ಬೆಂಗಳೂರು ಬಂದ್: ನೇರಾ, ನೈತಿಕ ಬೆಂಬಲ ಇನ್ನೂ ಅಸ್ಪಷ್ಟ, ರಸ್ತೆಗಳಿಯುತ್ತಾ ಸಾರಿಗೆ ಬಸ್..?
ಮಂಗಳೂರು, ಸೆಪ್ಟೆಂಬರ್ 25: ನಾಳೆ ರಾಜಧಾನಿ ಬೆಂಗಳೂರು ಬಂದ್‌ಗೆ ಜಲ ಸಂರಕ್ಷಣ ಸಮಿತಿ ಕರೆ ಕೊಟ್ಟಿದೆ. ಆದರೆ ಈ ಬಂದ್‌ಗೆ ಯರದ್ದೆಲ್ಲಾ ನೈತಿಕ ಬೆಂಬಲ ? ಯಾರದ್ದು ನೇರಾ ನೇರ ಬೆಂಬಲ ಎನ್ನುವ ವಿಚಾರ ಇನ್ನೂ ಕೂಡ ಅಸ್ಪಷ್ಟ. ನಗರದಲ್ಲಿ ನಾಳೆ ಬಿಎಂಟಿಸಿ ಓಡಾಟ ನಡೆಸುತ್ತಾ ಇಲ್ವಾ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಕೂಡ ಸಿಕಿಲ್ಲ.
ಬಂದ್ ದಿನ ಸಂಚಾರ ನಾಡಿ ಬಿಎಂಟಿಸಿ ಸ್ಥಬ್ಧ ಆಗುವ ಸಾಧ್ಯತೆ ಇದೆ. ಆದರೆ ಇದರ ಒಳಗಡೆ ಸಾಕಷ್ಟು ಸಂಘಟನೆ ಇದೆ. ಸದ್ಯ ಕೆಎಸ್‌ಆರ್‌ಟಿಸಿ ವರ್ಕರ್ಸ್ ಫೆಡರೇಶನ್ ಬಂದ್‌ಗೆ ಬೆಂಬಲ ಕೊಟ್ಟಿದೆ.ಆದರೆ ಅದರಲ್ಲಿ ಇರುವ ಉಳಿದ ಬಣ ಬೆಂಬಲ ನೀಡಿದೆಯಾ ಕೇಳಿದರೆ ಇನ್ನೂ ಗೊಂದಲ ಎನ್ನುವ ಉತ್ತರವೇ ಸಿಗುತ್ತದೆ.

ಬಂದ್‌ನಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ನಿರ್ಧಾರ ಅಂತಿಮವಾಗಿಲ್ಲ. ಕೆಲ ನೌಕರ ಸಂಘಟನೆಗಳಿಂದ ಬಂದ್‌ನಲ್ಲಿ ಭಾಗಿಯಾಗುವಂತೆ ಸೂಚನೆ. ಆದರೆ ಇಲ್ಲಿ ತನಕ ಬಂದ್‌ನಲ್ಲಿ ಭಾಗಿ ಹೇಗೆ, ಬಂದ್‌ನಲ್ಲಿನ ಹೋರಾಟ ಹೇಗೆ ಎನ್ನುವುದರ ಬಗ್ಗೆ ಸದ್ಯ ಮಾಹಿತಿ ಇಲ್ಲದೆ ಬಿಎಂಟಿಸಿ ನೌಕರರು ಗೊಂದಲದಲ್ಲಿದ್ದಾರೆ.
ಇತ್ತ ಬಂದ್ ದಿನ ಬಸ್ ರಸ್ತೆಗಿಳಿಸಬೇಕಾ, ಬೇಡವಾ ಎಂಬ ಚರ್ಚೆ ಮಾಡುತ್ತಿರುವ ಬಿಎಂಟಿಸಿ ಅಧಿಕಾರಿಗಳು. ಬಂದ್ ಸ್ವರೂಪ ನೋಡಿಕೊಂಡು ಬಸ್ ರಸ್ತೆಗಿಳಿಸುವ ಬಗ್ಗೆ ತೀರ್ಮಾನ ಮಾಡಲು ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಇಂದು ಸಂಜೆ ಒಳಗೆ ಬಸ್ ಓಡಾಟದ ಬಗ್ಗೆ ಬಿಎಂಟಿಸಿ ನಿರ್ಧರಿಸುವ ಸಾಧ್ಯತೆ ಇದೆ.
ಇನ್ನೂ ಕರ್ನಾಟಕ, ಬೆಂಗಳೂರು ಬಂದ್ ಹಿನ್ನೆಲೆಯಲ್ಲಿಂದು ಮಹತ್ವದ ಸಭೆಗಳು,ಸುದ್ದಿಗೋಷ್ಟಿ ಹಾಗೂ ಪ್ರತಿಭಟನೆ ನಡೆಯಲಿದೆ. 29ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡುವ ವಿಚಾರ, ಕಾವೇರಿ ನೀರು ವಿಚಾರವಾಗಿ ಬಂದ್‌ಗೆ ಕರೆ ನೀಡಲು ಸಿದ್ದತೆ ಮಾಡಿ ಕೊಂಡಿರುವುದು ಇನ್ನೊಂದು ಕಡೆ , ಅದರ ಜೊತೆಗೆ ಕನ್ನಡ ಒಕ್ಕೂಟ ಕಡೆಯಿಂದಲೂ ಸುದ್ದಿಗೋಷ್ಠಿ ನಡೆಸಲು ತೀರ್ಮಾನ ಮಾಡಲಾಗಿದೆ.

