ಮೈತುಂಬ ದ್ವೇಷ ರಾಜಕಾರಣವನ್ನೇ ತುಂಬಿಕೊಂಡಿರುವ ಮೋದಿ: ಕಾಂಗ್ರೆಸ್ ಟ್ವೀಟಿಗೆ ಟ್ವಿಟ್ಟಿಗರ ನೀತಿಪಾಠ
ಬೆಂಗಳೂರು, ಜೂನ್ 15: ಕೇಂದ್ರದ ಒಪ್ಪಿಗೆ ಆಧಾರದಲ್ಲಿ ಜುಲೈ 1ರಿಂದ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದೆವು. ಇದಾದ ಬಳಿಕ ಕೇಂದ್ರ ಸರ್ಕಾರ ರಾಜಕೀಯ ನಿರ್ಧಾರ ತೆಗೆದುಕೊಂಡಿದೆ. ಅನ್ನ ಭಾಗ್ಯಕ್ಕೆ ಕೇಂದ್ರ ಕತ್ತರಿಯನ್ನ ಹಾಕುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪವನ್ನ ಮಾಡಿದ್ದು, ಸದ್ಯ ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಗ್ಯಾರಂಟಿಗಳನ್ನ ನೀಡುವ ಮೂಲಕ ಜನರಿಂದ ಮತ ಪಡೆದು, ಇದೀಗ ಗ್ಯಾರಂಟಿ ಜಾರಿಗೊಳಿಸಲಾಗದೇ ಕೇಂದ್ರದತ್ತ ಕೈ ಮಾಡಿ ಕೈ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ. ಇನ್ನೂ ಸಿದ್ದರಾಮಯ್ಯ ಅವರ ಆರೋಪಕ್ಕೆ ಭಾರತೀಯ ಆಹಾರ ನಿಗಮ (FCI) ಪರೋಕ್ಷವಾಗಿ ತಿರುಗೇಟು ನೀಡಿದೆ.

ಬುಧವಾರ ಭಾರತೀಯ ಆಹಾರ ನಿಗಮ ನೀಡಿದ ಪ್ರಕಟಣೆಯಲ್ಲಿ ತಾರ್ಕಿಕವಾಗಿ ಸಿದ್ದರಾಮಯ್ಯ ಅವರು ಮಾಡಿದ ಆರೋಪವನ್ನು ಅಲ್ಲಗೆಳೆದಿದೆ. ಅಕ್ಕಿ ಮತ್ತು ಗೋಧಿ ಬೆಲೆ ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರವು ಒಎಂಎಸ್ಎಸ್ ಮೂಲಕ ಅವುಗಳನ್ನು ಮಾರಾಟ ಮಾಡಲಿದೆ. ಹೀಗೆ ಮಾರಾಟವಾದ ಸ್ಟಾಕ್ಗಳು ಸಾರ್ವಜನಿಕರಿಗೆ ವೇಗವಾಗಿ ತಲುಪಲು ಸಾಧ್ಯವಾಗಲಿದೆ. 2023-24ರ ಹಣಕಾಸು ವರ್ಷದ ಮೊದಲ ಹರಾಜು ಜೂನ್ 28 ರಂದು ನಡೆಯಲಿದೆ ಎಂದು ಎಫ್ಸಿಐ ಹೇಳಿದೆ.
ಇನ್ನೂ ಕೇಂದ್ರ ಸರ್ಕಾರದ ವಿರುದ್ದ ರಾಜ್ಯ ಕಾಂಗ್ರೆಸ್ ವಾಗ್ದಾಳಿಯನ್ನ ನಡೆಸಿದ್ದು, ಕಳೆದ 6 ವರ್ಷದಲ್ಲಿ 25,000 ಮೆಟ್ರಿಕ್ ಟನ್ ದವಸ ಧಾನ್ಯಗಳು ಕೇಂದ್ರದ ಗೋದಾಮಿನಲ್ಲಿ ನಷ್ಟವಾಗಿದೆ. ಮೈತುಂಬ ದ್ವೇಷ ರಾಜಕಾರಣವನ್ನೇ ತುಂಬಿಕೊಂಡಿರುವ ಮೋದಿಯವರಿಗೆ ದವಸಧಾನ್ಯಗಳನ್ನು ಜನರ ಹಸಿವು ನೀಗಿಸಲು ನೀಡುವುದಕ್ಕಿಂತ ಇಲಿ ಹೆಗ್ಗಣಗಳ ಹೊಟ್ಟೆ ತುಂಬಿಸುವಲ್ಲಿಯೇ ಹೆಚ್ಚಿನ ಆಸಕ್ತಿ ಇದ್ದಂತಿದೆ. ಆಹಾರ ಹಕ್ಕನ್ನು ನಿರಾಕರಿಸುವುದು ಸಂವಿಧಾನ ವಿರೋಧಿ ನಡೆ.ಎಂದು ರಾಜ್ಯ ಕಾಂಗ್ರೆಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.
ಕಳೆದ 6 ವರ್ಷದಲ್ಲಿ 25,000 ಮೆಟ್ರಿಕ್ ಟನ್ ದವಸ ಧಾನ್ಯಗಳು ಕೇಂದ್ರದ ಗೋದಾಮಿನಲ್ಲಿ ನಷ್ಟವಾಗಿದೆ.
