ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಗಮರ ಬಗ್ಗೆ ಯತ್ನಾಳ್‌ಗೆ ಪ್ರೀತಿ ಇಲ್ಲವೇ: ಸಿ.ಎಂ.ಇಬ್ರಾಹಿಂ ಪ್ರಶ್ನೆ

|
Google Oneindia Kannada News

ಬೆಂಗಳೂರು ನವೆಂಬರ್‌ 11: ಯತ್ನಾಳ್‌ ಮೊದಲು ಲಿಂಗಾಯತರ ಕಥೆ ಏನಾಯಿತು ಎಂದು ತಿಳಿದುಕೊಳ್ಳಲಿ. ಒಂದಿಷ್ಟು ಜನರನ್ನು ಕೂರಿಸಿಕೊಂಡು ಪಂಚಮಸಾಲಿ ಎಂದು ಹೊರಟ್ಟಿದ್ದರಲ್ಲಾ, ಆ ಕೆಲಸ ಆಯ್ತಾ. ಆಗದಿದ್ದರೆ ರಾಜೀನಾಮೆ ಕೊಡುತ್ತೀರಾ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಗಮಮರೆಲ್ಲ ರಸ್ತೆಗೆ ಬಂದು ಕುಳಿತಿದ್ದಾರೆ. ಅವರ ಕಥೆ ಏನಾಯ್ತು, ಅವರ ಸಮಸ್ಯೆ ಬಗೆ ಹರಿಸಿದರಾ..? ಈಗ ಅದರ ಬಗ್ಗೆ ಮಾತನಾಡಲು ತಯಾರಿಲ್ಲ ಅವರು ಹೆದರುತ್ತಿದ್ದಾರೆ. ಬ್ರಾಹ್ಮಣರ ಬಗ್ಗೆ ಪ್ರೀತಿ. ಯತ್ನಾಳ್‌ಗೆ ಜಂಗಮರ ಬಗ್ಗೆ ಪ್ರೀತಿ ಇಲ್ಲವೋ ನೀನು ಸತ್ತರೆ ಅವರೇ ನಿನ್ನ ಎದೆ ಮೇಲೆ ಅವರೇ ಕಾಲಿಡುವವರು. ಅವರನ್ನೇ ಬಿಟ್ಟಿರಲ್ಲ. ಪಂಚಮಸಾಲಿ ಬಗ್ಗೆ ಮಾತನಾಡಲು ಯಾಕೆ ಒಬ್ಬರೂ ತಯಾರಿಲ್ಲ. ಮುಸ್ಲಿಂಮರೇ ಬೇಕಿತ್ತಾ ಜಂಗಮರ ಬಗ್ಗೆ ಮಾತನಾಡಲು ಎಂದು ಲೇವಡಿ ಮಾಡಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಿಂದೂ ಅಲ್ಲ: ವೀರಶೈವ ಮಹಾಸಭಾಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಿಂದೂ ಅಲ್ಲ: ವೀರಶೈವ ಮಹಾಸಭಾ

ನೀವು ಮೀಸಲಾತಿ ಬಗ್ಗೆ ಒಂದು ನೀತಿ ಇಟ್ಟುಕೊಳ್ಳಿ. ಮೀಸಲಾತಿ ಯಾರಿಗೆ ನೀಡಬೇಕು. ಹೇಗೆ ನೀಡಬೇಕು ಎನ್ನುವುದಕ್ಕೆ ಒಂದು ನೀತಿ ಇಟ್ಟುಕೊಳ್ಳಿ. ಜಂಗಮರ ಸಮಸ್ಯೆ ಏನು ಎಂದು ತಿಳಿದುಕೊಳ್ಳಲು ಕನಿಷ್ಟ ಕಮಿಟಿಯಾದರೂ ರಚಿಸಿ. ಜಂಗಮರ ಬೇಡಿಕೆಗೆ ಬೆಲೆನೇ ಇಲ್ಲ. ಮತಕ್ಕಾಗಿ ಸುಮ್ಮನೆ ಜಾತಿ ಹೆಸರು ಹೇಳಿಕೊಂಡು ಹೋಗುತ್ತಿದ್ದಾರೆ ಎಂದರು.

CM Ibrahim Lashes Out At BJP MLA Basanagouda Patil Yatnal

ಬಿಜೆಪಿ ಹೆಂಗಿದ್ದರೂ ಮುಳುಗುವ ಪಾರ್ಟಿ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಕೆಂಪೇಗೌಡ ಮೂರ್ತಿ ಅನಾವರಣಗೊಳಿಸುವ ಕಾರ್ಯಕ್ರಮವನ್ನು ರಾಜ್ಯ ಕಾರ್ಯಕ್ರಮ ಮಾಡದೇ ಬಿಜೆಪಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಏನೇ ಮಾಡಿದರೂ ಜೆಡಿಎಸ್‌ ಮತಗಳು ಜೆಡಿಎಸ್‌ಗೆ ಬಂದೇ ಬರುತ್ತದೆ. ಅದು ಮೋದಿ ಅಲ್ಲ. ಯಾರೇ ಬಂದರು ಇಲ್ಲಿ ಆಗಲ್ಲ. ಇವರಿಗೆ ಆ ಶಕ್ತಿ ಇದ್ದರೆ, ಬಿಜೆಪಿಯವರು ಸ್ಪರ್ಧೆ ಮಾಡಲಿ. ಕಾರ್ಯಕ್ರಮದ ಮೂಲಕ ಜನರನ್ನು ಸೆಳೆಯಬೇಕು ಅಷ್ಟೆ ಎಂದರು.

PM Modi Bengaluru Visit : ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿPM Modi Bengaluru Visit : ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ಇನ್ನು ನಮ್ಮ ಪಂಚರತ್ನ ಯೋಜನೆಯಲ್ಲಿ ನೀಡಿರುವ ಯೋಜನೆಗಳ ಬಗ್ಗೆ ಮೋದಿ ನೋಡಲಿ. ಇಂತಹ ಕಾರ್ಯಕ್ರಮವನ್ನು ಭಾರತ ದೇಶದಲ್ಲಿ ಯಾವುದಾರೂ ರಾಜಕೀಯ ಪಾರ್ಟಿ ಮಾಡಿದೆಯೇ..? ನಿಮ್ಮ ಕೈಯಲ್ಲಿ ಆಗಲಿಲ್ಲ ಎಂದರೆ ಇಳಿಯಿರಿ. ಐದು ವರ್ಷದಲ್ಲಿ ನಾವು ಮಾಡಿ ತೋರಿಸುತ್ತೇವೆ. ಕರ್ನಾಟಕ ರಾಜ್ಯದ ದುಡ್ಡು ತೆಗೆದುಕೊಂಡು, ಬಿಜೆಪಿ ಪಕ್ಷದ ಕಾರ್ಯಕ್ರಮ ಮಾಡಿಕೊಂಡು ಕುಳಿತಿದ್ದಾರೆ. ಇವರಿಗೆ ಕೆಂಪಗೌಡರ ವಂಶಸ್ಥರು ಎಲ್ಲಿದ್ದಾರೆ ಎಂದು ಗೊತ್ತಿದೆಯಾ..? ಮೋದಿಯವರು ಕರ್ನಾಟಕಕ್ಕೆ ಕಾಲಿಟ್ಟ ತಕ್ಷಣ ನಾವು ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಲಿ ಎಂದು ಸಿಎಂ ಇಬ್ರಾಹಿಂ ಆಗ್ರಹಿಸಿದರು.

English summary
JDS state President CM Ibrahim Lashes out at BJP MLA Basanagouda patil yatnal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X