Covid Wave: ನಂದಿ ಬೆಟ್ಟದಲ್ಲಿ 2023 ಹೊಸ ವರ್ಷಾಚರಣೆಗಿಲ್ಲ ಅವಕಾಶ: ನಿರ್ಬಂಧ ಹೇರಿ ಡಿಸಿ ಆದೇಶ
ಚಿಕ್ಕಬಳ್ಳಾಪುರ, ಡಿಸೆಂಬರ್ 30: 2023ರ ಹೊಸ ವರ್ಷಾಚರಣೆಗೆ ನಂದಿಗಿರಿಧಾಮದ ಪ್ರವೇಶ ಬಂದ್ ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದು ನಂದಿಬೆಟ್ಟಕ್ಕೆ ಹೋಗಬೇಕೆಂದು ಯೋಚಿಸಿದ್ದ ಪ್ರವಾಸಿಗರ ಆಸೆಯನ್ನು ನಿರಾಸೆಗೊಳಿಸಿದೆ.
ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾಗಿರುವ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧವು ಶನಿವಾರ ಡಿಸೆಂಬರ್ 31 ಸಂಜೆ 6 ಗಂಟೆಯಿಂದ ಜನವರಿ 1 ಬೆಳಗ್ಗೆ 6 ಗಂಟೆವರೆಗೂ ಜಾರಿಯಲ್ಲಿರುವಂತೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಎನ್.ಎಂ.ನಾಗರಾಜ್ ಹೇಳಿದ್ದಾರೆ.
ಸದ್ಯ ಎಲ್ಲೆಡೆ ಕೊರೊನಾ ಹೆಚ್ಚಾಗುತ್ತಿದೆ. ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ನಿಯಮಗಳ ಉಲ್ಲಂಘನೆ, ಸೋಂಕು ಹೆಚ್ಚಾಗಬಾರದೆಂದು ಉದ್ದೇಶ ಹಾಗೂ ಮದ್ಯಪಾನ ಮಾಡಿ ವಾಹನಗಳ ಚಾಲನೆ ಈ ವೇಳೆ ಹೆಚ್ಚಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಇರುವುದರಿಂದ ಸಾರ್ವಜನಿಕ ಪ್ರವೇಶಕ್ಕೆ ತಡೆ ನೀಡಲಾಗಿದೆ.

ಆದೇಶದಲ್ಲಿ ನಂದಿಗಿರಿಧಾಮದಲ್ಲಿ ಜನವರಿ 1ರ ಸಂಭ್ರಮಾಚರಣೆಗೆಂದು ಮುನ್ನ ದಿನ ಡಿಸೆಂಬರ್ 31ರಂದು ರೂಮ್ ಬುಕಿಂಗ್ ಮಾಡುತ್ತಾರೆ. ಆದರೆ ಈ ಭಾರಿ ಅದನ್ನು ರದ್ದುಗೊಳಿಸಲಾಗಿದೆ. ಜೊತೆಗೆ ನಂದಿ ಬೆಟ್ಟದ ಸುತ್ತಮುತ್ತಲೂ ಪೊಲೀಸ್ ಬಿಗಿ ಬಂದೋಬಸ್ ಕೈಗೊಳ್ಳಲು ಸೂಚಿಸಲಾಗಿದೆ.
ಮೋಜು, ಮಸ್ತಿಗೆ ಸರ್ಕಾರ ಬ್ರೇಕ್
ಕೊರೊನಾ ಸೋಂಕು ಸಂಪೂರ್ಣವಾಗಿ ತಗ್ಗಿದೆ ಎಂದು ನಂಬಿಕೊಂಡಿದ್ದ ಜನ ಹೊಸ ವರ್ಷವನ್ನು ರಾತ್ರಿಯಿಡಿ ಕುಣಿದು ಕುಪ್ಪಳಿಸಿ ಅದ್ಧೂರಿಯಾಗಿ ಸ್ವಾಗಿತಸಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಚೀನಾ, ಜಪಾನ್ ಮುಂತಾದ ದೇಶಗಳ ಪ್ರವಾಸಿಗರಿಂದ ಭಾರತದಲ್ಲಿ ಹೆಚ್ಚಾಗಿದೆ. ಅದರ ಪ್ರಭಾವ ಕರ್ನಾಟಕ ಮುಖ್ಯವಾಗಿ ಬೆಂಗಳೂರಿನ ಮೇಲೂ ಆಗಿದೆ. ಈ ಕಾರಣದಿಂದ ಪ್ರಸಕ್ತ ವರ್ಷ ನಂದಿ ಗಿರಿಧಾಮದಲ್ಲಿ ಸಂಭ್ರಮಾಚರಣೆ, ಮೋಜು ಮಸ್ತಿಗೆ ಸರ್ಕಾರ ಬ್ರೇಕ್ ಹಾಕಿದೆ. ಸಾಲದೆಂಬಂತೆ ಕೋವಿಡ್ ಭೀತಿಯಿಂದ ಸರ್ಕಾರ ಪಾರ್ಟಿ ಹೋಟೆಲ್, ರೆಸಾರ್ಟ್, ಇನ್ನಿತರ ಜನದಟ್ಟಣೆಯ ಪ್ರದೇಶಗಳಲ್ಲಿ ನಿಯಮ ಹೇರಿದೆ.

ಜಿಲ್ಲಾಧಿಕಾರಿಗಳ ಆದೇದಿಂದಾಗಿ ಹಲವರು ಯೋಜನೆಗಳು ಬದಲಾಗಿವೆ. ನಂದಿ ಗಿರಿಧಾಮ ಬದಲಾಗಿ ಅಕ್ಕಪಕ್ಕದ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇಗಳಿಗೆ ಹೊಸ ವರ್ಷಾಚರಣೆ ಸ್ಥಳಾಂತಗೊಂಡಿವೆ. ಕೆಲವೆಡೆ ವಾರಕ್ಕೂ ಮೊದಲೇ ರೂಮ್‌ಗಳನ್ನು ಬುಕ್ ಮಾಡಿ ಕಾಯ್ದಿರಿಸಲಾಗಿದೆ.
ನಂದಿ ಗಿರಧಾಮ ಸುತ್ತಮುತ್ತಲಿನ ಹೋಟೆಲ್‌ಗಳಲ್ಲಿ ಮೋಜು, ಮಸ್ತಿ ಮಾಡಲು ರಾತ್ರಿ 11.30ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ನೀತಿ ನಿಯಮ ಉಲ್ಲಂಘಿಸಿದರೆ ಅಂತಹ ತಪ್ಪಿತಸ್ಥರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್. ನಾಗೇಶ ಮುನ್ನೆಚ್ಚರಿಕೆ ನೀಡಿದ್ದಾರೆ.












Click it and Unblock the Notifications