ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

World Health Day: ಆರೋಗ್ಯ ಯೋಧರಿಗೆ ಕೃತಜ್ಞತೆ ಸಲ್ಲಿಸಿದ ಬೊಮ್ಮಾಯಿ

|
Google Oneindia Kannada News

ಬೆಂಗಳೂರು ಏಪ್ರಿಲ್ 7: ಮನುಷ್ಯ ಉತ್ತಮ ರೀತಿಯಲ್ಲಿ ಬಾಳ್ವೆ ನಡೆಸಲು ಆರೋಗ್ಯ ಅತ್ಯಗತ್ಯ. ಹೀಗಾಗಿನೇ ಹಿರಿಯರು ಹೇಳೋದು 'ಆರೋಗ್ಯವೇ ಭಾಗ್ಯ' ಎಂದು. ಆರೋಗ್ಯವನ್ನು ಕಾಪಾಡುವಲ್ಲಿ ವೈದ್ಯರು, ದಾದಿಯರು, ಆರೋಗ್ಯ ಯೋಧರ ಪಾತ್ರ ಮಹತ್ತರವಾಗಿದೆ. ಹೀಗಾಗಿ ಇವರಿಗೆ ವಿಶ್ವ ಆರೋಗ್ಯ ದಿನದ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 'ಕೂ' ಮೂಲಕ ಶುಭ ಕೋರಿದ್ದಾರೆ. ಬೊಮ್ಮಾಯಿ ಮಾತ್ರವಲ್ಲದೆ ವಿವಿಧ ಸಚಿವರು ತಮ್ಮ ಸಾಮಾಜಿಕ ಜಾಲತಾಣ 'ಕೂ' ಮೂಲಕ ಜನರಿಗೆ ಶುಭ ಕೋರಿದ್ದಾರೆ.

ಆರೋಗ್ಯ ಕಾಳಜಿ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಪ್ರತಿವರ್ಷ ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನವೆಂದು ಆಚರಿಸುತ್ತದೆ. ಈ ದಿನ ಸಾರ್ವಜನಿಕರಿಗೆ ಆರೋಗ್ಯ ಮತ್ತು ಹಲವಾರು ಕೆಡುಕುಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ವೈದ್ಯರು, ದಾದಿಯರು, ಆರೋಗ್ಯ ಯೋಧರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

World Health Day 2022: ಆರೋಗ್ಯವೇ ಭಾಗ್ಯ, ಆರೋಗ್ಯವಿದ್ದರೆ ಎಲ್ಲವೂ ಸಾಧ್ಯ ..!!World Health Day 2022: ಆರೋಗ್ಯವೇ ಭಾಗ್ಯ, ಆರೋಗ್ಯವಿದ್ದರೆ ಎಲ್ಲವೂ ಸಾಧ್ಯ ..!!

'ಆರೋಗ್ಯವೇ ಭಾಗ್ಯ ಎಂಬುದು ಈ ಸಾಂಕ್ರಾಮಿಕ ರೋಗಗಳಿಂದ ನಮಗೆ ಅರಿವಾಗಿದೆ. ಉತ್ತಮ ಆರೋಗ್ಯಯುತ ಜೀವನಶೈಲಿ ನಮ್ಮ ಮೊದಲ ಆದ್ಯತೆಯಾಗಲಿ. ಉತ್ತಮ ಆರೋಗ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಆರೋಗ್ಯ ಯೋಧರಿಗೆ ಹೃದಯಪೂರ್ವಕ ಕೃತಜ್ಞತೆಗಳು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

CM Basavaraj Bommai express gratitude to medical fraternity on World Health Day 2022

'ಪರಿಸರ ಮಾಲಿನ್ಯವು ಮಾನವ ಮಾತ್ರವಲ್ಲದೆ, ಎಲ್ಲಾ ಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಮಾಲಿನ್ಯವನ್ನು ನಿಯಂತ್ರಣಕ್ಕೆ ತರುವ ಮೂಲಕ ಎಲ್ಲರ ಆರೋಗ್ಯವನ್ನು ಸಂರಕ್ಷಿಸೋಣ. ಉತ್ತಮ ವ್ಯಾಯಾಮ, ಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯವನ್ನು ಕಾಪಾಡೋಣ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ 'ಕೂ' ಮಾಡಿದ್ದಾರೆ.

'ಮಾನವಕೇಂದ್ರಿತ ಚಟುವಟಿಕೆಗಳು ಪರಿಸರವನ್ನು ಕಲುಷಿತಗೊಳಿಸಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಮಾಲಿನ್ಯ ತಡೆಗಟ್ಟಿ ಪರಿಸರ ಉಳಿಸುವ ಕಾರ್ಯಗಳಲ್ಲಿ ಭಾಗಿಯಾಗುವ ಮುಖೇನ ಉತ್ತಮ ಆರೋಗ್ಯಯುತ ಸಮಾಜ ನಿರ್ಮಿಸಲು ಸಹಕರಿಸೋಣ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

'Our Planet, Our Health. ದಿನನಿತ್ಯ ಯೋಗ, ಪ್ರಾಣಾಯಾಮ, ವ್ಯಾಯಾಮ ಮಾಡುವುದು ಹಾಗೂ ಪೌಷ್ಠಿಕ ಆಹಾರ ಸೇವಿಸುವ ಜತೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ಮೂಲಕ ದೈಹಿಕ ಹಾಗೂ ಮಾನಸೀಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸೋಣ ಎಂದು ಉನ್ನತ ಶಿಕ್ಷಣ ಅಶ್ವಥ್ ನಾರಾಯಣ್ ಕೂ ಮಾಡಿದ್ದಾರೆ.

CM Basavaraj Bommai express gratitude to medical fraternity on World Health Day 2022

1948 ರಲ್ಲಿ ಮೊದಲ ಆರೋಗ್ಯ ಅಸೆಂಬ್ಲಿ ಪ್ರಾರಂಭವಾದಾಗಿನಿಂದ ಮತ್ತು 1950 ರಲ್ಲಿ ಜಾರಿಗೆ ಬಂದಾಗಿನಿಂದ, ಈ ಆಚರಣೆಯು ವಿಶ್ವ ಆರೋಗ್ಯ ಸಂಸ್ಥೆ ಕಾಳಜಿ ಮಾಡಬೇಕಾದ ಆದ್ಯತೆಯ ಕ್ಷೇತ್ರವನ್ನು ಎತ್ತಿ ಹಿಡಿಯಲು ಮತ್ತು ನಿರ್ದಿಷ್ಟ ಆರೋಗ್ಯ ವಿಷಯದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಈ ವಿಶ್ವ ಆರೋಗ್ಯ ದಿನದಂದು, ನಮ್ಮ ವೈದ್ಯರು ಆರೋಗ್ಯದ ಅಸಮಾನತೆಗಳನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿದ್ದಾರೆ. ಒಂದು ವರ್ಷವಿಡೀ ಜಾಗತಿಕ ಅಭಿಯಾನದ ಭಾಗವಾಗಿ ಜನರನ್ನು ಒಗ್ಗೂಡಿಸಿ ಉತ್ತಮ, ಆರೋಗ್ಯಕರ ಜಗತ್ತನ್ನು ನಿರ್ಮಿಸಲು ಶ್ರಮಿಸುವ ಉದ್ದೇಶ ಹೊಂದಿದ್ದಾರೆ. ನಮ್ಮ ಆರೋಗ್ಯವು ಕೇವಲ ನಮ್ಮ ಸ್ವಂತ ಬುದ್ಧಿವಂತಿಕೆ ಮತ್ತು ಕಾಳಜಿಯ ಪರಿಣಾಮವಲ್ಲ. ವೈದ್ಯಕೀಯ ವಿಜ್ಞಾನಗಳಲ್ಲಿನ ಅದ್ಭುತ ಪ್ರಗತಿಯೊಂದಿಗೆ ಇದು ಹೊಂದಾಣಿಕೆ ಆಗಬೇಕು. ಆದ್ದರಿಂದ ನಾವು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ, ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಆರೋಗ್ಯಕ್ಕಾಗಿ ಏನು ಮಾಡಬೇಕೆಂದನ್ನು ಈ ವಿಶ್ವ ಆರೋಗ್ಯ ದಿನದಂದು ಯೋಚಿಸಬೇಕು.

Recommended Video

Sri Lanka ವಿಚಾರದಲ್ಲಿ ಭಾರತದ ನಡೆಗೆ ಭಾರೀ ಪ್ರಶಂಸೆ | Oneindia Kannada

English summary
The role of doctors, nurses and healthcare personnel is vital in maintaining health. Basavaraja Bommai, the Chief Minister of World Health Day, wished him well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X