ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸರಿಗೆ ರಾತ್ರಿ ಸಂಚಾರ ನಿರ್ಬಂಧಿಸಿ ಸಿಐಡಿ ಡಿಜಿಪಿ ಆದೇಶ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ಪೊಲೀಸ್ ಅಧಿಕಾರಿಗಳು ರಾತ್ರಿ ಪ್ರಯಾಣವನ್ನು ಮಾಡುವುದರಿಂದ ಅಪಘಾತ ಸಂಭವಿಸಿ ಅಮೂಲ್ಯವಾದ ಜೀವಹಾನಿಯಾಗುತ್ತಿದೆ. ಇದರಿಂದಾಗಿ ಇಲಾಖೆಗೆ ಮಾನವ ಸಂಪನ್ಮೂಲದ ನಷ್ಟ ಉಂಟಾಗುವ ಜೊತೆಗೆ ಜೀವ ಕಳೆದುಕೊಳ್ಳುವ ಕುಟುಂಬಕ್ಕೂ ತುಂಬಲಾರದ ನಷ್ಟ ಉಂಟಾಗುತ್ತಿದೆ. ಇದಕ್ಕಾಗಿಯೇ ಸಿಐಡಿ ತನ್ನ ಸಿಬ್ಬಂದಿಯ ರಾತ್ರಿ ಸಂಚಾರಕ್ಕೆ ನಿರ್ಬಂಧವನ್ನು ಹಾಕಿ ಆದೇಶಿಸಿದೆ.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ರಾತ್ರಿ ಪ್ರಯಾಣಕ್ಕೆ ನಿರ್ಬಂಧ ಹಾಕಲಾಗಿದೆ. ಈ ಬಗ್ಗೆ ಮೆಮೊ ಹೊರಡಿಸಿದ ಸಿಐಡಿ ಡಿಜಿಪಿ ಸಿಐಡಿ ಘಟಕದಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮೆಮೊ ಮೂಲಕ ಸೂಚನೆ ನೀಡಲಾಗಿದೆ. ಬಂದೋಬಸ್ತ್, ಚುನಾವಣೆ ಕರ್ತವ್ಯ, ಪ್ರಕರಣಗಳ ತನಿಖೆ ಹಾಗೂ ಅನ್ಯ ಕರ್ತವ್ಯದ ಮೇಲೆ ತೆರಳುವ ಸಿಬ್ಬಂದಿ ರಾತ್ರಿ ಪ್ರಯಾಣಕ್ಕೆ ಬ್ರೇಕ್ ಹಾಕಲಾಗಿದೆ.

ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನಿರ್ಬಂಧ
ಸಿಐಡಿ ಡಿಜಿಪಿ ಹೊರಡಿಸಿರುವ ಜ್ಞಾಪನದಲ್ಲಿ ತನ್ನ ಸಿಬ್ಬಂದಿಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ವಾಹನದಲ್ಲಿ ಪ್ರಯಾಣಿಸದಂತೆ ಸೂಚನೆ ನೀಡಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ರಾತ್ರಿ ವೇಳೆ ಪ್ರಯಾಣಿಸಬಾರದೆಂದು ಸಿಐಡಿ ಆದೇಶ ಹೊರಡಿಸಿದೆ.

CID has ordered to restrict the night movement of its staff

ಇತ್ತೀಚೆಗೆ ಆಂಧ್ರಪ್ರದೇಶದ ಚಿತ್ತೂರು ಬಳಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದರು. ಶಿವಾಜಿನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್ ಸೇರಿ ಮೂವರು ಪೊಲೀಸರು ಅಸುನೀಗಿದ್ದನ್ನು ಇಲ್ಲಿ ಸ್ಮರಿಸಬಹುದು.

CID has ordered to restrict the night movement of its staff

ದೇಶದಲ್ಲಿ 427 ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಾವು
2021ರ ಎನ್ ಸಿ ಆರ್ ಬಿ ದಾಖಲೆ ಪ್ರಕಾರ ದೇಶದಲ್ಲಿ 427 ಪೊಲೀಸ್ ಅಧಿಕಾರಿ, ಸಿಬ್ಬಂದಿ ರಾತ್ರಿ ಸಂಚಾರವನ್ನು ಮಾಡಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ನಾಲ್ವರು ಪೊಲೀಸರು ಅಪಘಾತಗಳಿಗೆ ಬಲಿಯಾಗಿದ್ದು 25 ಮಂದಿಗೆ ಗಂಭೀರ ಗಾಯವಾಗಿದೆ. ಇದರಿಂದಾಗಿ ಪೊಲೀಸರ ಹಿತದೃಷ್ಠಿಯಿಂದ ರಾತ್ರಿ ಪ್ರಯಾಣ ನಿರ್ಬಂಧಿಸಿ ಮೆಮೊ ಹೊರಡಿಸಲಾಗಿದೆ.

English summary
Accidents occur as police officers travel at night, resulting in the loss of precious lives. This is why the CID has ordered to restrict the night movement of its personnel, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X