ಕೇಂದ್ರ ಸಚಿವರ ವಿರುದ್ಧ ರಾಜ್ಯಪಾಲರಿಗೆ ಕಾಂಗ್ರೆಸ್ ದೂರು: ಎದುರಾಗುತ್ತಾ ಸಂಕಷ್ಟ
ಬೆಂಗಳೂರು, ನವೆಂಬರ್ 11: ಬಿಜೆಪಿ ಅವಧಿಯಲ್ಲಿನ ಪಿಪಿಇ ಕಿಟ್ ಹಗರಣ ಸಂಬಂಧ ತನಿಖಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಅವರ ಆಯೋಗ ನೀಡಿದೆ. ಈ ನ್ಯಾಯಮೂರ್ತಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ರಾಜ್ಯಪಾಲರಲ್ಲಿ ದೂರು ದಾಖಲಿಸಲಾಗಿದೆ.
ಕರ್ನಾಟಕ ರಾಜ್ಯಪಾಲ ಥಾವರಚೆಂದ್ ಗೆಹ್ಲೋತ್ ಅವರನ್ನು ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಕೃಷ್ಣ ಬೈರೇಗೌಡ ಅವರು ಭೇಟಿಯಾಗಿ ದೂರು ನೀಡಿದ್ದಾರೆ. ಕೇಂದ್ರ ಸಚಿವರ ವಿರುದ್ಧ ಸೂಕ್ತ ಕ್ರಮಕ್ಕೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿ ಎಂದು ರಾಜ್ಯಪಾಲರದಲ್ಲಿ ಉಭಯ ಸಚಿವರು ಮನವಿ ಮಾಡಿದ್ದಾರೆ. ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಪ್ರಹ್ಲಾದ್ ಜೋಶಿಯವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಜೆಪಿ ಅಕ್ರಮಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಿದ್ದರ ವಿರುದ್ಧ ಹಾಗು ನಿವೃತ್ತ ನ್ಯಾಯಮೂರ್ತಿ ವಿರುದ್ಧ ನಿಂದಿಸಿ ಕೆಟ್ಟದಾಗಿ ಮಾತನಾಡಿದ್ದಾರೆ. ಪ್ರಹ್ಲಾದ್ ಜೋಶಿಯವರ ಅಹಂಕಾರದ ಪರಮಾವಧಿ ಇದು. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಿಗ್ಗಾವಿ ಉಪಚುನಾವಣೆಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿಯವರು ಮೈಕಲ್ ಕುನ್ಹಾ ಅವರನ್ನು ರಾಜಕೀಯ ಏಜೆಂಟ್ ಎಂದು ಕರೆದಿದ್ದಾರೆ. ಬಿಜೆಪಿ ವಿರುದ್ಧ ಚುನಾವಣೆ ಹೊತ್ತಿನಲ್ಲೇ ನ್ಯಾಯಾಂಗ ತನಿಖೆ ವರದಿ ನೀಡಿದ್ದಾರೆ ಎಂದೆಲ್ಲ ಆರೋಪಿಸಿದ್ದಾರೆ ಎಂದು ಸಚಿವರು ಜೋಶಿಯವರ ಹೇಳಿಕೆಯನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ.
ರಾಜ್ಯಪಾಲರಿಗೆ ದೂರು: ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ
ಶಿಗ್ಗಾವಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿಯವರು, ನ್ಯಾ. ಮೈಕಲ್ ಡಿ. ಕುನ್ನಾ ಅವರಿಗೆ ಏಜೆಂಟ್ ಎಂದು ಹೇಳಿಲ್ಲ. ಏಜೆಂಟರ ರೀತಿ ನಡೆದುಕೊಳ್ಳಬೇಡಿ ಎಂದಿದ್ದೇನೆ. ಅವರ ಮೇಲೆ ನನಗೆ ವಯಕ್ತಿಕ ದ್ವೇಷ, ಅಸೂಯೆ ಯಾವುದು ಇಲ್ಲ.
ಕಾಂಗ್ರೆಸ್ ನವರು ತರಾತುರಿಯಲ್ಲಿ ವರದಿ ಕೊಡಿಸಿದ್ದಾರೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಅವರಿಗೆ ನೋಟೀಸ್ ನೀಡಿಲ್ಲ. ವರದಿ ಸಲ್ಲಿಕೆ ವಿಚಾರದಲ್ಲಿ ಪ್ರೊಸಿಜರ್ ಫಾಲೋ ಮಾಡಲಾಗಿಲ್ಲ. ಈ ರೀತಿ ಮಾಡಬೇಡಿ, ಫೇರ್ ಆಗಿ ತನಿಖೆ ಮಾಡಿ ಎಂದು ಹೇಳಿದ್ದೇನೆ.
ನ್ಯಾ.ಮೈಕಲ್ ಡಿ.ಕುನ್ನಾ ಅವರಿಗೆ ಇಂಟಿಗ್ರಿಟಿ ಕ್ಷಷನ್ ಮಾಡುತ್ತೇನೆ ಎಂದರೆ, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಆಲ್ ಆಪ್ ಸಡನ್ ಪ್ರಾಸಿಕ್ಯೂಷನ್ ಮಾಡೋದು ಅಂದರೆ ಹೇಗೆ?. ಬಿಎಸ್ ಯಡಿಯೂರಪ್ಪ ಅವರಿಗೆ ಇದು ಗೊತ್ತೆ ಇಲ್ಲ. ನಾನು ಸಚಿವ ಜಮೀರ್ ಅಹ್ಮದ್ ನಷ್ಟು ಭಂಡ ಅಲ್ಲ ಎಂದು ಅವರು ಹೇಳಿದ್ದಾರೆ.












Click it and Unblock the Notifications