ಅಖಂಡ ಕರ್ನಾಟಕ ಬಂದ್ ವಿಚಾರವಾಗಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಹತ್ವದ ಸಭೆ ಕೂಡ ನಡೆಸಲಾಗುತ್ತಿದ್ದು, ಬೆಳಗ್ಗೆ 11 ರಿಂದ ವುಡ್‌ಲ್ಯಾಂಡ್ಸ್ ಹೊಟೇಲ್‌ನಲ್ಲಿ ಸಭೆ ನಡೆಯಲಿದೆ. ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ, ಶಿವರಾಮೆ ಗೌಡ, ಮಂಜುನಾಥ್ ದೇವ್, ಕೆಆರ್ ಕುಮಾರ್, ಗಿರೀಶ್ ಗೌಡ ಸೇರಿದಂತೆ ಅನೇಕರ ಭಾಗಿ ಆಗಲಿದ್ದಾರೆ. ಸಭೆ ನಂತರ ಅಖಂಡ ಕರ್ನಾಟಕ ಬಂದ್ ದಿನಾಂಕ ಅಧಿಕೃತ ಘೋಷಣೆ ವಾಟಾಳ್ ನಾಗರಾಜ್ ಮಾಡಲಿದ್ದಾರೆ. ಎಲ್ಲಾ ಕನ್ನಡಪರ, ದಲಿತಪರ, ಕಾರ್ಮಿಕ, ರೈತಪರ, ಸಾರಿಗೆ ಮುಖಂಡರು ವಾಟಾಳ್ ಬೆಂಬಲಕ್ಕೆ ನಿಂತಿದ್ದಾರೆ.
ಸಿಲಿಕಾನ್ ಸಿಟಿ ಜನರಿಗೆ ಇಂದು ಕಾವೇರಿ ಪ್ರತಿಭಟನೆ ಕಿಚ್ಚು ತಟ್ಟಲಿದೆ. ಇಂದು ಕನ್ನಡ ಪರ ಸಂಘಟನೆಗಳಿಂದ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲು ಸಜ್ಜಾಗಿವೆ. ನಗರದ ಬೇರೆ ಬೇರೆ ಭಾಗಗಳಲ್ಲಿ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ತಯಾರಿ ನಡೆಸಿವೆ. ಕಾವೇರಿ ಹೋರಾಟ ಸಮಿತಿಯಿಂದ ಪ್ರತಿಭಟನೆ, ರಸ್ತೆ ತಡೆಗೆ ತಯಾರಿ ಮಾಡಿ ಕೊಳ್ಳಲಾಗಿದೆ. ಇನ್ನೊಂದು ಕಡೆ ಕಾವೇರಿ ನೀರಿಗಾಗಿ ಬೆಂಗಳೂರು ಮೈಸೂರು ರಸ್ತೆ ತಡೆ ಮಾಡಲು ಕೂಡ ಪ್ಲಾನ್ ಮಾಡಲಾಗಿದೆ.
ಮೈಸೂರು ರೋಡ್‌ನ ಗಾಳಿ ಆಂಜನೇಯ ದೇವಾಲಯದ ಮುಂದೆ ಪ್ರತಿಭಟನೆ ನಡೆಯಲಿದ್ದು ಬೆಳಗ್ಗೆ 10ಕ್ಕೆ ಪ್ರತಿಭಟನೆ ಆರಂಭ ಆಗಲಿದ್ದು, ರಸ್ತೆ ತಡೆ ಮಾಡಲು ಯೋಜನೆ ರೂಪಿಸಿ ಕೊಳ್ಳಲಾಗಿದೆ. ಇನೊಂದು ಕಡೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯಿಂದ ರೈಲ್ವೆ ಸ್ಟೇಷನ್ ಮುತ್ತಿಗೆ ಹಾಕಲಾಗುತ್ತದೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ನಿಂಗರಾಜುಗೌಡ ನೇತೃತ್ವದಲ್ಲಿ ರ್ಯಾಲಿ ಕೂಡ ಪ್ಲಾನ್ ಮಾಡಲಾಗಿದ್ದು ಬೆಳಿಗ್ಗೆ 11 ಗಂಟೆಗೆ ಮೌರ್ಯ ಸರ್ಕಲ್ ನಿಂದ ಆರಂಭವಾಗಲಿರುವ ರ್ಯಾಲಿ, ನೂರಾರು ಕಾರ್ಯಕರ್ತರಿಂದ ಮೌರ್ಯ ಸರ್ಕಲ್‌ನಿಂದ ರ್ಯಾಲಿ ಮೂಲಕ ಹೊರಟು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮುತ್ತಿಗೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಇಂದು ಸಾಕಷ್ಟು ಸಂಖ್ಯೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಪ್ರತಿಭಟನೆ ರ್ಯಾಲಿ ನಡೆಯಲಿದ್ದು, ಟ್ರಾಫಿಕ್ ಜಾಮ್ ಅಂತೂ ಪಕ್ಕಾ ಆಗಿದ್ದು, ಬೆಂಗಳೂರು ನಗರದ ಮಂದಿ ಪರದಾಡುವ ದೃಶ್ಯ ನಿರ್ಮಾಣ ಆಗುತ್ತದೆ.












Click it and Unblock the Notifications