ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರದ ಪಿತಾಮಹ ಬಿಎಸ್‌ವೈಗಿಂತ ಸಿದ್ದರಾಮಯ್ಯ ಮೇಲು: ಕಾಂಗ್ರೆಸ್

|
Google Oneindia Kannada News

ಬೆಂಗಳೂರು, ಜನವರಿ 18: ರಾಜ್ಯದ ಮರ್ಯಾದಾ ಪುರುಷೋತ್ತಮ ಸಿದ್ದರಾಮಯ್ಯ ಎಂದು ಬೆಳಿಗ್ಗೆ ಬಿಜೆಪಿ ಮಾಡಿದ್ದ ಲೇವಡಿಯ ಟ್ವೀಟ್‌ಗೆ ಕಾಂಗ್ರೆಸ್ ಅಷ್ಟೇ ಖಾರವಾದ ಪ್ರತ್ಯುತ್ತರ ನೀಡಿದೆ.

'ರಾಜ್ಯದ ಮರ್ಯಾದಾ ಪುರುಷೋತ್ತಮ': ಸಿದ್ದರಾಮಯ್ಯರನ್ನು ಲೇವಡಿ ಮಾಡಿದ ಬಿಜೆಪಿ'ರಾಜ್ಯದ ಮರ್ಯಾದಾ ಪುರುಷೋತ್ತಮ': ಸಿದ್ದರಾಮಯ್ಯರನ್ನು ಲೇವಡಿ ಮಾಡಿದ ಬಿಜೆಪಿ

ಸ್ವಂತ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲಿಸಿದ ಜೆಡಿಎಸ್‌ಗೆ ಬೆಂಬಲ ಕೊಟ್ಟ ಮರ್ಯಾದಸ್ಥರು. ಮುಖ್ಯಮಂತ್ರಿ ಪದವಿ ಕಳೆದುಕೊಂಡರೂ ಕಾವೇರಿ ಭವನ ಬಿಡದ ಮರ್ಯಾದಸ್ಥರು. ಅವರಪ್ಪನಾಣೆ ಮುಖ್ಯಮಂತ್ರಿ ಆಗುವುದಿಲ್ಲ ಎಂದವರು, ಅವರ ಮಗನನ್ನೇ ಮುಖ್ಯಮಂತ್ರಿ ಮಾಡಿದ ಮರ್ಯಾದಸ್ಥರು.

ಹೆಂಗೆ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು: ಡಿವಿಎಸ್ ಲೇವಡಿಹೆಂಗೆ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು: ಡಿವಿಎಸ್ ಲೇವಡಿ

ನೀಚ ಮುಖ್ಯಮಂತ್ರಿ ಎಂದಿದ್ದವರ ಮಗನನ್ನೇ ಮುಖ್ಯಮಂತ್ರಿ ಮಾಡಿದ ಮರ್ಯಾದಸ್ಥರು. ತಮ್ಮ ಸರ್ಕಾರದಲ್ಲಿ ಮಾಡಿದ್ದ ಅಸಹ್ಯ ಕೆಲಸಗಳು ಹೊರಗೆ ಬರಬಾರದೆಂದು ಜೆಡಿಎಸ್‌ಗೆ ಬೆಂಬಲ ಕೊಟ್ಟ ಮರ್ಯಾದಸ್ಥರು. ಸಾಮಾನ್ಯ ಶಾಸಕರಾದರೂ ವಿಧಾನಸೌಧದಲ್ಲಿ ಕೊಠಡಿ ಪಡೆದ ಮರ್ಯಾದಸ್ಥರು ಎಂದು ಬಿಜೆಪಿ ಹಲವು ಅಂಶಗಳನ್ನು ಹಾಕಿ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿತ್ತು.

Congress criticised yeddyurappa while reacting BJP tweet Siddaramaiah maryada purushotthama

ಅದಕ್ಕೆ ಟ್ವೀಟ್‌ನಲ್ಲಿಯೇ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಉತ್ತರ ನೀಡದೆ ಇದ್ದರೂ ಬೇರೊಂದು ರೀತಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದ ಘಟನೆಯನ್ನು ಅದು ನೆನಪಿಸಿದೆ.

ಭ್ರಷ್ಟಾಚಾರದ ಪಿತಾಮಹ ಬಿ.ಎಸ್. ಯಡಿಯೂರಪ್ಪ ಅವರು ಮಾಡಿದ್ದ ಪರಪ್ಪನ ಅಗ್ರಹಾರದ ವಾಸಕ್ಕಿಂತ ಶಾಸಕಾಂಗ ಪಕ್ಷದ ನಾಯಕ ಅವರ ಕಾವೇರಿಯ ವಾಸ ಕಾನೂನುಬದ್ಧ ಮತ್ತು ಗೌರವಯುತ ಎಂದು ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳಲಾಗಿದೆ.

ಯಡಿಯೂರಪ್ಪಗೆ ಸಿಎಂ ಆಗೋ ಆಸೆ ಇನ್ನೂ ಹೋಗಿಲ್ಲ : ಸಿದ್ದರಾಮಯ್ಯ ಯಡಿಯೂರಪ್ಪಗೆ ಸಿಎಂ ಆಗೋ ಆಸೆ ಇನ್ನೂ ಹೋಗಿಲ್ಲ : ಸಿದ್ದರಾಮಯ್ಯ

ಸರ್ಕಾರ ಬೀಳಿಸುವ ಯತ್ನ ವಿಫಲವಾಗಿದ್ದಕ್ಕೆ ಸ್ಥಿಮಿತ ಕಳೆದುಕೊಂಡಿರುವಿರೇನು? ಮೋಜಿನಲ್ಲಿರುವ ಬಿಜೆಪಿ ಶಾಸಕರು ಕ್ಷೇತ್ರಗಳಿಗೆ ಹೋಗಿ ಕೆಲಸ ಮಾಡುವುದೆಂದು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

English summary
Congress reacted in Twitter to BJP's tweet on Siddaramaiah, calling him 'Maryada Purushotthama'. Siddaramaiah's residing at Cauvery Bhavan is hounarable than BS Yeddyurappa's Parappan Agrahara life, it said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X