Bengaluru Tunnel Road: ಬೆಂಗಳೂರು ಸುರಂಗ ರಸ್ತೆ ಯೋಜನೆಗೆ ₹40000 ಕೋಟಿ ಘೋಷಣೆ
ಬೆಂಗಳೂರು, ಮಾರ್ಚ್ 07: ಕರ್ನಾಟಕ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರಿಗೆ ಹೆಚ್ಚುವರಿ ಅನುದಾನ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಂಗಳೂರು ಟನಲ್ ರಸ್ತೆಗಳಿಗೂ ಭರ್ಜರಿ ಅನುದಾನ ಹಂಚಿಕೆ ಮಾಡಿದ್ದಾರೆ. ಸುರಂಗ ರಸ್ತೆ ಯೋಜನೆಗೆ ತಜ್ಞರು, ವಿಪಕ್ಷ ನಾಯಕರಿಂದ ವಿರೋಧ ಕೇಳಿ ಬಂದರೂ ಸಹಿತ ಯೋಜನೆಯಿಂದ ಸರ್ಕಾರ ಹಿಂದೆ ಸರಿದಿಲ್ಲ ಎಂಬುದಕ್ಕೆ ಈಗಿನ ಅನುದಾನ ಘೋಷಣೆ ಸಾಕ್ಷಿಯಾಗಿದೆ.
ಬೆಂಗಳೂರಿನಲ್ಲಿ ಎರಡು ಪ್ರಮುಖ ಟನಲ್ ರಸ್ತೆ ಯೋಜನೆಗಳಿಗೆ ಸರ್ಕಾರ ಕೈಹಾಕಿದ್ದು, ಟೆಂಡರ್ ಕರೆದಿದೆ. ಈ ಟನಲ್ ರಸ್ತೆ ಯೋಜನೆಗಳಿಗೆ ಕರ್ನಾಟಕ ಬಜೆಟ್‌ನಲ್ಲಿ 40,000 ಕೋಟಿ ರೂ. ಯೋಜನೆ ಹಂಚಿಕೆ ಮಾಡಲಾಗಿದೆ.

ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ ಬೋರ್ಡ್ ಈಗಾಗಲೇ ಡಿಪಿಆರ್ ಆಗಿದೆ. ನಾಯಂಡಹಳ್ಳಿಯಿಂದ ಕೆ.ಆರ್.ಪುರಂವರೆಗೆ ಟನಲ್ ರಸ್ತೆ ಯೋಜನೆಗೆ ಚಿಂತನೆ ಇದೆ. ಹೆಬ್ಬಾಳವರೆಗಿನ ಟನಲ್ ರಸ್ತೆ ಈ ಯೋಜನೆಗಳಿಗೆ ಸಾಲ ಕೊಡಲು ಪ್ರಮುಖ ಬ್ಯಾಂಕ್‌ಗಳು ಮುಂದೆ ಬಂದಿವೆ. ಇದೀಗ ಸರ್ಕಾರ 40,000 ಕೋಟಿ ರೂ. ಅನುದಾನ ನೀಡಿದ್ದಾರೆ. ಶೀಘ್ರವೇ ಸಿಲ್ಕ್ ಬೋರ್ಡ್ ನಿಂದ ಹೆಬ್ಬಾಳವರೆಗಿನ ಸುರಂಗ ಮಾರ್ಗದ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ.
ಹೆಬ್ಬಾಳ ಎಸ್ಟಿಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಒಟ್ಟು ಸುಮಾರು 18.5 ಕಿಲೋ ಮೀಟರ್ ಉದ್ದದ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿದೆ. ಆದರೆ ಇದಕ್ಕೆ ಈಗಾಗಲೇ ಇದ್ದ ಯೋಜನೆ ಅಂಶಗಳನ್ನು ಸೇರಿಸಲಾಗಿದೆ. ಇದಕ್ಕಾಗಿ ಸಾಕಷ್ಟು ಕೋಟಿ ಹಣ ಖರ್ಚು ಮಾಡಲಾಗಿದೆ. ಕೆ.ಆರ್.ಪುರಂನಿಂದ ನಾಯಂಡಹಳ್ಳಿಗೆ ನಮ್ಮ ಮೆಟ್ರೋ ಪರ್ಪಲ್ ಲೈನ್ ಇದೆ. ಹೀಗಾಗಿ ಈ ಮಾರ್ಗ ನಿರ್ಮಾಣ ಸರಿಯಲ್ಲ ಎಂದು ಬಿಜೆಪಿ ಸಂಸದರು ತಿಳಿಸಿದ್ದಾರೆ. ಬೃಹತ್ ಉದ್ದದ್ದ ಟನಲ್ ರಸ್ತೆ ಭವಿಷ್ಯದ ದೃಷ್ಟಿಯಿಂದ ಸರಿಯಲ್ಲ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ಇದೆಲ್ಲದವರ ನಡುವೆ ಸರ್ಕಾರ ಅನುದಾನ ಘೋಷಣೆ ಮಾಡಿದೆ. ಕೆಲವು ಸಂಸ್ಥೆಗಳು ಈಗಾಗಲೇ ಕರೆದ ಟೆಂಡರ್‌ನಲ್ಲಿ ಪಾಲ್ಗೊಂಡಿದ್ದು, 2025ರಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಬಗ್ಗೆ ಸರ್ಕಾರ ಅಧಿಕೃತ ಚಾಲನೆ ನೀಡುವಾಗ ಯೋಜನೆ ಕುರಿತು ಮತ್ತಷ್ಟು ವಿಷಯಗಳು ತಿಳಿದು ಬರಲಿವೆ.
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ವಿವಿಧ ಉಪಕ್ರಮ ಜಾರಿಗೆ ತರುತ್ತಿರುವ ಸರ್ಕಾರದ ಮುಂದುವರಿ ಭಾಗವಾಗಿ ಟನಲ್ ರಸ್ತೆ ಯೋಜನೆಗೆ ಕೈ ಹಾಕಿದೆ. ಆದರೆ ಇದು ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.












Click it and Unblock the Notifications