— Karnataka Congress (@INCKarnataka) June 15, 2023
ಮೈತುಂಬ ದ್ವೇಷ ರಾಜಕಾರಣವನ್ನೇ ತುಂಬಿಕೊಂಡಿರುವ ಮೋದಿಯವರಿಗೆ ದವಸಧಾನ್ಯಗಳನ್ನು ಜನರ ಹಸಿವು ನೀಗಿಸಲು ನೀಡುವುದಕ್ಕಿಂತ ಇಲಿ ಹೆಗ್ಗಣಗಳ ಹೊಟ್ಟೆ ತುಂಬಿಸುವಲ್ಲಿಯೇ ಹೆಚ್ಚಿನ ಆಸಕ್ತಿ ಇದ್ದಂತಿದೆ.
ಆಹಾರ ಹಕ್ಕನ್ನು ನಿರಾಕರಿಸುವುದು ಸಂವಿಧಾನ… pic.twitter.com/Nu3h5ThlUk
ಕಾಂಗ್ರೆಸ್ ಟ್ವೀಟಿಗೆ ಟ್ವಿಟ್ಟಿಗರ ನೀತಿಪಾಠ ಏನು?
ಅಲ್ಲಾ ಸ್ವಾಮಿ ಹತ್ತು ಕೆಜಿ ಉಚಿತ ಅಕ್ಕಿ ಕೊಡುತ್ತೆವೆ ಅಂತ ಕೇಂದ್ರ ಸರ್ಕಾರ ಹೇಳಿತ್ತಾ? ಪ್ರತಿ ರಾಜ್ಯದ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲೆ ಇದೆ, ಅದು ಕಾಪಾಡುವುದು ಕೇಂದ್ರದ ಕೆಲಸ ಮೊದಲು ಘೋಷಣೆ ಮಾಡಲು ಮುನ್ನ ಯೋಚನೆ ಮಾಡಬೇಕು ಒಂದು ಮನೆಗೆ 4 ಜನ ತಲೆಗೆ 5 kg ಕೊಟ್ಟರೆ ಸಾಕು ಒಂದು ತಿಂಗಳು ನಿಭಾಯಿಸಲು 10 ಹೇಳಿ ಸಿಕ್ಕಿಹಾಕಿಕೊಂಡಿದ್ದಿರಿ ಎಂದು ಟ್ವಿಟ್ವಿಗರು ಕಿಡಿಕಾರಿದ್ದಾರೆ.
ನಾವೂ ಸಹ ಭತ್ತ ಸ್ಟಾಕ್ ಇಟ್ಟಾಗ ಸ್ವಲ್ಪ ಇಲಿ ಹೆಗ್ಗಣಗಳ ಪಾಲಾಗುತ್ತೆ ! ಸಾಮಾನ್ಯ ಪ್ರಕ್ರಿಯೆ. ಹಾಗಂತ ಹಂಚಿಬಿಡೋಕಾಗುತ್ತ? ಹಂಚಿದರೆ ಇಲಿ ಹೆಗ್ಗಣಗಳು ಸುಮ್ಮನಿರ್ತವ? ಉಳಿದ ಧಾನ್ಯವನ್ನ ತಿನ್ನುತ್ತವೆ. ನಿಮಗೆ ಬೇರೆ ಕೆಲಸ ಇಲ್ವಾ ಬರೀ ಬೇರೆಯವರ ಬಗ್ಗೆ ಮಾತಾಡೋದೆ ಅಯ್ತು. ನಿಮ್ಮ ಮನೆಯಲ್ಲಿ ಇರೋ ಹುಳಕನ್ನ ಹುಡುಕಿ, ಸರಿ ಮಾಡಿ. Don't waste your time ಟ್ವಿಟ್ವಿಗರು ಟೀಕಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ನಿಮ್ಮ ಅವಧಿಯಲ್ಲಿ ದೇಶದಾದ್ಯಂತ ಧಾನ್ಯ ಕೊಳೆಯುತ್ತಿದ್ದ ಚಿತ್ತ್ರಣ ಮಾಧ್ಯಮದಲ್ಲಿ ಯಾವಾಗಲೂ ಬರುತ್ತಿತ್ತು. ನಿಮಗೆ ಕೇವಲ ನಿಮ್ಮ ಗ್ಯಾರಂಟಿ ಕಣ್ಣಿಗೆ ಕಾಣಿಸುತ್ತೆ ಮೋದಿ ಅವರಿಗೆ ದೇಶದ 130 ಕೋಟಿ ಜನರು ಹಾಗೂ ಅವರ ಹಸಿವು ಕಾಣಿಸ್ತಾದೆ ಅದಕ್ಕೆ ಈ ಎಲ್ಲ ಭಾರತೀಯರ ಹಸಿವಿನ ಕಾಳಜಿ ಇದ್ದಿದ್ಕೆ ಅವರು ಕಾಯ್ದೆಗಳಲ್ಲಿ ಬದಲಾವಣೆ ತಂದಿದ್ದು ಅರ್ಥ್ ಆಗಿಲ್ಲ ಅಂದ್ರೇ ಹೋಗಿ ಎಂದು ಟ್ವಿಟ್ವಿಗರು ಚಾಟಿ ಬೀಸಿದ್ದಾರೆ.












Click it and Unblock the Notifications