ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿ ಆಸ್ತಿ ವಿವರ ಬಹಿರಂಗ
ಚಿಕ್ಕಬಳ್ಳಾಪುರ, ಮಾರ್ಚ್ 26: ಹಾಸನದ ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಉಮೇದುವಾರಿಕೆ ಸಲ್ಲಿಕೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ವಿವರವನ್ನು ಬಹಿರಂಗಪಡಿಸಿರುವ ಬೆನ್ನಿಗೆ ಇಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ.
2012-13 ನೇ ಸಾಲಿನಲ್ಲಿ ರಾಮನಗರ ಶಾಸಕ ಕುಮಾರಸ್ವಾಮಿ ಅವರ ಸಾಮಾನ್ಯ ಆದಾಯ 6.8 ಲಕ್ಷ ರೂ. ಗಳಿದ್ದರೆ ಕೃಷಿ ಆದಾಯ 12.2 ಲಕ್ಷ ರೂ. ಇದೆ. ಇನ್ನು ಅನಿತಾ ಕುಮಾರಸ್ವಾಮಿ ಅವರ ಆದಾಯ 1.2 ಕೋಟಿ ರೂ. ನಷ್ಟಿದೆ.

* ಕೈಯಲ್ಲಿರುವ ನಗದು: ಕುಮಾರಸ್ವಾಮಿ - 15 ಲಕ್ಷ ರೂ, ಅನಿತಾ ಕುಮಾರಸ್ವಾಮಿ - 40 ಲಕ್ಷ ರೂ.
* ಬ್ಯಾಂಕ್ ಮತ್ತಿತರ ಠೇವಣಿಗಳು: ಕುಮಾರಸ್ವಾಮಿ - 3.6 ಲಕ್ಷ ರೂ, ಅನಿತಾ ಕುಮಾರಸ್ವಾಮಿ - 8.4 ಕೋಟಿ ರೂ.
* ಬಾಂಡ್ ಹೂಡಿಕೆಗಳು: ಕುಮಾರಸ್ವಾಮಿ - 1.7 ಕೋಟಿ ರೂ, ಅನಿತಾ ಕುಮಾರಸ್ವಾಮಿ - 10 ಕೋಟಿ ರೂ.
* ಬೇರೆಯವರಿಗೆ ನೀಡಿರುವ ಸಾಲ: ಕುಮಾರಸ್ವಾಮಿ - 21 ಲಕ್ಷ ರೂ, ಅನಿತಾ ಕುಮಾರಸ್ವಾಮಿ - 11.3 ಕೋಟಿ ರೂ.
* ಚಿನ್ನಾಭರಣಗಳ ಮೌಲ್ಯ: ಕುಮಾರಸ್ವಾಮಿ - 25 ಲಕ್ಷ ರೂ, ಅನಿತಾ ಕುಮಾರಸ್ವಾಮಿ - 49 ಲಕ್ಷ ರೂ
* ಒಟ್ಟು ಚರಾಸ್ತಿ ಮೌಲ್ಯ: ಕುಮಾರಸ್ವಾಮಿ - 2.5 ಕೋ ರೂ, ಅನಿತಾ ಕುಮಾರಸ್ವಾಮಿ - 100 ಕೋಟಿ ರೂ
* ಶಿಕ್ಷಣ: ಕುಮಾರಸ್ವಾಮಿ - ಬಿಎ, ಜಯನಗರ ನ್ಯಾಷನಲ್ ಕಾಲೇಜ್, ಬೆಂಗಳೂರು 1978-79.
* ಪಡೆದಿರುವ ಸಾಲ: ಕುಮಾರಸ್ವಾಮಿ - 2.1 ಕೋಟಿ ರೂ, ಅನಿತಾ ಕುಮಾರಸ್ವಾಮಿ - 66 ಕೋಟಿ ರೂ.
* ಚಿನ್ನಾಭರಣ 750 ಗ್ರಾಂ 12.5 ಕೆಜಿ ಬೆಳ್ಳಿ ಸಾಮಗ್ರಿ ಮತ್ತು 4 ಕ್ಯಾರೆಟ್ ವಜ್ರಾಭರಣ: ಒಟ್ಟು ಮೊತ್ತ 25 ಲಕ್ಷ ರೂ.
ಹೆಚ್ಚಿನ ವಿವರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications