ರಾಹುಲ್ ಭೇಟಿ ನೀಡಿದ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲು: ಬೊಮ್ಮಾಯಿ
ಹಾವೇರಿ, ನವೆಂಬರ್ 09: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ವಿಫಲ ನಾಯಕರಾಗಿದ್ದು, ಅವರು ಭೇಟಿ ನೀಡಿದ ರಾಜ್ಯದಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಸೋತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು.
ಜಿಲ್ಲೆಯ ಬ್ಯಾಡಗಿಯಲ್ಲಿ ಮಂಗಳವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್‌ನಿಂದ ಭಾರತ್ ಜೋಡೋ ಪಾದಯಾತ್ರೆ ನಡೆಯಿತು. ಆದರೆ ಪಾದಯಾತ್ರೆಯಿಂದ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಹುಲ್ಲು ಹುಟ್ಟುವುದಿಲ್ಲ. ಕಾಂಗ್ರೆಸ್ ಯಾವುದೇ ಪ್ರಯೋಜನ ಆಗುವುದಿಲ್ಲ. ಭಾರತ್ ಜೋಡೋ ಮೂಲಕ ಕಾಂಗ್ರೆಸ್‌ನವರು ನಾಟಕ ಕಂಪನಿ ಪ್ರಾರಂಭಿಸಿದ್ದಾರೆ. ಭಾರತ ಒಕ್ಕೂಟ ಗಟ್ಟಿಯಾಗಿಯೇ ಇದೆ. ಇವರು ಏನು ಜೋಡಿಸಲು ಹೊರಟಿದ್ದಾರೆ ಎಂದು ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
Recommended Video

ರಾಹುಲ್ ಗಾಂಧಿಯವರು ಮೊದಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಜೋಡಿಸಲಿ. ಆನಂತರ ಭಾರತ್ ಜೋಡೋ ಮಾಡಲಿ ಎಂದರು.

ಮತಸೆಳೆಯುವ ಸಲುವಾಗಿ ಶಾಸಕ ಸತೀಶ್ ಜಾರಕಿಹೊಳಿ 'ಹಿಂದೂ' ಎಂಬುದು ಕೆಟ್ಟ ಪದ, ಹೊಲಸು ಶಬ್ಧ ಎಂದಿದ್ದಾರೆ. ಇಂಥ ಚಿಂತನೆ ಇರುವ ಪಕ್ಷದವರು ದೇಶವನ್ನು ಆಳಲು ಲಾಯಕ್ಕಿಲ್ಲ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈವರೆಗೆ ಮಾತನಾಡಿಲ್ಲ. ಅವರನ್ನು ಪಕ್ಷದಲ್ಲಿಟ್ಟು ಕೊಂಡರೆ ಅವರಿಗೆ ಕಾಂಗ್ರೆಸ್‌ನ ಬೆಂಬಲ ಇದೆ ಎಂದು ಅರ್ಥ.
ಸತೀಶ್ ಜಾರಕಿಹೊಳಿ ಈ ರೀತಿಯ ಹೇಳಿಕೆ ಮೂಲಕ ಭಾರತದ ಜನರ ಮನಸ್ಸನ್ನು ನೋಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಬೇಕು. ಹಿಂದೂ ಎಂದರೆ ಎಲ್ಲರನ್ನೂ ಒಳಗೊಂಡ, ಎಲ್ಲರೂ ನಮ್ಮವರೇ ಎನ್ನುವ ಭಾವನೆವುಳ್ಳವರು. ಭಾರತದ ಭವ್ಯ ಭವಿಷ್ಯಕ್ಕೆ ಈ ಮನಸ್ಥಿತಿ ಮಾರಕ. ಇವರನ್ನು ಶಾಶ್ವತವಾಗಿ ಮನೆಗೆ ಕಳಿಸಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹಿಂದೂ ಎಂಬ ಪದ ಪರ್ಷಿಯನ್‌ನಿಂದ ಬಂದಿದ್ದು ಎಂಬುದ್ದಕ್ಕೆ ನಾನು ಈಗಲೂ ಬದ್ಧ. ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನ ಹೇಳಿಕೆಯಿಂದ ನಾನು ಪಕ್ಷದಲ್ಲಿ ಒಂಟಿಯಾಗುವುದಿಲ್ಲ. ನನ್ನಿಂದ ತಪ್ಪಾಗಿದೆ ಎಂದು ರುಜವಾತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅವರು ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.












Click it and Unblock the Notifications