ಬರ : ಪ್ರಧಾನಿ ಭೇಟಿಗೆ ತೆರಳಲಿರುವ ಸಿದ್ದರಾಮಯ್ಯ ನೇತೃತ್ವದ ನಿಯೋಗ

Written By: Ramesh
Subscribe to Oneindia Kannada

ಬೆಂಗಳೂರು, ಡಿಸೆಂಬರ್.30 : ರಾಜ್ಯದಲ್ಲಿ ಉಂಟಾಗಿರುವ ಬರಸ್ಥಿತಿ ಬಗ್ಗೆ ವಿವರಿಸಿ ಕೇಂದ್ರದಿಂದ ಹೆಚ್ಚಿನ ನೆರವು ಕೋರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷ ನಿಯೋಗದೊಂದಿಗೆ (ಡಿ.30) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವರು.

ಸಂಜೆ 7ಗಂಟೆಗೆ ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಪ್ರಧಾನ ಮಂತ್ರಿಯವರನ್ನು ಭೇಟಿಯಾಗಲಿದೆ. ನಿಯೋಗದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕರು ಭಾಗಿಯಾಗುವರು. ಪ್ರಧಾನಿ ಬಳಿ ನಿಯೋಗ: [ಸಿದ್ದು, ಬಿಎಸ್ವೈ ಅದೇ ರಾಗ ಅದೇ ಹಾಡು]

ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರು, ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಜ್ಯದ ಕೃಷಿ, ಕಂದಾಯ ಮತ್ತು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಸಚಿವರು ಮುಖ್ಯಮಂತ್ರಿಗಳೊಂದಿಗೆ ತೆರಳುವರು.

CM Siddaramaiah lead delegation meet PM narendra modi on drought aid

ಇತ್ತೀಚೆಗಷ್ಟೇ ಮಹದಾಯಿ ನದಿನೀರು ಹಂಚಿಕೆ ಮತ್ತು ರಾಜ್ಯ ಎದುರಿಸುತ್ತಿರುವ ಭೀಕರ ಬರದ ಪರಿಸ್ಥಿತಿಯನ್ನು ಪ್ರಧಾನಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲು ಸಮಯಾವಕಾಶ ಕೋರಲಾಗಿತ್ತು.

ಆದರೆ, ಮೋದಿ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತ ಪಡಿಸಿದ್ದರು. ಮತ್ತೆ ಈಗ ಸರ್ವ ಪಕ್ಷ ನಿಯೋಗದೊಂದಿಗೆ ನರೇಂದ್ರ ಮೋದಿ ಅವರಿಗೆ ರಾಜ್ಯದಲ್ಲಿ ತಲೆದೂರಿರುವ ಬರ ಪರಿಸ್ಥತಿ ಬಗ್ಗೆ ತಿಳಿಸಲು ದೆಹಲಿ ತೆರಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chief Minister Siddaramaiah lead delegation meet Prime Minister Narendra Modi in New Delhi on December 31 to discuss the prevailing drought situation in the state.
Please Wait while comments are loading...