‘ರಾಜಕೀಯ ಪಕ್ಷ ಬದಲಾದಂತೆ "ಹಿಂದೂ ಉಲಿ"ಯ ವೇಷವೂ ಬದಲಾಗುತ್ತದೆ!’

ಕರ್ನಾಟಕ ರಾಜಕೀಯದಲ್ಲಿ ಬೆಂಕಿ ಬಿದ್ದಂತಾಗಿದೆ. ಅದರಲ್ಲೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಜಟಾಪಟಿ ಶುರುವಾಗಿರುವ ಈ ಸಮಯದಲ್ಲಿ ಕಚ್ಚಾಟ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ 'ಉಗ್ರ' ಆರೋಪವ ಹೊರಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಏನು ಹೇಳಿದೆ ಗೊತ್ತಾ..? ಅಷ್ಟಕ್ಕೂ 'ರಾಜಕೀಯ ಪಕ್ಷ ಬದಲಾದಂತೆ "ಹಿಂದೂ ಉಲಿ"ಯ ವೇಷವೂ ಬದಲಾಗುತ್ತದೆ!' ಎಂದು ಕಾಂಗ್ರೆಸ್ ಹೇಳಿದ್ದೇಕೆ?

ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್ ನಡುವೆ ಯುದ್ಧ ಜೋರಾಗಿದ್ದು, ಅದ್ರಲ್ಲೂ ಸಿಎಂ ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ಕೆಲವು ದಿನಗಳ ಹಿಂದಷ್ಟೇ ಗಂಭೀರ ಆರೋಪ ಮಾಡಿದ್ದರು. 'ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಐಸಿಸ್ ಭಯೋತ್ಪಾದಕರ ಬೆಂಬಲಿಗನ ಜತೆ ವೇದಿಕೆ ಹಂಚಿಕೊಂಡ್ರು.

Congress Challenged BJP MLA Basanagouda Patil Yatnal With A Photo

ತನ್ವಿರ್ ಪೀರಾ ಎಂಬ ಮುಸ್ಲಿಂ ಮೌಲ್ವಿ ಯೆಮೆನ್, ಸೌದಿ ಹಾಗೂ ಮಧ್ಯ ಪ್ರಾಚ್ಯ ದೇಶ ಪ್ರವಾಸದ ವೇಳೆ ಭಯೋತ್ಪಾದಕ ಸಂಘಟನೆಗಳ ಪ್ರಮುಖರ ಭೇಟಿ ಆಗಿದ್ದರು.' ಎಂದು ಯತ್ನಾಳ್ ಆರೋಪ ಮಾಡಿದ್ದರು. ಇದೇ ಕಾರಣಕ್ಕೆ, ಕಾಂಗ್ರೆಸ್‌ನ ಕರ್ನಾಟಕ ಘಟಕ ಇದೀಗ ಯತ್ನಾಳ್ ಅವರ ಯಾವ ಫೋಟೋನ ಸಾಕ್ಷಿಯಾಗಿ ತೋರಿಸಿದೆ ಗೊತ್ತಾ?

'ರಾಜಕೀಯ ಪಕ್ಷ ಬದಲಾದಂತೆ "ಹಿಂದೂ..'

ಬಸನಗೌಡ ಪಾಟೀಲ್ ಯತ್ನಾಳ್ ಅವರ ಹಳೆಯ ಫೋಟೋನ ಇದೀಗ ಟ್ವೀಟ್ ಮಾಡಿರುವ, ಕರ್ನಾಟಕ ಕಾಂಗ್ರೆಸ್ ಹೊಸ ಆರೋಪದ ಬಾಂಬ್ ಸಿಡಿಸಿ 'ರಾಜಕೀಯ ಪಕ್ಷ ಬದಲಾದಂತೆ "ಹಿಂದೂ ಉಲಿ"ಯ ವೇಷವೂ ಬದಲಾಗುತ್ತದೆ!' ಎಂದಿದೆ.

ಹಾಗಾದರೆ, ಇದೀಗ ಕರ್ನಾಟಕ ಕಾಂಗ್ರೆಸ್ ಟ್ವೀಟ್‌ನಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ಏನಿದೆ? ಬಿಜೆಪಿ ಶಾಸಕರಾದ, ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪ ಏನು? ಆ ಮಾಹಿತಿಗೆ ಮುಂದೆ ಓದಿ.

ಬಸನಗೌಡ ಪಾಟೀಲ್ ಯತ್ನಾಳ್ ಅವರ ಫೋಟೋ ಸಹಿತ ಟ್ವೀಟ್ ಮಾಡಿರುವ ಕಾಂಗ್ರೆಸ್, 'ರಾಜಕೀಯ ಪಕ್ಷ ಬದಲಾದಂತೆ "ಹಿಂದೂ ಉಲಿ"ಯ ವೇಷವೂ ಬದಲಾಗುತ್ತದೆ! ಮುಸ್ಲಿಮರೊಂದಿಗೆ ವ್ಯಾಪಾರ, ವ್ಯವಹಾರ. ಮುಸ್ಲಿಮರೊಂದಿಗೆ ಬದುಕು. ಹೊರಗೆ ಮಾತ್ರ ಮುಸ್ಲಿಮರ ಮೇಲೆ ದ್ವೇಷ ಭಾಷಣ.

Congress Challenged BJP MLA Basanagouda Patil Yatnal With A Photo

@BasanagoudaBJP ಅವರೇ, ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ! ನೀವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿಕೊಂಡು, ಜನತೆಗೆ ದ್ವೇಷ ತುಂಬುವ ನಿಮ್ಮ ಬೂಟಾಟಿಕೆಯನ್ನು ಇನ್ನಾದರೂ ಬಿಡಿ.' ಎಂದು ಕಾಂಗ್ರೆಸ್ ಈಗ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆರೋಪ ಮಾಡಿದೆ.

ಬೆಳಗ್ಗೆ ಕೂಡ ಹೀಗೆ ಯತ್ನಾಳ್ ವಿರುದ್ಧ ಟ್ವೀಟ್ ಮಾಡಿದ್ದ, ಕರ್ನಾಟಕ ಕಾಂಗ್ರೆಸ್ ಘಟಕ ಬಿಜೆಪಿ ಶಾಸಕನ ಕೆಣಕಿತ್ತು. ಇದೀಗ ಮತ್ತೊಮ್ಮೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಹೀಗಾಗಿಯೆ ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾವ ರೀತಿ ಪ್ರತಿಕ್ರಿಯೆ ನೀಡಬಹದು? ಅಂತ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+