ರಾಜಭವನಕ್ಕೆ ನುಗ್ಗಿದ ಬಸ್, ರಾಜ್ಯಪಾಲರ ಮುಂದೆ ಕಾಂಗ್ರೆಸ್-ಜೆಡಿಎಸ್ ಶಾಸಕರ ಪರೇಡ್

ಬೆಂಗಳೂರು, ಮೇ 16: ರಾಜಭವನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪರೇಡ್ ನಡೆಸಲು ಉಭಯ ಪಕ್ಷಗಳು ಸಿದ್ಧತೆ ನಡೆಸಿವೆ.

ಶಾಸಕರ ಸಂಖ್ಯಾಬಲವನ್ನು ರಾಜ್ಯಪಾಲರ ಮುಂದಿಟ್ಟು ಸರಕಾರ ರಚನೆಗೆ ಹಕ್ಕು ಮಂಡಿಸಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಇಂದು ಸಂಜೆ 5 ಗಂಟೆಗೆ ರಾಜ್ಯಪಾಲರು ಭೇಟಿಗೆ ಅವಕಾಶ ನೀಡಿದ್ದು, ಪರಮೇಶ್ವರ್ ಮತ್ತು ಕುಮಾರಸ್ವಾಮಿ ನೇತೃತ್ವದಲ್ಲಿ ಶಾಸಕರ ಪರೇಡ್ ನಡೆಯಲಿದೆ.

ರಾಜ್ಯಪಾಲರನ್ನು ಭೇಟಿಯಾಗಲು ಶಾಂಗ್ರೀಲಾ ಹೋಟೆಲ್ ನಿಂದ ಕುಮಾರಸ್ವಾಮಿ ರಾಜಭವನದತ್ತ ತೆರಳಿದ್ದಾರೆ. "ಸ್ಥಿರ ಸರಕಾರ ರಚಿಸುವಷ್ಟು ಸಂಖ್ಯಾ ಬಲ ನಮ್ಮ ಬಳಿ ಇದೆ," ಎಂದು ರಾಜ್ಯಪಾಲರನ್ನು ಭೇಟಿಯಾಗಲು ಹೊರಟ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Congress and JDS MLAs to parade in Raj Bhavan

ಇನ್ನೊಂದು ಕಡೆ ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಹೋಗಲು ಕೆಪಿಸಿಸಿ ಕಚೇರಿ ಮುಂದೆ ಬಸ್ ತಯಾರಾಗಿ ನಿಂತಿದ್ದು ಕೈ ಶಾಸಕರು ಕೂಡ ರಾಜಭವನದತ್ತ ಹೊರಡಲಿದ್ದಾರೆ.

ರಾಜ್ಯಪಾಲರನ್ನು ಭೇಟಿಯಾದ ನಂತರ ಶಾಸಕರು ರೆಸಾರ್ಟ್ ಗೆ ತೆರಳಲಿದ್ದಾರೆ. ಬಿಡದಿ ಬಳಿಯಿರುವ ಈಗಲ್ಟನ್ - ದಿ ಗಾಲ್ಫ್ ರೆಸಾರ್ಟ್ ನಲ್ಲಿ ಶಾಸಕರ ವಾಸ್ತವ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+