CM Bommai: ಕಡೂರು, ಅರಸೀಕೆರೆಯಲ್ಲಿ ಬಸವರಾಜ ಬೊಮ್ಮಾಯಿ ರೋಡ್‌ ಶೋ ರದ್ದು

ಕಡೂರು, ಅರಸೀಕೆರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನಡೆಸಬೇಕಿದ್ದ ರೋಡ್ ಶೋ ರದ್ದಾಗಿದೆ. ಕಡೂರಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ನೆರೆದಿದ್ದ ಜನರನ್ನು ಉದ್ದೇಶಿಸಿ ಕೈ ಬೀಸಿದರು. ಸ್ಥಳೀಯ ಶಾಸಕ ಬೆಳ್ಳು ಪ್ರಕಾಶ್ ಅವರ ಪರವಾಗಿ ಪ್ರಚಾರ ಮಾಡಲು ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು.

ರೋಡ್ ಶೋ ರದ್ದಾದ ಹಿನ್ನಲೆಯಲ್ಲಿ ಅವರು ನೆರೆದಿದ್ದ ಜನರನ್ನು ನೋಡಿ ಕೈಬೀಸಿದರು. ಸಿಎಂರನ್ನು ನೋಡುತ್ತಿದ್ದಂತೆ ಜನ ಅವರ ವಾಹನಕ್ಕೆ ಮುತ್ತಿಗೆ ಹಾಕಿದರು. ರೋಡ್ ಶೋ ರದ್ದಾದ ಹಿನ್ನಲೆಯಲ್ಲಿ ಅವರು ಶಾಸಕ ಬೆಳ್ಳಿ ಪ್ರಕಾಶ್ ಅವರ ನಿವಾಸಕ್ಕೆ ಭೇಟಿ ನೀಡಿ ಊಟ ಮಾಡಿದರು.

CM Basavaraj Bommai Roadshow Cancelled In Kaduru And Arasikere

ಅರಸೀಕೆರೆಯಲ್ಲಿ ನಡೆಯಬೇಕಿದ್ದ ರೋಡ್ ಶೋ ಕೂಡ ರದ್ದು ಮಾಡಲಾಗಿದೆ. 7.30ಕ್ಕೆ ಅರಸೀಕೆರೆಗೆ ಆಗಮಿಸಬೇಕಿದ್ದ ಬಸವರಾಜ ಬೊಮ್ಮಾಯಿ ರಾತ್ರಿ 10.05 ಗಂಟೆಗೆ ನಗರಕ್ಕೆ ಆಗಮಿಸಿದರು. ರಾತ್ರಿ 10 ಗಂಟೆಯ ಚುನಾವಣಾ ಪ್ರಚಾರ ನಡೆಸಲು ಅನುಮತಿ ಇಲ್ಲದ ಕಾರಣ ಅವರ ರೋಡ್ ಶೋ ರದ್ದು ಮಾಡಲಾಗಿದೆ.

ಬಿಜೆಪಿ ಸರ್ಕಾರದ ಸಾಧನೆಗಳನ್ನು ರಾಜ್ಯದ ಮನೆ ಮನೆಗೂ ತಲುಪಿಸುವ ಉದ್ದೇಶದಿಂದ ಬಿಜೆಪಿ ರಾಜ್ಯದಾದ್ಯಂತ "ಜಯವಾಹಿನಿ" ಹೆಸರಿನಲ್ಲಿ ರಾಜ್ಯದಾದ್ಯಂತ ರ್‍ಯಾಲಿಯನ್ನು ಹಮ್ಮಿಕೊಂಡಿದೆ. ಬೆಂಗಳೂರಿನ ಯಲಹಂಕದಲ್ಲಿ ರ್‍ಯಾಲಿಗೆ ನೀಡಿಲಾಗಿತ್ತು. ದೊಡ್ಡಬಳ್ಳಾಪುರ, ನೆಲಮಂಗಲ, ತುಮಕೂರು, ತಿಪಟೂರು ಸೇರಿದಂತೆ ಹಲವು ಭಾಗಗಳಲ್ಲಿ ಬೊಮ್ಮಾಯಿ ರೋಡ್ ಶೋ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+