲಾ ಸ್ಥಾನಮಾನ ನೀಡಿದೆ, ಹಾಗಾಗಿ ಋಣಿಯಾಗಿರುವೆ ಎಂದು ಭಾವುಕರಾಗಿದ್ದಾರೆ. ಹೀಗೆ ಜಗದೀಶ್ ಶೆಟ್ಟರ್ ಅವರು ಹೇಳಿರುವ ಹೇಳಿಕೆಯಿಂದೆ ಬಿಜೆಪಿ ಬಿಡುವ ಪ್ಲಾನ್ ಇದ್ಯಾ ಎಂಬ ಲೆಕ್ಕಾಚಾರಗಳು ಶುರುವಾಗಿದೆ.

ಬಿಜೆಪಿಯ ಶಾಸಕ, ಸಚಿವ, ವಿಪಕ್ಷ ನಾಯಕ, ಸ್ಪೀಕರ್, ಮುಖ್ಯಮಂತ್ರಿ ಆಗಿ ಸೇವೆ ಮಾಡಿರುವೆ. ಇದುವರೆಗೆ 6 ಬಾರಿ ಚುನಾವಣೆಗೆ ಸ್ಪರ್ಧಿಸಿ ಬಹುಮತದಿಂದ ಗೆದ್ದಿದ್ದೇನೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ. ಜಗದೀಶ್ ಶೆಟ್ಟರ್ ಹೆಸರು ಯಾಕೆ ಬರಲಿಲ್ಲ ಅನ್ನೋ ಕಳವಳ ಇದೆ. ಬೆಳಗಾವಿ ಸೇರಿ ರಾಜ್ಯದ ನಾನ ಕಡೆ ಜನ ಈ ವಿಚಾರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ. ಎರಡು ದಿನದ ಹಿಂದೆ ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿದ್ದರು. ನಾನು ಅವರಿಗೆ ಗೌರವ ಕೊಟ್ಟು ಹೋಗಿ ಬಂದೆ. ನಾನು ರಾಜಕೀಯಕ್ಕೆ ಬಂದಿದ್ದು ಆ್ಯಕ್ಸಿಡೆಂಡ್ಲಿ. ಅವಕಾಶ ಸಿಕ್ತು ಸದುಪಯೋಗ ಮಾಡಿಕೊಂಡೆ. ನಾನು ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಇನ್ನೊಂದು ಬಾರಿ ಅವಕಾಶ ಕೊಡಿ ಎಂದಿದ್ದೆ. ಎರಡು ದಿನದಲ್ಲಿ ತಿಳಸ್ತೀನಿ ಅಂದಿದ್ದರೇ ಎಂದು ತಿಳಿಸಿದರು.
ಇನ್ನೂ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಜನರ, ನನ್ನ ಸ್ವಾಭಿಮಾನದ ಪ್ರಶ್ನೆ. ನನಗೆ ಬಿಜೆಪಿ ಟಿಕೆಟ್ ನೀಡುವ ವಿಶ್ವಾಸವಿದೆ, ನಿಮ್ಮ ಆಶೀರ್ವಾದದಿಂದ ಈ ಭಾಗಕ್ಕೆ ಹೆಚ್ಚು ಒತ್ತು ಕೊಡಲು ಸಾಧ್ಯವಾಯಿತು. ಈ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳಸಲು ಶ್ರಮಿಸಿದವರಲ್ಲಿ ನಾನು ಒಬ್ಬ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ದಿವಂಗತ ಬಿಜೆಪಿ ನಾಯಕ ಅನಂತ ಕುಮಾರ ಅವರ ಜೊತೆಗೆ ಪಕ್ಷ ಕಟ್ಟಿದ್ದೇನೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಗಟ್ಟಿಯಾಗಿದೆ ಎಂದು ಭಾವುಕರಾಗಿದ್ದಾರೆ.












Click it and Unblock the Notifications