ಪಿರಿಯಾಪಟ್ಟಣದಲ್ಲಿ ಚರ್ಚ್ ಮೇಲೆ ದಾಳಿ, ಯೇಸು ಪ್ರತಿಮೆಗೆ ಹಾನಿ
ಮೈಸೂರು, ಡಿಸೆಂಬರ್ 28: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿರುವ ಚರ್ಚ್ ಮೇಲೆ ಅಪರಿಚಿತರು ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಘಟನೆಯಲ್ಲಿ ಚರ್ಚ್‌ನಲ್ಲಿದ್ದ ಯೇಸುವಿನ ಪ್ರತಿಮೆಗೂ ಹಾನಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರಿಸ್‌ಮಸ್ ಹಬ್ಬದ ಎರಡು ದಿನಗಳ ನಂತರ ಪಿರಿಯಾಪಟ್ಟಣದಲ್ಲಿರುವ ಸೇಂಟ್ ಮೇರಿ ಚರ್ಚ್ ಅನ್ನು ಧ್ವಂಸಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚರ್ಚ್ ಮೇಲ ದಾಳಿ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಹಲವು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಚರ್ಚ್ ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನೂ ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಮಂಗಳವಾರ ಸಂಜೆ 6 ಗಂಟೆಗೆ ಚರ್ಚ್ ಸಿಬ್ಬಂದಿ ಹಾನಿಯಾಗಿರುವುದನ್ನು ಕಂಡು ತಕ್ಷಣ ಚರ್ಚ್‌ನ ಪಾದ್ರಿಯನ್ನು ಕರೆಸಿದ್ದಾರೆ ಬಳಿಕ ಘಟನೆ ತಿಳಿದಿದೆ. ಕಿಡಿಗೇಡಿಗಳು ಚರ್ಚ್‌ಗೆ ಪ್ರವೇಶಿಸಲು ಹಿಂದಿನ ಬಾಗಿಲನ್ನು ಮುರಿದಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ನಾವು ಹತ್ತಿರದ ಕ್ಯಾಮೆರಾಗಳಲ್ಲಿ ರೆಕಾರ್ಡ್ ಮಾಡಿದ ಸಿಸಿಟಿವಿ ದೃಶ್ಯಗಳಿಂದ ಸುಳಿವಿಗಾಗಿ ಶೋಧಿಸುತ್ತಿದ್ದೇವೆ. ಮೊದಲ ನೋಟದಲ್ಲಿ ಇದು ಕಳ್ಳತನದ ಘಟನೆ ಎಂದು ತೋರುತ್ತಿದೆ. ಆರೋಪಿಗಳು ಚರ್ಚ್‌ನ ಹೊರಗೆ ಇರಿಸಲಾಗಿದ್ದ ಒಂದು ಸಂಗ್ರಹಣೆ ಬಾಕ್ಸ್‌ನಿಂದ ಕೂಡ ಹಣವನ್ನು ಕದ್ದಿದ್ದಾರೆ ಎಂದು ಮೈಸೂರು ಎಸ್‌ಪಿ ಸೀಮಾ ಲಾಟ್ಕರ್ ಹೇಳಿದ್ದಾರೆ.

ಬಲವಂತದ ಧಾರ್ಮಿಕ ಮತಾಂತರದ ಆರೋಪದ ಮೇಲೆ ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಚರ್ಚುಗಳು ಮತ್ತು ಕ್ರಿಶ್ಚಿಯನ್ ಮಿಷನರಿಗಳು ಕೆಲವು ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳ ಕೋಪಕ್ಕೆ ತುತ್ತಾಗಿವೆ. ಕಳೆದ ಶುಕ್ರವಾರ ಉತ್ತರಾಖಂಡದ ಉತ್ತರಕಾಶಿಯಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮದ ಮೇಲೆ ಬಲವಂತದ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ದೊಣ್ಣೆಗಳಿಂದ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ದಾಳಿ ನಡೆಸಿದೆ.
ಉತ್ತರ ಪ್ರದೇಶದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಸೋಮವಾರ ಬಂಧಿಸಲಾಗಿದೆ. ಕರ್ನಾಟಕದಲ್ಲಿ ಈ ವರ್ಷದ ಆರಂಭದಲ್ಲಿಯೇ ಮತಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಅದು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಅನಧಿಕೃತ ಕ್ರಮ, ಬಲ, ಅನಗತ್ಯ ಪ್ರಭಾವ, ಒತ್ತಾಯ, ಆಮಿಷ ಅಥವಾ ಯಾವುದೇ ಮೋಸದ ವಿಧಾನದಿಂದ ಮದುವೆಯ ಭರವಸೆಯಿಂದ ಮತಾಂತರವಾಗುವುದನ್ನು ತಡೆಯುತ್ತದೆ.
ಉತ್ತರ ಪ್ರದೇಶದಂತಹ ಹಲವಾರು ಬಿಜೆಪಿ ಆಡಳಿತವಿರುವ ರಾಜ್ಯಗಳು ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯಲು ಕಾನೂನುಗಳನ್ನು ತಂದಿವೆ, ತರುತ್ತಿವೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವರ್ಷ ಇದೇ ಕಾನೂನನ್ನು ರಾಜ್ಯವು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications