ಅರವಿಂದ್ ಜಾಧವ್ ವಿರುದ್ಧ ಎಸಿಬಿಗೆ ದೂರು

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 23 : ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ ವಿರುದ್ಧ ಎಸಿಬಿಗೆ ದೂರು ನೀಡಲಾಗಿದೆ. ಸರ್ಕಾರಿ ಭೂಮಿಗೆ ದಾಖಲಾತಿಗಳನ್ನು ಸಿದ್ಧಪಡಿಸಲು ಅರವಿಂದ್ ಜಾಧವ್ ಅವರು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂಬುದು ಆರೋಪವಾಗಿದೆ.[ಜಾಧವ್ ವಿವಾದ: ವರದಿ ಕೇಳಿದ ಸಿದ್ದರಾಮಯ್ಯ]

ಮಂಗಳವಾರ ಆರ್‌ಟಿಐ ಕಾರ್ಯಕರ್ತ ಭಾಸ್ಕರನ್ ಎಂಬುವವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಅರವಿಂದ್ ಜಾಧವ್ ಅವರ ವಿರುದ್ಧ ದೂರು ನೀಡಿದ್ದಾರೆ. ಜಾಧವ್ ಅವರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ವರದಿ ನೀಡುವಂತೆ ಈಗಾಗಲೇ ಸಿದ್ದರಾಮಯ್ಯ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.[ಅರವಿಂದ್ ಜಾಧವ್ ವಿರುದ್ಧ ಭೂ ಹಗರಣ ಆರೋಪ?]

Complaint to ACB against Chief Secretary Arvind Jadhav

ಅರವಿಂದ್ ಜಾಧವ್ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ತಾಯಿ ತಾರಾಬಾಯಿ ಅವರ ಹೆಸರಿನಲ್ಲಿ ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ರಾಮನಾಯಕನಹಳ್ಳಿಯಲ್ಲಿ ಸರ್ಕಾರಿ ಭೂಮಿ ಖರೀದಿಸಿದ್ದಾರೆ ಎಂಬ ಆರೋಪವಿದೆ. ಈ ಬಗ್ಗೆ ವಿವರವಾದ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

ಇಂದು ಸ್ಪಷ್ಟನೆ : ತಮ್ಮ ಮೇಲೆ ಬಂದಿರುವ ಆರೋಪಗಳ ಕುರಿತು ಅರವಿಂದ್ ಜಾಧವ್ ಅವರು ಸರ್ಕಾರಕ್ಕೆ ಮಂಗಳವಾರ ವರದಿ ನೀಡಲಿದ್ದಾರೆ ಮತ್ತು ದಾಖಲಾತಿಗಳನ್ನು ಸಿದ್ಧಪಡಿಸಿದ ವಿಚಾರದಲ್ಲಿ ಸ್ಪಷ್ಟನೆಗಳನ್ನು ನೀಡಲಿದ್ದಾರೆ.

ಮತ್ತೊಂದು ಕಡೆ ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಸಿದ್ದರಾಮಯ್ಯ ಅವರು, 'ಅರವಿಂದ್ ಜಾಧವ್ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ' ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
RTI activist S.Bhaskaran has filed a complaint with the Anti-Corruption Bureau (ACB) against Karnataka Chief Secretary Arvind Jadhav.
Please Wait while comments are loading...