'ನಾನೂ ನಗರ ನಕ್ಸಲ್' ಎಂದ ಗಿರೀಶ ಕಾರ್ನಾಡ್ ವಿರುದ್ಧ ದೂರು
Recommended Video

ಬೆಂಗಳೂರು, ಸೆಪ್ಟೆಂಬರ್ 7: 'ನಾನೂ ನಗರದ ನಕ್ಸಲ್' ಎಂಬ ಫಲಕ ಹಾಕಿಕೊಂಡಿದ್ದ ಹಿರಿಯ ಸಾಹಿತಿ ಗಿರೀಶ ಕಾರ್ನಾಡ್ ಅವರ ವಿರುದ್ಧ ಹೈಕೋರ್ಟ್ ವಕೀಲ ಅಮೃತೇಶ ಎಂಬುವವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ನಡೆದು ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಸೆ.5ರಂದು ನಡೆದ ಅಭಿವ್ಯಕ್ತಿ ಹತ್ಯೆ ವಿರೋಧ ಸಪ್ತಾಹ ಸಮಾವೇಶದಲ್ಲಿ ಗಿರೀಶ ಕಾರ್ನಾಡ್ 'ನಾನು ಕೂಡ ನಗರ ನಕ್ಸಲ್' ಎಂಬ ಫಲಕವನ್ನು ಕೊರಳಿಗೆ ಹಾಕಿಕೊಂಡಿದ್ದರು.
'ನಕ್ಸಲ್ ಸಂಘಟನೆಗಳನ್ನು ಕಾನೂನಿನ ಅಡಿಯಲ್ಲಿ ನಿಷೇಧಿಸಲಾಗಿದೆ. ಇದು ತಿಳಿದಿದ್ದರೂ ಕಾರ್ನಾಡ್ ಅವರು ಬಹಿರಂಗವಾಗಿಯೇ 'ನಾನು ಕೂಡ ನಗರದ ನಕ್ಸಲ್' ಎಂದು ಹೇಳಿಕೊಂಡು ಓಡಾಡುತ್ತಿರುವುದು ಸಂವಿಧಾನ ವಿರೋಧಿ ನಡೆ. ಹೀಗಾಗಿ ಅವರನ್ನು ಕೂಡಲೇ ಬಂಧಿಸಬೇಕು' ಎಂದು ಅಮೃತೇಶ್ ಒತ್ತಾಯಿಸಿದ್ದಾರೆ.

ಸಿಪಿಐ (ಮಾವೋವಾದಿ) ಸಹಸಂಘಟನೆಯಾದ ಮಹಾರಾಷ್ಟ್ರದ ಕಬೀರ್ ಕಾಲಾ ಮಂಚ್ ನಡೆಸಿದ್ದ ಸಮಾವೇಶದಲ್ಲಿಯೂ ಕಾರ್ನಾಡ್ ಭಾಗವಹಿಸಿದ್ದರು. ನಿಷೇಧಿತ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳುವ ಅಗತ್ಯವೇನಿತ್ತು? ಈ ವಿಚಾರದಲ್ಲಿಯೂ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications