ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳೇನು ?

ಕರ್ನಾಟಕದ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಹಲವು ಅಡೆತಡೆಗಳನ್ನು ಹಾಗೂ ವಿರೋಧವನ್ನು ಎದುರಿಸುತ್ತಿವೆ. ಈ ನಡುವೆ ಸಾಮಾಜಿಕ-ಆರ್ಥಿಕ ಜಾತಿ ಸಮೀಕ್ಷೆಯಲ್ಲಿ ಕೇಳುವ 60 ಪ್ರಶ್ನೆಗಳು ಯಾವುವು ಎನ್ನುವುದು ಗಮನ ಸೆಳೆಯುತ್ತಿದೆ. ಸಮೀಕ್ಷೆ ಮಾಡುವವರು ಇಷ್ಟೊಂದು ಪ್ರಶ್ನೆಗಳನ್ನು ಕೇಳಬೇಕೇ ಹಾಗೂ ಜನ ಇಷ್ಟೊಂದು ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆಯೇ ಎನ್ನುವುದು ಈಗ ಇರುವ ಕುತೂಹಲವಾಗಿದೆ.

ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಎಸ್ ಶ್ಯಾಮ್ ಪ್ರಸಾದ್ ಅವರು ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಇದೀಗ ಈ ಪೋಸ್ಟ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ತಿಳಿಯುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಸಮೀಕ್ಷೆ ಪ್ರಾರಂಭಿಸಿದೆ. ಈ ಸಮೀಕ್ಷೆ ಸೋಮವಾರದಿಂದ ಪ್ರಾರಂಭವಾಗಿದ್ದು ಮೊದಲ ದಿನವೇ ಸರ್ವರ್ ಸಮಸ್ಯೆ ಹಾಗೂ ಒಟಿಪಿ ಸಮಸ್ಯೆಗಳು ಎದುರಾಗಿದ್ದವು. ಇನ್ನು ಈ ಸಮೀಕ್ಷೆಯಲ್ಲಿ ಕೇಳಲಾಗುವ ಪ್ರಮುಖ ಪ್ರಶ್ನೆಗಳ ಸಾರಾಂಶ ಇಲ್ಲಿದೆ.

Comprehensive Social Economic and Educational Survey in Karnataka

1. ಮನೆಯ ಮುಖ್ಯಸ್ಥರ ಹೆಸರು

2. ತಂದೆಯ ಹೆಸರು

3. ತಾಯಿಯ ಹೆಸರು

4. ಕುಟುಂಬದ ಕುಲ ಹೆಸರು

5. ಮನೆ ವಿಳಾಸ

6. ಮೊಬೈಲ್ ಸಂಖ್ಯೆ

7. ರೇಷನ್ ಕಾರ್ಡ್ ಸಂಖ್ಯೆ

8. ಆದಾರ್ ಸಂಖ್ಯೆ

9. ಮತದಾರರ ಗುರುತಿನ ಚೀಟಿ ಸಂಖ್ಯೆ

10. ಕುಟುಂಬದ ಒಟ್ಟು ಸದಸ್ಯರು

11. ಧರ್ಮ

12. ಜಾತಿ / ಉಪಜಾತಿ

13. ಜಾತಿ ವರ್ಗ

14. ಜಾತಿ ಪ್ರಮಾಣ ಪತ್ರ ಇದೆಯೇ?

15. ಪ್ರಮಾಣ ಪತ್ರ ಸಂಖ್ಯೆ

16. ಜನ್ಮ ದಿನಾಂಕ

17. ವಯಸ್ಸು

18. ಲಿಂಗ (ಪುರುಷ/ಸ್ತ್ರೀ/ಇತರೆ)

19. ವೈವಾಹಿಕ ಸ್ಥಿತಿ

20. ಜನ್ಮ ಸ್ಥಳ

21. ವಿದ್ಯಾಭ್ಯಾಸದ ಮಟ್ಟ

22. ಮನೆಯಲ್ಲಿ ಓದಲು ಬಲ್ಲವರು ಎಷ್ಟು?

23. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ?

24. ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ)

25. ಮನೆಯಲ್ಲಿ ಶಾಲೆ ಬಿಟ್ಟವರು ಇದ್ದಾರೆಯೇ?

26. ಮನೆಯ ಮುಖ್ಯ ಉದ್ಯೋಗ

27. ಎಷ್ಟು ಜನರು ಉದ್ಯೋಗದಲ್ಲಿದ್ದಾರೆ?

28. ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ)

29. ನಿರುದ್ಯೋಗಿಗಳು ಇದ್ದಾರೆಯೇ?

30. ದಿನದ ಆದಾಯ

31. ತಿಂಗಳ ಆದಾಯ

32. ತಿಂಗಳ ಖರ್ಚು

33. ಸಾಲ ಇದೆಯೇ?

34. ಬಿಪಿಎಲ್ ಕಾರ್ಡ್ ಇದೆಯೇ?

35. ಪಿಂಚಣಿ ಪಡೆಯುತ್ತೀರಾ?

36. ಒಟ್ಟು ಜಮೀನು

37. ಕೃಷಿ/ನಿವಾಸಿ ಜಮೀನು?

38. ಮನೆ ಸ್ವಂತದ್ದೇ/ಬಾಡಿಗೆ?

39. ಮನೆಯ ಪ್ರಕಾರ (ಕಚ್ಚಾ/ಪಕ್ಕಾ)

40. ವಿದ್ಯುತ್ ಸಂಪರ್ಕ ಇದೆಯೇ?

41. ಕುಡಿಯುವ ನೀರಿನ ಮೂಲ

42. ಶೌಚಾಲಯ ಇದೆಯೇ?

43. ಮನೆಯಲ್ಲಿ ಎಷ್ಟು ಕೊಠಡಿಗಳು?

44. ಇಂಟರ್ನೆಟ್/ಮೊಬೈಲ್ ಸೌಲಭ್ಯ ಇದೆಯೇ?

45. ವಾಹನ ಇದೆಯೇ (ಸೈಕಲ್/ಬೈಕ್/ಕಾರು/ಟ್ರಾಕ್ಟರ್)?

46. ರೇಷನ್ ಸಬ್ಸಿಡಿ ಸಿಗುತ್ತಿದೆಯೇ?

47. ವಸತಿ ಯೋಜನೆ ಲಾಭ ಪಡೆದಿದ್ದೀರಾ?

48. ವಿದ್ಯಾರ್ಥಿವೇತನ ಪಡೆದಿದ್ದೀರಾ?

49. ಮೀಸಲಾತಿ ಲಾಭ ಪಡೆದಿದ್ದೀರಾ?

50. ಆರೋಗ್ಯ ಯೋಜನೆ ಲಾಭ ಇದೆಯೇ?

51. ಮನೆಯಲ್ಲಿ ಯಾರಾದರು ವಿಧವೆ ಇದ್ದಾರೆಯೇ?

52. ಅಂಗವಿಕಲರು ಇದ್ದಾರೆಯೇ?

53. ಹಿರಿಯ ನಾಗರಿಕರು (60+) ಇದ್ದಾರೆಯೇ?

54. ಆರು ವರ್ಷದೊಳಗಿನ ಮಕ್ಕಳು ಎಷ್ಟು?

55. ಯುವಕರು (18-35) ಎಷ್ಟು?

56. ಯಾವುದೇ ಸಾಮಾಜಿಕ ಸಂಘ/ಸಂಸ್ಥೆಯಲ್ಲಿ ಸೇರಿದ್ದೀರಾ?

57. ಮನೆಯಲ್ಲಿ ನೋಂದಾಯಿತ ಮತದಾರರು ಎಷ್ಟು?

58. ಮತದಾನ ಮಾಡುವವರೇ?

59. ಜಾತಿ ಆಧಾರದ ಮೇಲೆ ಬೇಧಭಾವ ಅನುಭವಿಸಿದ್ದೀರಾ?

60. ಜಾತಿ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+