ಚಿಕ್ಕಮಗಳೂರು: ಕಾರ್ಮಿಕ ಕುಟುಂಬವನ್ನು ಕೂಡಿ ಹಾಕಿ ಹಿಂಸೆ ಕೊಟ್ಟ ಎಸ್ಟೇಟ್ ಮಾಲೀಕ
Recommended Video

ಚಿಕ್ಕಮಗಳೂರು, ಆಗಸ್ಟ್.02: ಕಾಫಿ ಎಸ್ಟೇಟ್ ನಲ್ಲಿ ಎಸ್ಟೇಟ್ ಮಾಲೀಕ, ಕಾರ್ಮಿಕ ಹಾಗೂ ಆತನ ಕುಟುಂಬದವರನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ತಾಲೂಕಿನ ಜೇನುಗದ್ದೆ ಸಮೀಪದ ಮೇನ್ ಪಾಲ್ ಎಸ್ಟೇಟ್ ನಲ್ಲಿ ಈ ಘಟನೆ ನಡೆದಿದೆ.
ಮೇನ್ ಪಾಲ್ ಎಸ್ಟೇಟ್ ಮಾಲೀಕ ಪೀಟರ್ ಕಾರ್ಮಿಕ ಗೋಪಾಲ್ ಸೇರಿದಂತೆ ಆತನ ಪತ್ನಿ ಇಂದ್ರ ಹಾಗೂ ಮಕ್ಕಳನ್ನು ಬಂಧನದಲ್ಲಿಟ್ಟಿದ್ದಾನೆ. ಬಂಧನದಿಂದ ರಾತ್ರೋ ರಾತ್ರಿ ತಪ್ಪಿಸಿಕೊಂಡು ಬಂದ ಕಾರ್ಮಿಕ ಗೋಪಾಲ ಎಸ್ಪಿ ಅಣ್ಣಾಮಲೈ ಅವರಿಗೆ ದೂರು ನೀಡಿದ್ದಾನೆ.

ದೂರಿನಲ್ಲಿ ಗೋಪಾಲ್ ಕುಟುಂಬವನ್ನು ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲ, "ಜುಲೈ.16ರಂದು ಏನನ್ನೂ ತಿಳಿಸದೇ ನನ್ನನ್ನು ಮತ್ತು ನನ್ನ ಹೆಂಡತಿ ಇಂದ್ರಳಾನ್ನು ಬಾಳೆಹೊನ್ನೂರು ಪೊಲೀಸ್ ಬಲತ್ಕಾರವಾಗಿ ನಮ್ಮ ಮನೆಯಿಂದ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿ ಏಕಾಏಕಿ ನನಗೆ ಮತ್ತು ನನ್ನ ಪತ್ನಿಗೆ ಹಲ್ಲೆ ಮಾಡಿ ಪೀಟರ್ ಅವರಿಗೆ ಹಣ ನೀಡುವಂತೆ ಹಿಂಸೆ ನೀಡಿರುತ್ತಾರೆ.

ನಂತರ ನನ್ನನ್ನು ಮತ್ತು ನನ್ನ ಹಂಡತಿಯನ್ನು ಪೊಲೀಸರು ಮೇನ್ ಪಾಲ್ ಎಸ್ಟೇಟ್ ಗೆ ಕರೆದುಕೊಂಡು ಹೋಗಿ ಎಸ್ಟೇಟ್ ರೂಂ ನಲ್ಲಿ ಕೂಡಿ ಹಾಕಿ ಅಕ್ರಮವಾಗಿ ಬಂಧನದಲ್ಲಿಟ್ಟು ಹಿಂಸೆ ಕೊಟ್ಟಿದ್ದಾರೆ" ಎಂದು ಕಾರ್ಮಿಕ ಗೋಪಾಲ್ ದೂರು ನೀಡಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications